ಕನ್ನಡ ಸುದ್ದಿ  /  ಮನರಂಜನೆ  /  Sherlyn Chopra-rakhi Sawant War: ಸಾಜಿದ್‌ ಖಾನ್‌ ವಿಚಾರಕ್ಕೆ ಕಿತ್ತಾಟ..ಶೆರ್ಲಿನ್‌ ಛೋಪ್ರಾ ವಿರುದ್ಧ ದೂರು ನೀಡಿದ ರಾಖಿ

Sherlyn Chopra-Rakhi Sawant war: ಸಾಜಿದ್‌ ಖಾನ್‌ ವಿಚಾರಕ್ಕೆ ಕಿತ್ತಾಟ..ಶೆರ್ಲಿನ್‌ ಛೋಪ್ರಾ ವಿರುದ್ಧ ದೂರು ನೀಡಿದ ರಾಖಿ

''ಕಷ್ಟ ಪಟ್ಟು ದೇಹ ಕರಗಿಸಿಕೊಳ್ಳಲು, ಕೆಲಸ ಮಾಡಲು ಆಕೆಯಿಂದ ಸಾಧ್ಯವಿಲ್ಲ. ಆಕೆಗೆ ಪತಿ ಹಾಗೂ ಬಾಯ್‌ ಫ್ರೆಂಡ್‌ ಎಂದರೆ ಅದು ಟೈಂ ಪಾಸ್‌ ವಿಚಾರ. ಧೈರ್ಯ ಇದ್ದರೆ ನನ್ನ ಮುಂದೆ ನಿಂತು ಮಾತನಾಡಲಿ'' ಎಂದು ಶೆರ್ಲಿನ್‌ ಛೋಪ್ರಾ, ರಾಖಿ ಸಾವಂತ್‌ಬಗ್ಗೆ ಕಿಡಿ ಕಾರಿದ್ದರು.

ಶೆರ್ಲಿನ್‌ ಛೋಪ್ರಾ ವಿರುದ್ಧ ದೂರು ದಾಖಲಿಸಿದ ರಾಖಿ ಸಾವಂತ್
ಶೆರ್ಲಿನ್‌ ಛೋಪ್ರಾ ವಿರುದ್ಧ ದೂರು ದಾಖಲಿಸಿದ ರಾಖಿ ಸಾವಂತ್

ರಾಖಿ ಸಾವಂತ್‌, ತಮ್ಮ ದಯಾಳುತನಕ್ಕೂ ಹೆಸರಾಗಿದ್ದಾರೆ, ಇಲ್ಲಸಲ್ಲದ ಕಮೆಂಟ್‌ ಮಾಡಿ ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುವ ವಿಚಾರಕ್ಕೂ ಅಷ್ಟೇ ಫೇಮಸ್‌ ಆಗಿದ್ದಾರೆ. ಹಾಗೇ ಶೆರ್ಲಿನ್‌ ಛೋಪ್ರಾ ಕೂಡಾ ಆಗ್ಗಾಗ್ಗೆ ಏನಾದರೂ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಸದ್ಯಕ್ಕೆ ಹಿಂದಿ ಬಿಗ್‌ಬಾಸ್‌ 16ರ ಸ್ಪರ್ಧಿ ಸಾಜಿದ್‌ ಖಾನ್‌ ವಿಚಾರಕ್ಕೆ ರಾಖಿ ಹಾಗೂ ಶೆರ್ಲಿನ್‌ ಇಬ್ಬರ ನಡುವೆ ವಾರ್‌ ನಡೆಯುತ್ತಿದ್ದು, ಇದು ಶೆರ್ಲಿನ್‌ ವಿರುದ್ಧ ರಾಖಿ ದೂರು ನೀಡುವರೆಗೂ ಮುಂದುವರೆದಿದೆ.

ಬಾಲಿವುಡ್‌ ನಟ, ನಿರ್ದೇಶಕ ಸಾಜಿದ್‌ ಖಾನ್‌ ಹೆಸರು ಈ ಹಿಂದೆ #MeToo ಪ್ರಕರಣದಲ್ಲಿ ಕೇಳಿ ಬಂದಿತ್ತು. ನಟಿ, ಮಾಡೆಲ್‌ ಶೆರ್ಲಿನ್‌ ಛೋಪ್ರಾ ಕೂಡಾ ಇತ್ತೀಚೆಗೆ ಆತನ ವಿರುದ್ಧ ದೂರು ದಾಖಲಿಸಿದ್ದರು. ಆದರೆ ರಾಖಿ ಸಾವಂತ್‌ ಮಾತ್ರ 'ಸಾಜಿದ್‌ ಖಾನ್‌ ಬಹಳ ಒಳ್ಳೆ ವ್ಯಕ್ತಿ, ಸುಖಾ ಸುಮ್ಮನೆ ಶೆರ್ಲಿನ್‌ ಛೋಪ್ರಾ ಆತನ ವಿರುದ್ಧ ದೂರುತ್ತಿದ್ದಾರೆ' ಎಂದಿದ್ದರು. ಅಷ್ಟೇ ಅಲ್ಲ, ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಬಂಧನವಾದಾಗ ಶೆರ್ಲಿನ್‌ ಛೋಪ್ರಾ ರಾಜ್‌ ವಿರುದ್ಧ ಮಾತನಾಡಿದ್ದರು. ಆಗ ಕೂಡಾ ರಾಖಿ, ರಾಜ್‌ ಕುಂದ್ರಾ ಪರ ವಹಿಸಿಕೊಂಡು ಮಾತನಾಡಿದ್ದರು. ಈಗ ಸಾಜಿದ್‌ ಖಾನ್‌ ಪರ ವಹಿಸಿಕೊಂಡು ಮಾತನಾಡಿದ್ದಕ್ಕೆ ಶೆರ್ಲಿನ್‌ ಛೋಪ್ರಾ, ರಾಖಿ ವಿರುದ್ಧ ಕಿಡಿ ಕಾರಿದ್ದಾರೆ.

