Kannada News  /  Entertainment  /  Rakhi Sawant Husband Adil Khan Durrani Arrested
ರಾಖಿ ಸಾವಂತ್‌ ಪತಿ ಆದಿಲ್‌ ಖಾನ್‌ ಬಂಧನ
ರಾಖಿ ಸಾವಂತ್‌ ಪತಿ ಆದಿಲ್‌ ಖಾನ್‌ ಬಂಧನ (PC: viralbhayani)

Rakhi Sawant Husband Arrested: ಕೈ ತುತ್ತು ತಿನ್ನಿಸಿ ಪತಿ ಆದಿಲ್‌ ಖಾನ್‌ನನ್ನು ಅರೆಸ್ಟ್‌ ಮಾಡಿಸಿದ ರಾಖಿ ಸಾವಂತ್‌..!

07 February 2023, 16:28 ISTHT Kannada Desk
07 February 2023, 16:28 IST

ನಾನು ಅವನಿಗೆ ಮನೆಯಲ್ಲಿ ಅಡುಗೆ ಮಾಡಿ ತಿನ್ನಿಸುತ್ತಿದ್ದೆ, ಶತ್ರುಗಳು ಮನೆಗೆ ಬಂದಾಗ ಕೂಡಾ ನಾವು ಅವರಿಗೆ ಊಟ ನೀಡಿ ಕಳಿಸುತ್ತೇವೆ. ಇವತ್ತು ಆದಿಲ್‌ಗೆ ಕೊನೆಯ ತುತ್ತು ತಿನ್ನಿಸಿದ್ದೇನೆ. ಆದಿಲ್‌ ನನ್ನ‌ ಪತಿ. ಆತನನ್ನು ಕೊನೆಯವರೆಗೂ ಪ್ರೀತಿಸುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಆತನನ್ನು ಕ್ಷಮಿಸುವುದಿಲ್ಲ

ಬಾಲಿವುಡ್‌ ನಟಿ ರಾಖಿ ಸಾವಂತ್‌ , ತಾಯಿಯ ಅಗಲಿಕೆ ನೋವಿನಿಂದ ಹೊರ ಬರುತ್ತಿದ್ದಾರೆ. ಈ ನೋವಿನಲ್ಲೇ ಅವರು ತಮ್ಮ ಪತಿ ಆದಿಲ್‌ ಖಾನ್‌ ದುರಾನಿ ವಿರುದ್ಧ ಗರಂ ಆಗಿದ್ದರು. ಆದಿಲ್‌ ತನಗೆ ಮೋಸ ಮಾಡುತ್ತಿದ್ದು ಬೇರೊಬ್ಬ ಹುಡುಗಿ ಜೊತೆ ಅಫೇರ್‌ ಇಟ್ಟುಕೊಂಡಿದ್ದಾನೆ ಎಂದು ದೂರಿದ್ದರು. ಇದೀಗ ರಾಖಿ, ಪೊಲೀಸರಿಗೆ ದೂರು ನೀಡಿದ್ದು ಆದಿಲ್‌ ಖಾನ್‌ ದುರಾನಿಯನ್ನು ಬಂಧಿಸಿದ್ದಾರೆ ಎನ್ನಲಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಬಿಗ್ ಬಾಸ್ ಮರಾಠಿಯಲ್ಲಿ ಭಾಗವಹಿಸಿದ್ದಕ್ಕಾಗಿ ಪಡೆದ 10 ಲಕ್ಷ ರೂಪಾಯಿ ಹಣವನ್ನು ಆಸ್ಪತ್ರೆಯಲ್ಲಿದ್ದ ತನ್ನ ತಾಯಿ ಜಯ ಸಾವಂತ್ ಅವರ ಆರೋಗ್ಯಕ್ಕಾಗಿ ಖರ್ಚು ಮಾಡುವಂತೆ ಆದಿಲ್ ಅವರನ್ನು ಕೇಳಿಕೊಂಡಿದ್ದೆ. ಆದರೆ ಆದಿಲ್‌ ಮಾತ್ರ ಆ ಹಣವನ್ನು ತನ್ನ ತಾಯಿ ಆರೋಗ್ಯಕ್ಕೆ ವ್ಯಯಿಸದೆ, ತನ್ನ ವೈಯಕ್ತಿಕ ಉದ್ಧೇಶಕ್ಕೆ ಬಳಸಿಕೊಂಡಿದ್ದಾನೆ. ಸರಿಯಾಗಿ ಚಿಕಿತ್ಸೆ ದೊರೆಯದೆ ನನ್ನ ತಾಯಿ ಸಾವನ್ನಪ್ಪಿದ್ದಾರೆ. ನನ್ನ ತಾಯಿ ಸಾವಿಗೆ ಆದಿಲ್‌ ಖಾನ್‌ ದುರ್ರಾನಿಯೇ ಕಾರಣ ಎಂದು ರಾಖಿ ಸಾವಂತ್‌ ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಗಳವಾರ ಆದಿಲ್‌ನನ್ನು ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಅದಕ್ಕೂ ಮುನ್ನ ರಾಖಿ ಸಾವಂತ್‌ ಸೋಮವಾರ ರಾತ್ರಿ ಪತಿ ಜೊತೆ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ್ದಾರೆ. ತಮ್ಮ ಪತಿಗೆ ಊಟ ತಿನ್ನಿಸಿ ಕೈ ತುತ್ತು ತಿನ್ನಿಸಿದ್ದಾರೆ.

