Natu Natu for Oscar 2023: ಆಸ್ಕರ್‌ ರೇಸ್‌ನಲ್ಲಿ ನಾಟು ನಾಟು...ಇದೆಲ್ಲಾ ರಾಜಮೌಳಿ, ಕೀರವಾಣಿಯ ಜಾದೂ ಎಂದ ರಾಮ್‌ಚರಣ್‌
ಕನ್ನಡ ಸುದ್ದಿ  /  ಮನರಂಜನೆ  /   Natu Natu For Oscar 2023: ಆಸ್ಕರ್‌ ರೇಸ್‌ನಲ್ಲಿ ನಾಟು ನಾಟು...ಇದೆಲ್ಲಾ ರಾಜಮೌಳಿ, ಕೀರವಾಣಿಯ ಜಾದೂ ಎಂದ ರಾಮ್‌ಚರಣ್‌

Natu Natu for Oscar 2023: ಆಸ್ಕರ್‌ ರೇಸ್‌ನಲ್ಲಿ ನಾಟು ನಾಟು...ಇದೆಲ್ಲಾ ರಾಜಮೌಳಿ, ಕೀರವಾಣಿಯ ಜಾದೂ ಎಂದ ರಾಮ್‌ಚರಣ್‌

ಇಡೀ ಭಾರತೀಯ ಸಿನಿಮಾರಂಗಕ್ಕೆ ಇದೊಂದು ಐತಿಹಾಸಿಕ ಕ್ಷಣ, ಅಕಾಡೆಮಿ ಅವಾರ್ಡ್‌ಗೆ ನಾಮಿನೇಟ್‌ ಆಗಿರುವ ಭಾರತೀಯ ಸಿನಿಮಾ ಹಾಡಿನಲ್ಲಿ ನಾಟು ನಾಟು.. ಮೊದಲನೆಯದ್ದು, ಇದೆಲ್ಲಾ ನಿರ್ದೇಶಕ ರಾಜಮೌಳಿ ಹಾಗೂ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಅವರ ಮ್ಯಾಜಿಕ್‌ ಎಂದು ರಾಮ್‌ ಚರಣ್ (Ram Charan) ಬರೆದುಕೊಂಡಿದ್ದಾರೆ.

ಆಸ್ಕರ್‌ ರೇಸ್‌ನಲ್ಲಿ ನಾಟು ನಾಟು ಹಾಡು
ಆಸ್ಕರ್‌ ರೇಸ್‌ನಲ್ಲಿ ನಾಟು ನಾಟು ಹಾಡು (PC: Ram Charan Facebook)

Natu Natu Nominated for Oscar 2023: 'ಆಸ್ಕರ್‌', ಸಿನಿಮಾರಂಗದ ಅತಿ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು. ಇದನ್ನು ಅಕಾಡೆಮಿ ಅವಾರ್ಡ್‌ (Academy Awards) ಎಂದೂ ಕರೆಯಲಾಗುತ್ತದೆ. ಈ ಪ್ರಶಸ್ತಿ ಪಡೆಯಲು ತಪಸ್ಸು ಮಾಡಿರಬೇಕು ಎನ್ನುವುದು ಸಿನಿಮಾಭಿಮಾನಿಗಳ ಸಿನಿಮ ಮಂದಿಯ ಅನಿಸಿಕೆ. ಏಕೆಂದರೆ ಅಕಾಡೆಮಿ ಅವಾರ್ಡ್‌ಗೆ ಒಂದು ಸಿನಿಮಾ ಆಯ್ಕೆ ಆಗುವುದು ಸುಲಭದ ಮಾತಲ್ಲ. ಒಂದು ವೇಳೆ ಆಸ್ಕರ್‌ ಪ್ರಶಸ್ತಿ ಒಲಿದು ಬಂದವರಿಗೆ ಅದೊಂದು ಸಾಧನೆಯಾಗಲಿದೆ.

