ಕನ್ನಡ ಸುದ್ದಿ  /  ಮನರಂಜನೆ  /  Rakhi Sawant Visited Dargah: ಮುಂಬೈನ ದರ್ಗಾಗೆ ಭೇಟಿ ನೀಡಿದ ನವ ದಂಪತಿ..ಅಮ್ಮನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ರಾಖಿ ಸಾವಂತ್‌

Rakhi Sawant Visited Dargah: ಮುಂಬೈನ ದರ್ಗಾಗೆ ಭೇಟಿ ನೀಡಿದ ನವ ದಂಪತಿ..ಅಮ್ಮನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ರಾಖಿ ಸಾವಂತ್‌

ಇತ್ತೀಚೆಗೆ ಮದುವೆಯಾಗಿದ್ದೇನೆ. ಎಲ್ಲಾ ಒಳ್ಳೆಯದಾಗಲಿ ಎಂದು ಪತಿಯೊಂದಿಗೆ ದರ್ಗಾಗೆ ಬಂದಿದ್ದೇನೆ. ನನಗೆ ಎಲ್ಲರೂ ಆಶೀರ್ವದಿಸಿ, ನನ್ನ ತಾಯಿ ಆರೋಗ್ಯಕ್ಕೆ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ, ಅವರು ಶೀಘ್ರ ಗುಣಮುಖರಾಗಲಿ ಎಂದು ನೀವು ಕೂಡಾ ಹಾರೈಸಿ ಎಂದು ರಾಖಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ

ಪತಿಯೊಂದಿಗೆ ದರ್ಗಾಗೆ ಭೇಟಿ ನೀಡಿದ ರಾಖಿ ಸಾವಂತ್
ಪತಿಯೊಂದಿಗೆ ದರ್ಗಾಗೆ ಭೇಟಿ ನೀಡಿದ ರಾಖಿ ಸಾವಂತ್ (PC: rakhisawant2511 Instagram)

ರಾಖಿ ಸಾವಂತ್‌ ಮದುವೆ ವಿವಾದ ಸುಖಾಂತ್ಯಗೊಂಡಿದೆ. ಆದಿಲ್‌ ಖಾನ್‌ ದುರಾನಿ, ತಾವು ರಾಖಿಯನ್ನು ಮದುವೆಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಒಂದೆಡೆ ರಾಖಿ ಖುಷಿಯಲ್ಲಿದ್ದರೆ, ಮತ್ತೊಂದೆಡೆ ತಾಯಿಯ ಆರೋಗ್ಯ ಸಮಸ್ಯೆ ಅವರಿಗೆ ಬೇಸರ ಉಂಟು ಮಾಡಿದೆ. ರಾಖಿ ಸಾವಂತ್‌ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ರಾಖಿ ಸಾವಂತ್‌ ಪತಿ ಆದಿಲ್‌ ಜೊತೆ ದರ್ಗಾಕ್ಕೆ ಭೇಟಿ ನೀಡಿ, ಅಮ್ಮನ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮುಂಬೈನ ಖ್ವಾಜಾ ಗರೀಬ್‌ ನವಾಜ್‌ ದರ್ಗಾಗೆ ರಾಖಿ ತನ್ನ ಪತಿ ಆದಿಲ್‌ ಜೊತೆ ಭೇಟಿ ನೀಡಿದ್ದಾರೆ. ದರ್ಗಾಗೆ ಅರ್ಪಿಸಲು ಸಾಮಗ್ರಿಗಳನ್ನು ಖರೀದಿಸಿದ ರಾಖಿ, ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ''ಇತ್ತೀಚೆಗೆ ಮದುವೆಯಾಗಿದ್ದೇನೆ. ಎಲ್ಲಾ ಒಳ್ಳೆಯದಾಗಲಿ ಎಂದು ಪತಿಯೊಂದಿಗೆ ದರ್ಗಾಗೆ ಬಂದಿದ್ದೇನೆ. ನನಗೆ ಎಲ್ಲರೂ ಆಶೀರ್ವದಿಸಿ, ನನ್ನ ತಾಯಿ ಆರೋಗ್ಯಕ್ಕೆ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ, ಅವರು ಶೀಘ್ರ ಗುಣಮುಖರಾಗಲಿ ಎಂದು ನೀವು ಕೂಡಾ ಹಾರೈಸಿ'' ಎಂದು ರಾಖಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇದೇ ವೇಳೆ ರಾಖಿ ರೀಲ್ಸ್‌ ಮಾಡಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ''ನಾನು ಜೀವನದಲ್ಲಿ ದೊಡ್ಡ ಖುಷಿಯನ್ನು ಬಯಸುವುದಿಲ್ಲ, ನನಗೆ ಚಿಕ್ಕ ಚಿಕ್ಕ ಖುಷಿಗಳೇ ಸಾಕು'' ಎಂದು ಹೇಳಿಕೊಂಡಿದ್ದಾರೆ. ರಾಖಿ ವೈವಾಹಿಕ ಜೀವನ ಚೆನ್ನಾಗಿರಲಿ ಹಾಗೂ ತಾಯಿ ಆರೋಗ್ಯ ಆದಷ್ಟು ಬೇಗ ಸುಧಾರಿಸಲಿ ಎಂದು ನೆಟಿಜನ್ಸ್‌ ಹಾರೈಸುತ್ತಿದ್ದಾರೆ.