ನಂತರ ಹೊರ ಬಂದು ಮಾಧ್ಯಮಗಳ ಬಳಿ ಮಾತನಾಡಿದ ರಾಖಿ ಸಾವಂತ್‌, ''ನಾನು ನಾಟಕವಾಡುತ್ತಿಲ್ಲ. ಆದಿಲ್‌ ನನ್ನ ಜೀವನವನ್ನು ಹಾಳು ಮಾಡಿದ್ದಾನೆ. ನನಗೆ ದೈಹಿಕ ಹಿಂಸೆ ನೀಡಿದ್ದಾನೆ. ನನ್ನ ಹಣ ದೋಚಿದ್ದಾನೆ. ಇದಕ್ಕೆ ನನ್ನ ಬಳಿ ಎಲ್ಲಾ ಸಾಕ್ಷಿ ಇವೆ. ಆದಿಲ್‌ ನನ್ನನ್ನು ಕ್ಷಮೆ ಕೇಳಲು ಬಂದಿದ್ದರು. ಆದರೆ ನಾನು ಅವನನ್ನು ಎಂದಿಗೂ ಕ್ಷಮಿಸುವುದಿಲ್ಲ. ನಾನು ಅವನಿಗೆ ಮನೆಯಲ್ಲಿ ಅಡುಗೆ ಮಾಡಿ ತಿನ್ನಿಸುತ್ತಿದ್ದೆ, ಶತ್ರುಗಳು ಮನೆಗೆ ಬಂದಾಗ ಕೂಡಾ ನಾವು ಅವರಿಗೆ ಊಟ ನೀಡಿ ಕಳಿಸುತ್ತೇವೆ. ಇವತ್ತು ಆದಿಲ್‌ಗೆ ಕೊನೆಯ ತುತ್ತು ತಿನ್ನಿಸಿದ್ದೇನೆ. ಆದಿಲ್‌ ನನ್ನ‌ ಪತಿ. ಆತನನ್ನು ಕೊನೆಯವರೆಗೂ ಪ್ರೀತಿಸುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಆತನನ್ನು ಕ್ಷಮಿಸುವುದಿಲ್ಲ'' ಎಂದು ರಾಖಿ ಸಾವಂತ್‌ ಕಣ್ಣೀರಿಡುತ್ತಾ ಹೇಳಿಕೊಂಡಿದ್ದಾರೆ.

ಮಂಗಳವಾರ ಬೆಳಗ್ಗೆ ಆದಿಲ್‌ ನನ್ನ ಮನೆಗೆ ಬಂದು ನನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿದರು. ಕೂಡಲೇ ಪೊಲೀಸರಿಗೆ ಕರೆ ಮಾಡಿ ಅವರನ್ನು ಅರೆಸ್ಟ್‌ ಮಾಡಿಸಿದ್ದೇನೆ ಎಂದು ರಾಖಿ ಸಾವಂತ್‌ ಹೇಳಿದ್ದಾರೆ.