ಭಾರತೀಯ ಸಿನಿಮಾಗಳು ಹಾಗೂ ಸಿನಿಮಾ ಪ್ರತಿಭೆಗಳಿಗೆ ಈ ಪ್ರಶಸ್ತಿ ದೊರೆತಿರುವುದು ವಿರಳ. ಪ್ರತಿ ಬಾರಿ ಭಾರತೀಯ ಸಿನಿಮಾಗಳು ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡರೂ ಪ್ರಶಸ್ತಿ ದೊರೆಯುತ್ತಿರಲಿಲ್ಲ. ಆದರೆ ಈ ಬಾರಿ ಕೆಲವೊಂದು ಸಿನಿಮಾಗಳು ಈ ಪ್ರಶಸ್ತಿಯನ್ನು ಪಡೆಯುವ ಭರವಸೆ ಮೂಡಿಸಿವೆ. 'ಕಾಂತಾರ' ಚಿತ್ರವನ್ನು ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವಂತೆ ಮನವಿ ಮಾಡಿರುವುದಾಗಿ ಇತ್ತೀಚೆಗೆ ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ 'ಆರ್‌ಆರ್‌ಆರ್‌' ಚಿತ್ರದ ನಾಟು ನಾಟು... ಹಾಡು 95ನೇ ಅಕಾಡೆಮಿ ಅವಾರ್ಡ್‌ನ ಮೂಲ ಗೀತೆಗಳ ವಿಭಾಗದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಲಾಗಿದ್ದು ಪ್ರಶಸ್ತಿಗೆ ನಾಮಿನೇಟ್‌ ಆಗಿದೆ. ಇತ್ತೀಚೆಗೆ ಚಿತ್ರದ ನಿರ್ದೇಶಕ ರಾಜಮೌಳಿ ಈ ವಿಚಾರವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಘೋಷಿಸಿದ್ದರು. ಈಗ ರಾಮ್‌ ಚರಣ್‌ ಕೂಡಾ ಈ ಸಂತೋಷದ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.

ನಾಟು ನಾಟು..ಹಾಡಿನ ಫೋಟೋವೊಂದನ್ನು ಹಂಚಿಕೊಂಡಿರುವ ರಾಮ್‌ ಚರಣ್‌, ''ಇಡೀ ಭಾರತೀಯ ಸಿನಿಮಾರಂಗಕ್ಕೆ ಇದೊಂದು ಐತಿಹಾಸಿಕ ಕ್ಷಣ, ಅಕಾಡೆಮಿ ಅವಾರ್ಡ್‌ಗೆ ನಾಮಿನೇಟ್‌ ಆಗಿರುವ ಭಾರತೀಯ ಸಿನಿಮಾ ಹಾಡಿನಲ್ಲಿ ನಾಟು ನಾಟು.. ಮೊದಲನೆಯದ್ದು, ಇದೆಲ್ಲಾ ನಿರ್ದೇಶಕ ರಾಜಮೌಳಿ ಹಾಗೂ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಅವರ ಮ್ಯಾಜಿಕ್‌'' ಎಂದು ಬರೆದುಕೊಂಡಿದ್ದಾರೆ. ಜ್ಯೂನಿಯರ್‌ ಎನ್‌ಟಿಆರ್‌ ಹಾಗೂ ಚಿತ್ರತಂಡದ ಇತರರು, ನಾಟು ನಾಟು ಹಾಡು ಆಸ್ಕರ್‌ ರೇಸ್‌ಗೆ ಆಯ್ಕೆಯಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದರು. ಭಾರತದ 'ಆರ್‌ಆರ್‌ಆರ್‌' ಸಿನಿಮಾ ಹೊರತುಪಡಿಸಿ ಹಾಲಿವುಡ್‌ನ ಅವತಾರ್‌ ದಿ ವೇ ಆಪ್‌ ವಾಟರ್‌, ಬ್ಲಾಕ್‌ ಪಂತರ್‌, ಟಾಪ್‌ ಗನ್‌ ಮೆವರಿಕ್‌ ಸೇರಿದಂತೆ ಒಟ್ಟು 15 ಸಿನಿಮಾಗಳ ಹಾಡುಗಳು ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ. ಈ ಬಾರಿ ಭಾರತೀಯ ಸಿನಿಮಾಗೂ ಆಸ್ಕರ್‌ ದೊರೆಯಲಿದೆಯಾ ಎಂಬುದನ್ನು ಕಾದು ನೋಡಬೇಕು.

