ಕನ್ನಡ ಸುದ್ದಿ  /  ಮನರಂಜನೆ  /  Rakhi Sawant Marriage: ಅಮ್ಮ ಆಸ್ಪತ್ರೆಯಲ್ಲಿ..ಮಗಳು ಮದುವೆ ಹಾಲ್‌ನಲ್ಲಿ..ಬಾಯ್‌ ಫ್ರೆಂಡ್‌ ಜೊತೆ ರಾಖಿ ಸೀಕ್ರೇಟ್‌ ಮದುವೆ!

Rakhi Sawant Marriage: ಅಮ್ಮ ಆಸ್ಪತ್ರೆಯಲ್ಲಿ..ಮಗಳು ಮದುವೆ ಹಾಲ್‌ನಲ್ಲಿ..ಬಾಯ್‌ ಫ್ರೆಂಡ್‌ ಜೊತೆ ರಾಖಿ ಸೀಕ್ರೇಟ್‌ ಮದುವೆ!

ಇಂದು ರಾಖಿ ಸಾವಂತ್‌, ಆದಿಲ್‌ನನ್ನು ಮದುವೆಯಾಗಿರುವುದಾಗಿ ಫೋಟೋದೊಂದಿಗೆ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ರಾಖಿ ಸಾವಂತ್‌ ಹಾಗೂ ಆದಿಲ್‌ ಸಿಂಪಲ್‌ ಡ್ರೆಸ್‌ನಲ್ಲೇ ಇದ್ದು ಇಬ್ಬರೂ ಹೂವಿನ ಹಾರ ಹಾಕಿಕೊಂಡಿದ್ದಾರೆ.

ರಾಖಿ ಸಾವಂತ್‌ ಮದುವೆ
ರಾಖಿ ಸಾವಂತ್‌ ಮದುವೆ

ತಮ್ಮ ಸಹ ನಟ-ನಟಿಯರ ಕಾಲೆಳೆಯುವ, ಮುಂಬೈ ಬೀದಿಗಳನ್ನು ಗುಡಿಸುವ, ಬಾಯ್‌ ಫ್ರೆಂಡ್‌ ಜೊತೆ ಸುತ್ತಾಡುವ ಫೋಟೋ, ವಿಡಿಯೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವುದರಲ್ಲಿ ರಾಖಿ ಸಾವಂತ್‌ ಬಹಳ ಫೇಮಸ್.‌ ಸಿನಿಮಾದಲ್ಲಿ ಹೆಚ್ಚಿನ ಅವಕಾಶಗಳು ಇಲ್ಲದಿದ್ದರೂ ರಾಖಿ ಸಾವಂತ್‌ ಇಂತದ್ದೇ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿರುತ್ತಾರೆ. 2 ದಿನಗಳ ಹಿಂದಷ್ಟೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮ್ಮನಿಗಾಗಿ ಪ್ರಾರ್ಥಿಸಿ ಎಂದು ವಿಡಿಯೋ ಮಾಡಿದ್ದ ರಾಖಿ ಸಾವಂತ್‌ ಇಂದು ತಮ್ಮ ಬಾಯ್‌ ಫ್ರೆಂಡ್‌ ಆದಿಲ್‌ ಖಾನ್‌ ದುರಾನಿಯನ್ನು ಮದುವೆ ಆಗಿ ಎಲ್ಲರಿಗೂ ಶಾಕ್‌ ಕೊಟ್ಟಿದ್ದಾರೆ.