ಬ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವ ರಾಖಿ ಸಾವಂತ್‌ ತಾಯಿ

ರಾಖಿ ಸಾವಂತ್‌ ತಾಯಿ ಜಯಾ ಭೇಡಾ ಅವರು ಬ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ರಾಖಿ, ಆಸ್ಪತ್ರೆಯಿಂದಲೇ ಲೈವ್‌ ಮಾಡಿ ತನ್ನ ತಾಯಿಗೆ ಬ್ರೈನ್‌ ಟ್ಯೂಮರ್‌ ಇದ್ದು ನೀವೆಲ್ಲರೂ ಆಕೆಗಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದರು. ಆಸ್ಪತ್ರೆ ಬೆಡ್‌ ಮೇಲೆ ಚಿಕಿತ್ಸೆ ಪಡೆಯುತ್ತಿರುವ ತಮ್ಮ ತಾಯಿಯನ್ನು ಕೂಡಾ ರಾಖಿ ಸಾವಂತ್‌ ತೋರಿಸಿದ್ದರು. ಇದರ ಬೆನ್ನಲ್ಲೇ ರಾಖಿ ಸಾವಂತ್‌, ತಾವು ಆದಿಲ್‌ ಖಾನ್‌ನನ್ನು ಮದುವೆ ಆಗಿದ್ದಾರೆ ಎನ್ನಲಾದ ಫೋಟೋ ಹಂಚಿಕೊಂಡಿದ್ದರು. ಇದನ್ನು ನೋಡಿದ ಹಲವರು ಅತ್ತ ನಿಮ್ಮ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರೆ ನಿಮಗೆ ಮದುವೆ ಬೇಕಿತ್ತಾ? ಎಂದು ಪ್ರಶ್ನಿಸಿದ್ದರು. ಆದರೆ ನಂತರವಷ್ಟೇ ರಾಖಿ ಹಾಗೂ ಆದಿಲ್‌ 6 ತಿಂಗಳ ಹಿಂದೆಯೇ ಮದುವೆಯಾಗಿದ್ದಾರೆ ಎಂಬ ನಿಜ ಎಲ್ಲರಿಗೂ ತಿಳಿಯಿತು.

ಆದಿಲ್‌ ನನಗೆ ಮೋಸ ಮಾಡುತ್ತಿದ್ದಾನೆ ಎಂದು ಕಣ್ಣೀರಿಟ್ಟಿದ್ದ ರಾಖಿ ಸಾವಂತ್‌

ಯಾರಿಗೂ ತಿಳಿಯದಂತೆ ಮದುವೆಯಾಗಿದ್ದೆವು. ಆದರೆ ಆದಿಲ್‌ ಖಾನ್‌ ನನಗೆ ಮೋಸ ಮಾಡುತ್ತಿದ್ದಾನೆ ಎಂದು ರಾಖಿ ಕೆಲವು ದಿನಗಳ ಹಿಂದೆ ಕಣ್ಣೀರಿಟ್ಟಿದ್ದರು. ಆದಿಲ್‌ ಖಾನ್‌ ಹಾಗೂ ನಾನು 6 ತಿಂಗಳ ಹಿಂದೆಯೇ ಮದುವೆಯಾಗಿದ್ದೆವು. ಆತನ ಇಷ್ಟದಂತೆ ನಾನು ಫಾತಿಮಾ ಆಗಿ ಬದಲಾದೆ. ನಮ್ಮ ಮದುವೆ ವಿಚಾರವನ್ನು ಆದಿಲ್‌ ಖಾನ್‌ ಯಾರಿಗೂ ಹೇಳದಂತೆ ತಾಕೀತು ಮಾಡಿದ್ದರು. ಈಗ ನೋಡಿದರೆ ಆತ ನನ್ನನ್ನು ಮದುವೆಯೇ ಆಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದಿದ್ದರು. ಆದರೆ ಆದಿಲ್‌ ಮಾಧ್ಯಗಳ ಮುಂದೆ ತಾನು ರಾಖಿಯನ್ನು ಮದುವೆ ಆಗಿರುವುದಾಗಿ ಒಪ್ಪಿಕೊಂಡಿದ್ದರು. ''ನಮ್ಮಿಬ್ಬರ ಮದುವೆ ವಿಚಾರ ತಿಳಿದರೆ ನನ್ನ ತಂಗಿಗೆ ಗಂಡು ಸಿಗುವುದಿಲ್ಲ ಎಂದು ಭಯವಿತ್ತು. ರಾಖಿ ಹಾಗೂ ನಾನು ಪ್ರೀತಿಸುತ್ತಿದ್ದು ನನ್ನ ಮನೆಯವರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಇಬ್ಬರೂ ಗುಟ್ಟಾಗಿ ಮದುವೆಯಾಗಬೇಕಾಯ್ತು. ಇದನ್ನು ನಾನು ನನ್ನ ಪೋಷಕರಿಗೆ ನಿಧಾನವಾಗಿ ಮನವರಿಕೆ ಮಾಡುತ್ತೇನೆ. ರಾಖಿ ಹಾಗೂ ನಾವಿಬ್ಬರೂ ಈಗ ಸಂತೋಷವಾಗಿದ್ದೇವೆ'' ಎಂದು ಪ್ರತಿಕ್ರಿಯಿಸಿದ್ದರು.

ಟಿ20 ವರ್ಲ್ಡ್‌ಕಪ್ 2024