ಆದಿಲ್‌ಗೆ ಅಫೇರ್‌ ಇದೆ ಎಂದು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದ ನಟಿ

ಆದಿಲ್‌ ಖಾನ್‌ ನನ್ನ ಮೂಲಕ ಫೇಮಸ್‌ ಆಗಲು ಆಸೆ ಪಡುತ್ತಿದ್ದಾನೆ. ಅದರೆ ದಯವಿಟ್ಟು ಆತನನ್ನು ಯಾರೂ ಇಂಟರ್‌ವ್ಯೂ ಮಾಡಬೇಡಿ ಎಂದು ರಾಖಿ ಇತ್ತೀಚೆಗೆ ಮಾಧ್ಯಮಗಳಿಗೆ ಮನವಿ ಮಾಡಿದ್ದರು. ''ನನ್ನ ವೈವಾಹಿಕ ಜೀವನ ಅಪಾಯದಲ್ಲಿದೆ. ಆದಿಲ್ ಬೇರೆ ಹುಡುಗಿಗೆ ಹತ್ತಿರವಾಗುತ್ತಿದ್ದಾನೆ, ಆ ಹುಡುಗಿಯನ್ನು ಮರೆತುಬಿಡುತ್ತೇನೆ ಎಂದು ಆದಿಲ್‌ ಕುರಾನ್‌ ಮೇಲೆ ಆಣೆ ಮಾಡಿ ಹೇಳಿದ್ದನು. ಆದರೆ ಅವನು ತಪ್ಪು ಮಾಡಿದ್ದಾನೆ. ನುಡಿದಂತೆ ನಡೆಯುತ್ತಿಲ್ಲ, ಆದಿಲ್ ದೊಡ್ಡ ವಂಚಕ. ಆದಿಲ್‌ಗೆ ತನ್ನೊಂದಿಗೆ ಅಫೇರ್‌ ಇದೆ ಎಂದು ಹೇಳುವ ಆ ಹುಡುಗಿ ತನ್ನ ಬಳಿ ಸಾಕ್ಷಿ ಕೂಡಾ ಇದೆ ಎನ್ನುತ್ತಿದ್ದಾಳೆ. ಇದೇ ವಿಚಾರವಾಗಿ ಬ್ಲ್ಯಾಕ್‌ಮೇಲ್ ಕೂಡಾ ಮಾಡುತ್ತಿದ್ದಾಳೆ.

ದಯವಿಟ್ಟು ಆದಿಲ್‌ನನ್ನು ಯಾರೂ ಇಂಟರ್‌ವ್ಯೂ ಮಾಡಬೇಡಿ. ಏಕೆಂದರೆ ಅವನು ನನ್ನನ್ನು ಬಳಸಿಕೊಂಡು ಸಿನಿಮಾ ಇಂಡಸ್ಟ್ರಿಗೆ ಬರಲು ಆಸೆ ಪಡುತ್ತಿದ್ದಾನೆ. ನನ್ನ ಹಾಗೂ ಆದಿಲ್‌ ಮಧ್ಯೆ ಬರಬೇಡ ಎಂದು ಮಾಧ್ಯಮಗಳ ಮೂಲಕವೇ ನಾನು ಆ ಹುಡುಗಿಗೆ ಎಚ್ಚರಿಸಲು ಇಷ್ಟಪಡುತ್ತೇನೆ. ಆಕೆ ಹೆಣ್ಣಾಗಿದ್ದು ಇನ್ನೊಬ್ಬ ಹೆಣ್ಣಿನ ಬದುಕನ್ನು ಹಾಳು ಮಾಡುವುದು ತಪ್ಪು. ಆದಿಲ್, ಆ ಹುಡುಗಿಯಿಂದ ದೂರ ಇರುವಂತೆ ನಿನಗೂ ಎಚ್ಚರಿಕೆ ನೀಡುತ್ತಿದ್ದೇನೆ'' ಎಂದು ರಾಖಿ ಆವೇಶದಿಂದ ಹೇಳಿದ್ದರು.