2 ದಿನಗಳ ಹಿಂದಷ್ಟೇ ರಾಖಿ ಸಾವಂತ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕಣ್ಣೀರಿಡುತ್ತಾ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ''ನಿನ್ನೆ ರಾತ್ರಿ ನಾನು ಮರಾಠಿ ಬಿಗ್‌ ಬಾಸ್‌ನಿಂದ ಹೊರ ಬಂದಿದ್ದೇನೆ. ನನಗೆ ನಿಮ್ಮೆಲ್ಲರ ಆಶೀರ್ವಾದ ಬೇಕಾಗಿದೆ. ಅಮ್ಮನಿಗೆ ಆರೋಗ್ಯ ಸರಿ ಇಲ್ಲ, ದಯವಿಟ್ಟು ಅಮ್ಮನಿಗಾಗಿ ಪ್ರಾರ್ಥಿಸಿ, ಅಮ್ಮ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ಧಾರೆ. ಅಮ್ಮನಿಗೆ ಬ್ರೈನ್‌ ಟ್ಯೂಮರ್‌ ಇರುವ ವಿಚಾರ ಈಗಷ್ಟೇ ಗೊತ್ತಾಯ್ತು. ದಯವಿಟ್ಟು ಪ್ರತಿಯೊಬ್ಬರೂ ಅಮ್ಮನಿಗಾಗಿ ಪ್ರಯರ್‌ ಮಾಡಿ. ನಿಮ್ಮ ಹಾರೈಕೆಯಿಂದ ಅಮ್ಮ ಗುಣಮುಖರಾಗುತ್ತಾರೆ'' ಎಂದು ಮನವಿ ಮಾಡಿದ್ದರು. ಆಸ್ಪತ್ರೆ ಬೆಡ್‌ ಮೇಲೆ ಮಲಗಿರುವ ತಾಯಿಯನ್ನು ಕೂಡಾ ವಿಡಿಯೋದಲ್ಲಿ ತೋರಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ಆದರೆ ಇಂದು ರಾಖಿ ಸಾವಂತ್‌, ಆದಿಲ್‌ನನ್ನು ಮದುವೆಯಾಗಿರುವುದಾಗಿ ಫೋಟೋದೊಂದಿಗೆ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ರಾಖಿ ಸಾವಂತ್‌ ಹಾಗೂ ಆದಿಲ್‌ ಸಿಂಪಲ್‌ ಡ್ರೆಸ್‌ನಲ್ಲೇ ಇದ್ದು ಇಬ್ಬರೂ ಹೂವಿನ ಹಾರ ಹಾಕಿಕೊಂಡಿದ್ದಾರೆ. ಜೊತೆಗೆ ಮ್ಯಾರೇಜ್‌ ಸರ್ಟಿಫಿಕೇಟ್‌ ಹಿಡಿದು ನಿಂತಿದ್ದಾರೆ. ರಾಖಿ ಸಾವಂತ್‌ ನಡೆ, ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ತಾಯಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುವಾಗಿ ನಿಮಗೆ ಮದುವೆ ಅವಶ್ಯಕತೆ ಇತ್ತೇ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವರು ರಾಖಿ ಪರ ಮಾತನಾಡಿದ್ದಾರೆ. ಬಹುಶ: ಅಮ್ಮನ ಕೊನೆಯ ಆಸೆ ಈಡೇರಿಸಲು ರಾಖಿ ಈ ನಿರ್ಧಾರ ಮಾಡಿರಬಹುದು ಎನ್ನುತ್ತಿದ್ದಾರೆ.