''ರಾಖಿ, ದೇಹ ಬೆಳೆಸಿಕೊಂಡು ಜಿಮ್‌ ಸುತ್ತಾಡುತ್ತಿದ್ದಾರೆ. ಕಷ್ಟ ಪಟ್ಟು ದೇಹ ಕರಗಿಸಿಕೊಳ್ಳಲು, ಕೆಲಸ ಮಾಡಲು ಆಕೆಯಿಂದ ಸಾಧ್ಯವಿಲ್ಲ. ಆಕೆಗೆ ಪತಿ ಹಾಗೂ ಬಾಯ್‌ ಫ್ರೆಂಡ್‌ ಎಂದರೆ ಅದು ಟೈಂ ಪಾಸ್‌ ವಿಚಾರ. ಧೈರ್ಯ ಇದ್ದರೆ ನನ್ನ ಮುಂದೆ ನಿಂತು ಮಾತನಾಡಲಿ' ಎಂದಿದ್ದರು. ಇದಕ್ಕೆ ಉತ್ತರಿಸಿದ್ದ ರಾಖಿ ಸಾವಂತ್‌,' ಶೆರ್ಲಿನ್‌ ಒಬ್ಬ ಪೋರ್ನ್‌ ಸ್ಟಾರ್‌, ಆಕೆಯ ಅನೇಕ ಫೋಟೋ ಹಾಗೂ ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ಲಭ್ಯವಿದೆ. ಆಕೆ ಸುಖಾ ಸುಮ್ಮನೆ ಪ್ರಭಾವಿ ವ್ಯಕ್ತಿಗಳನ್ನು ಬ್ಲಾಕ್‌ ಮೇಲ್‌ ಮಾಡುತ್ತಲೇ ಬಂದಿದ್ದಾರೆ. ಅಂತವರ ಬಳಿ ಹಣ ಕೀಳುವುದರಲ್ಲಿ ಅವರು ಬಹಳ ಫೇಮಸ್.‌ ಶೆರ್ಲಿನ್‌ ತಲೆಯಿಂದ ಕಾಲಿನವರೆಗೆ ಎಲ್ಲಾ ಭಾಗಕ್ಕೂ ಕಾಸ್ಮೆಟಿಕ್‌ ಸರ್ಜರಿ' ಮಾಡಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದರು.

ಟ್ರೆಂಡಿಂಗ್​ ಸುದ್ದಿ

ಇದೀಗ ರಾಖಿ ಸಾವಂತ್‌ ತಮ್ಮ ಲಾಯರ್‌ ಜೊತೆ ತೆರಳಿ ಮುಂಬೈನ ಓಶಿವಾರ ಪೊಲೀಸ್‌ ಠಾಣೆಯಲ್ಲಿ ಶೆರ್ಲಿನ್‌ ಛೋಪ್ರಾ ವಿರುದ್ಧ ದೂರು ಸಲ್ಲಿಸಿದ್ದಾರೆ. ''ಭಾರತದಲ್ಲಿ ಮಹಿಳೆಯರಿಗೆ ಉತ್ತಮ ಕಾನೂನು ವ್ಯವಸ್ಥೆ ಇದೆ. ಆದರೆ ಕೆಲವು ಮಹಿಳೆಯರು ಅದರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸಾಜಿದ್‌ ಖಾನ್‌ ಸದ್ಯಕ್ಕೆ ಬಿಗ್‌ ಬಾಸ್‌ ಮನೆಯಲ್ಲಿದ್ದಾರೆ. ಹೊರಗೆ ಏನಾಗುತ್ತಿದೆ ಎಂದು ಅವರಿಗೆ ಅರಿವಿಲ್ಲ. ಶೆರ್ಲಿನ್‌ ಛೋಪ್ರಾಗೆ ಸಾಜಿದ್‌ ಖಾನ್‌ನಿಂದ ಸಮಸ್ಯೆ ಆಗಿದ್ದಲ್ಲಿ ಇಷ್ಟು ವರ್ಷಗಳ ಕಾಲ ಏಕೆ ಸುಮ್ಮನಿದ್ದರು..? ಸಾಜಿದ್‌ ಖಾನ್‌, ರಿಯಾಲಿಟಿ ಶೋಗೆ ಹೋದಾಗಲೇ ಏಕೆ ಅವರು ಆರೋಪಿಸುತ್ತಿದ್ದಾರೆ..? ಶೆರ್ಲಿನ್‌ ಛೋಪ್ರಾಗೆ ಕೇವಲ ಪಬ್ಲಿಸಿಟಿ ಬೇಕು ಅಷ್ಟೇ. ನಾನು ಯಾರಿಗೂ ಹೆದರುವುದಿಲ್ಲ. ನಾನೊಬ್ಬ ಸಮಾಜ ಸೇವಕಿ, ಜನರಿಗಾಗಿ ನಾನು ಇಂದು ಶೆರ್ಲಿನ್‌ ಛೋಪ್ರಾ ವಿರುದ್ಧ ದೂರು ಸಲ್ಲಿಸುತ್ತಿದ್ದೇನೆ'' ಎಂದು ರಾಖಿ ಸಾವಂತ್‌ ಮಾಧ್ಯಮಗಳ ಮುಂದೆ ಶೆರ್ಲಿನ್‌ ಛೋಪ್ರಾ ವಿರುದ್ಧ ಕಿಡಿ ಕಾರಿದ್ದಾರೆ.