ಡಿವಿವಿ ಎಂಟರ್‌ಟೈನ್ಮೆಂಟ್‌ ಬ್ಯಾನರ್‌ ಅಡಿಯಲ್ಲಿ 'ಆರ್‌ಆರ್‌ಆರ್‌' ಚಿತ್ರವನ್ನು ಎಸ್‌.ಎಸ್.‌ ರಾಜಮೌಳಿ ನಿರ್ದೇಶಿಸಿದ್ದಾರೆ. ಈ ಚಿತ್ರದ ಕಥೆ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್‌ ಅವರದ್ದು. 550 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಇದುವರೆಗೂ 1200 ಕೋಟಿ ರೂಪಾಯಿ ಲಾಭ ಮಾಡಿದೆ. ಎಂ.ಎಂ. ಕೀರವಾಣಿ, ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಜ್ಯೂನಿಯರ್‌ ಎನ್‌ಟಿಆರ್‌, ರಾಮ್‌ ಚರಣ್‌, ಆಲಿಯಾ ಭಟ್‌, ಅಜಯ್‌ ದೇವ್ಗನ್‌, ಶ್ರಿಯಾ ಸರನ್‌, ಅಲಿಸನ್‌ ಡೂಡಿ ಹಾಗೂ ಇನ್ನಿತರರು ನಟಿಸಿದ್ದಾರೆ.

ಆಸ್ಕರ್ ಸಮಿತಿಯಲ್ಲಿ ಭಾರತದ 6 ಸೆಲೆಬ್ರಿಟಿಗಳು

ಈ ಬಾರಿ ಅಕಾಡೆಮಿ ಅವಾರ್ಡ್ ಸಮಿತಿಯು ಒಟ್ಟು 397 ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು ಇದರಲ್ಲಿ ಭಾರತದಿಂದ 6 ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ. ಕಾಲಿವುಡ್‌ನ ಖ್ಯಾತ ನಟ ಸೂರ್ಯ ಬಾಲಿವುಡ್ ನಟಿ ಕಾಜೊಲ್, ಸುಷ್ಮಿಷಾ ಘೋಷ್ ಪಾನ್ ನಳಿನ್, ರಿಂತು ಥಾಮಸ್​​​​, ಚಿತ್ರ ಬರಹಗಾರ್ತಿ ರೀಮಾ ಕಾಗ್ತಿಗೆ ಈ ಗೌರವ ದೊರೆತಿದೆ. ಅಕಾಡೆಮಿ ಪ್ರಶಸ್ತಿಯನ್ನು ಮೊದಲ ಬಾರಿಗೆ 1929ರಲ್ಲಿ ನೀಡಲಾಯ್ತು. ಬಾಲಿವುಡ್‌ ಫಿಲ್ಮ್ ಮೇಕರ್ ಸತ್ಯಜಿತ್ ರೇ , ಕಾಸ್ಟ್ಯೂಮ್ ಡಿಸೈನರ್​ ಭಾನು ಆತಿಯಾ, ಸ್ಲಮ್ ಡಾಗ್ ಮಿಲಿಯನೇರ್ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಎ.ಆರ್​. ರೆಹಮಾನ್, ಉತ್ತಮ ಸೌಂಡ್​ ಮಿಕ್ಸಿಂಗ್​​​ಗಾಗಿ ರೆಸುಲ್ ಪೂಕುಟ್ಟಿ, ಬೆಸ್ಟ್ ಒರಿಜಿನಲ್ ಹಾಡಿಗಾಗಿ ಗುಲ್ಜಾರ್​​​​​ ಅವರಿಗೆ ಆಸ್ಕರ್ ಪ್ರಶಸ್ತಿ ದೊರೆತಿದೆ.

Whats_app_banner