ಇತ್ತೀಚೆಗೆ ಶೆರ್ಲಿನ್‌ ಚೋಪ್ರಾ ಜೊತೆ ಕಿತ್ತಾಡಿಕೊಂಡಿದ್ದ ರಾಖಿ ಸಾವಂತ್‌

ರಾಖಿ ಸಾವಂತ್‌ ಕೆಲವು ದಿನಗಳ ಹಿಂದಷ್ಟೇ ಬಾಲಿವುಡ್‌ ನಟಿ ಶೆರ್ಲಿನ್‌ ಚೋಪ್ರಾ ಜೊತೆ ಕಿರಿ ಕಿರಿ ಮಾಡಿಕೊಂಡಿದ್ದರು. ಬಾಲಿವುಡ್‌ ನಟ, ನಿರ್ದೇಶಕ ಸಾಜಿದ್‌ ಖಾನ್‌ ಹೆಸರು ಈ ಹಿಂದೆ #MeToo ಪ್ರಕರಣದಲ್ಲಿ ಕೇಳಿ ಬಂದಿತ್ತು. ನಟಿ, ಮಾಡೆಲ್‌ ಶೆರ್ಲಿನ್‌ ಛೋಪ್ರಾ ಇತ್ತೀಚೆಗೆ ಆತನ ವಿರುದ್ಧ ದೂರು ದಾಖಲಿಸಿದ್ದರು. ಆದರೆ ರಾಖಿ ಸಾವಂತ್‌ ಮಾತ್ರ 'ಸಾಜಿದ್‌ ಖಾನ್‌ ಬಹಳ ಒಳ್ಳೆ ವ್ಯಕ್ತಿ, ಸುಖಾ ಸುಮ್ಮನೆ ಶೆರ್ಲಿನ್‌ ಛೋಪ್ರಾ ಆತನ ವಿರುದ್ಧ ದೂರುತ್ತಿದ್ದಾರೆ' ಎಂದಿದ್ದರು. ಅಷ್ಟೇ ಅಲ್ಲ, ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಬಂಧನವಾದಾಗ ಶೆರ್ಲಿನ್‌ ಛೋಪ್ರಾ ರಾಜ್‌ ವಿರುದ್ಧ ಮಾತನಾಡಿದ್ದರು. ಆಗ ಕೂಡಾ ರಾಖಿ, ರಾಜ್‌ ಕುಂದ್ರಾ ಪರ ಮಾತನಾಡಿದ್ದರು.

ರಾಖಿ ಸಾವಂತ್‌ ಇನ್‌ಸ್ಟಾಗ್ರಾಮ್‌ ಸ್ಟೋರಿ
ರಾಖಿ ಸಾವಂತ್‌ ಇನ್‌ಸ್ಟಾಗ್ರಾಮ್‌ ಸ್ಟೋರಿ

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಖಿ ಸಾವಂತ್‌, ತಮ್ಮ ಲಾಯರ್‌ ಜೊತೆ ತೆರಳಿ ಮುಂಬೈನ ಓಶಿವಾರ ಪೊಲೀಸ್‌ ಠಾಣೆಯಲ್ಲಿ ಶೆರ್ಲಿನ್‌ ಛೋಪ್ರಾ ವಿರುದ್ಧ ದೂರು ಸಲ್ಲಿಸಿದ್ದರು. ''ಭಾರತದಲ್ಲಿ ಮಹಿಳೆಯರಿಗೆ ಉತ್ತಮ ಕಾನೂನು ವ್ಯವಸ್ಥೆ ಇದೆ. ಆದರೆ ಕೆಲವು ಮಹಿಳೆಯರು ಅದರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸಾಜಿದ್‌ ಖಾನ್‌ ಸದ್ಯಕ್ಕೆ ಬಿಗ್‌ ಬಾಸ್‌ ಮನೆಯಲ್ಲಿದ್ದಾರೆ. ಹೊರಗೆ ಏನಾಗುತ್ತಿದೆ ಎಂದು ಅವರಿಗೆ ಅರಿವಿಲ್ಲ. ಶೆರ್ಲಿನ್‌ ಛೋಪ್ರಾಗೆ ಸಾಜಿದ್‌ ಖಾನ್‌ನಿಂದ ಸಮಸ್ಯೆ ಆಗಿದ್ದಲ್ಲಿ ಇಷ್ಟು ವರ್ಷಗಳ ಕಾಲ ಏಕೆ ಸುಮ್ಮನಿದ್ದರು..? ಸಾಜಿದ್‌ ಖಾನ್‌, ರಿಯಾಲಿಟಿ ಶೋಗೆ ಹೋದಾಗಲೇ ಏಕೆ ಅವರು ಆರೋಪಿಸುತ್ತಿದ್ದಾರೆ..? ಶೆರ್ಲಿನ್‌ ಛೋಪ್ರಾಗೆ ಕೇವಲ ಪಬ್ಲಿಸಿಟಿ ಬೇಕು ಅಷ್ಟೇ. ನಾನು ಯಾರಿಗೂ ಹೆದರುವುದಿಲ್ಲ. ನಾನೊಬ್ಬ ಸಮಾಜ ಸೇವಕಿ, ಜನರಿಗಾಗಿ ನಾನು ಇಂದು ಶೆರ್ಲಿನ್‌ ಛೋಪ್ರಾ ವಿರುದ್ಧ ದೂರು ಸಲ್ಲಿಸುತ್ತಿದ್ದೇನೆ'' ಎಂದಿದ್ದರು.