Game Changer OTT: ಒಟಿಟಿಗೆ ಎಂಟ್ರಿಕೊಟ್ಟ ರಾಮ್ ಚರಣ್ ಗೇಮ್ ಚೇಂಜರ್ ಸಿನಿಮಾ, ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ
Game Changer OTT: ಗೇಮ್ ಚೇಂಜರ್ ಚಿತ್ರ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಒಂದು ತಿಂಗಳೊಳಗೆ ಒಟಿಟಿ ಅಂಗಳ ತಲುಪಿದೆ ರಾಮ್‌ಚರಣ್ ಮತ್ತು ಶಂಕರ್ ಕಾಂಬಿನೇಷನ್‌ನ ಸಿನಿಮಾ.

Game Changer OTT: ಟಾಲಿವುಡ್ ನಟ ರಾಮ್ ಚರಣ್ ನಾಯಕನಾಗಿ ನಟಿಸಿದ ಗೇಮ್ ಚೇಂಜರ್ ಸಿನಿಮಾ ಇಂದಿನಿಂದ (ಫೆಬ್ರವರಿ 7) ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಯಲ್ಲಿ ಈ ಸಿನಿಮಾವನ್ನು ವೀಕ್ಷಿಸಬಹುದಾಗಿದೆ. ಆದಾಗ್ಯೂ, ಹಿಂದಿ ಆವೃತ್ತಿ ಬಗ್ಗೆ ಈ ವರೆಗೂ ಅಧಿಕೃತ ಘೋಷಣೆ ಆಗಿಲ್ಲ. ಹಿಂದಿಯಲ್ಲಿ ಕೊಂಚ ವಿಳಂಬವಾಗಲಿದೆ ಎನ್ನಲಾಗುತ್ತಿದೆ.
ಸಹಜವಾಗಿ ಕೆಲವು ಸಿನಿಮಾಗಳು ಚಿತ್ರಮಂದಿರಗಳಿಗಿಂತಲೂ ಹೆಚ್ಚಿನ ದೃಶ್ಯಗಳ ಜತೆಗೆ ಒಟಿಟಿಗೆ ಆಗಮಿಸಿದ ಉದಾಹರಣೆಗಳಿವೆ. ಇತ್ತೀಚೆಗಷ್ಟೇ ಪುಷ್ಪ 2 ಸಿನಿಮಾ ಹೆಚ್ಚುವರಿ ದೃಶ್ಯಗಳ ಜತೆಗೆ ನೆಟ್‌ಫ್ಲಿಕ್ಸ್‌ಗೆ ಬಂದಿತ್ತು. ಅದೇ ರೀತಿ ಗೇಮ್ ಚೇಂಜರ್ ಸಿನಿಮಾ ಸಹ ಒಟಿಟಿಗೆ ಬರಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಯಾವುದೇ ಬದಲಾವಣೆ ಮಾಡಿಕೊಳ್ಳದೆ, ಚಿತ್ರಮಂದಿರಗಳಲ್ಲಿನ ರನ್ ಟೈಮ್ 2 ಗಂಟೆ 37 ನಿಮಿಷಗಳ ಅದೇ ವರ್ಷನ್ ಒಟಿಟಿಗೆ ಬಂದಿದೆ.
ಗೇಮ್ ಚೇಂಜರ್ ಸಿನಿಮಾವನ್ನು ಸರಿ ಸುಮಾರು 350 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಾಣ ಮಾಡಿತ್ತು ಎಂಬ ಟಾಕ್ ಇದೆ. ಆದಾಗ್ಯೂ, ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂ.ಗಳ ಗಡಿಯನ್ನೂ ದಾಟಲಿಲ್ಲ. ಗಲ್ಲಾಪೆಟ್ಟಿಗೆಯಲ್ಲಿ ಹೀನಾಯ ಸೋಲನ್ನು ಅನುಭವಿಸಿತು. ರಾಮ್ ಚರಣ್ ಅವರ ನಟನೆಗೆ ಮೆಚ್ಚುಗೆ ಸಿಕ್ಕರೂ, ಶಂಕರ್ ನಿರ್ದೇಶನದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕವು. ಇಂಡಿಯನ್ 2 ಚಿತ್ರಕ್ಕೆ ಸಿಕ್ಕ ವಿಮರ್ಶೆಗಳೇ ಈ ಸಿನಿಮಾಕ್ಕೂ ಸಂದಾಯವಾದವು.
ದ್ವಿಪಾತ್ರದಲ್ಲಿ ರಾಮ್ ಚರಣ್
ಗೇಮ್ ಚೇಂಜರ್ ಚಿತ್ರವನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ನಿರ್ಮಿಸಿದ್ದಾರೆ. ರಾಮ್ ಚರಣ್ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಕಿಯಾರಾ ಅಡ್ವಾಣಿ ಮತ್ತು ಅಂಜಲಿ ನಾಯಕಿಯರಾಗಿದ್ದಾರೆ. ಚಿತ್ರದಲ್ಲಿ ಎಸ್.ಜೆ. ಸೂರ್ಯ ಮುಖ್ಯ ಖಳನಾಯಕನಾಗಿ ನಟಿಸಿದ್ದಾರೆ. ಶ್ರೀಕಾಂತ್, ಸಮುದ್ರಕಣಿ, ಸುನಿಲ್ ಮತ್ತು ಜಯರಾಮ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ತಮನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ಮತ್ತೆ ಸೋತ ನಿರ್ದೇಶಕ ಶಂಕರ್
ಗೇಮ್ ಚೇಂಜರ್ ಚಿತ್ರವನ್ನು ಶಂಕರ್ ನಿರ್ದೇಶಿಸಿದ್ದಾರೆ. ಇದು ರಾಜಕೀಯ ದೃಷ್ಟಿಕೋನವುಳ್ಳ ಆಕ್ಷನ್ ಡ್ರಾಮಾ. ಆದರೆ ಚಿತ್ರವನ್ನು ಪ್ರೇಕ್ಷಕರಿಗೆ ಕನೆಕ್ಟ್ ಮಾಡುವಲ್ಲಿ ನಿರ್ದೇಶಕ ಶಂಕರ್ ಮತ್ತೆ ವಿಫಲರಾದರು. ಹಾಡುಗಳು ಅದ್ಭುತ ಎನಿಸಿದರೂ, ಚಿತ್ರಕ್ಕೆ ಮೆಚ್ಚುಗೆ ಸಿಗಲಿಲ್ಲ. ಕಮರ್ಷಿಯಲ್ ಹಿಟ್ ಆಗದ ಈ ಸಿನಿಮಾ ಒಟಿಟಿಯಲ್ಲಿ ಯಾವ ರೀತಿಯ ರೆಸ್ಪಾನ್ಸ್ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
