Game Changer Twitter Review: ಬಿಡುಗಡೆಯಾಯ್ತು ರಾಮ್ ಚರಣ್ ಅಭಿನಯದ ‘ಗೇಮ್‌ ಚೇಂಜರ್’; ಇದು ಪಕ್ಕಾ ಮಾಸ್‌ ಸಿನಿಮಾ ಎಂದ ನೆಟ್ಟಿಗರು
ಕನ್ನಡ ಸುದ್ದಿ  /  ಮನರಂಜನೆ  /  Game Changer Twitter Review: ಬಿಡುಗಡೆಯಾಯ್ತು ರಾಮ್ ಚರಣ್ ಅಭಿನಯದ ‘ಗೇಮ್‌ ಚೇಂಜರ್’; ಇದು ಪಕ್ಕಾ ಮಾಸ್‌ ಸಿನಿಮಾ ಎಂದ ನೆಟ್ಟಿಗರು

Game Changer Twitter Review: ಬಿಡುಗಡೆಯಾಯ್ತು ರಾಮ್ ಚರಣ್ ಅಭಿನಯದ ‘ಗೇಮ್‌ ಚೇಂಜರ್’; ಇದು ಪಕ್ಕಾ ಮಾಸ್‌ ಸಿನಿಮಾ ಎಂದ ನೆಟ್ಟಿಗರು

ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್ ಸಿನಿಮಾ ಬಿಡುಗಡೆಯಾಗಿದ್ದು. ಟ್ವಿಟರ್‌ನಲ್ಲಿ ಸಾಕಷ್ಟು ವಿಮರ್ಶೆಗಳು ಲಭ್ಯವಾಗಿದೆ. ಸಿನಿಮಾದ ಬಗ್ಗೆ ಜನರ ಅಭಿಪ್ರಾಯ ಹೇಗಿದೆ ಎಂಬುದನ್ನು ನಾವಿಲ್ಲಿ ನೀಡಿದ್ದೇವೆ.

ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯ್ತು ‘ಗೇಮ್‌ ಚೇಂಜರ್’
ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯ್ತು ‘ಗೇಮ್‌ ಚೇಂಜರ್’

ರಾಮ್ ಚರಣ್ ಅಭಿನಯದ ಮತ್ತು ಶಂಕರ್ ನಿರ್ದೇಶನದ ಪೊಲಿಟಿಕಲ್ ಥ್ರಿಲ್ಲರ್ ‘ಗೇಮ್ ಚೇಂಜರ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅಭಿಮಾನಿಗಳು ಸಿನಿಮಾ ನೋಡಲು ಕುತೂಹಲರಾಗಿದ್ದು ಸಿನಿಮಾದ ಬಗ್ಗೆ ವೀಕ್ಷಕರ ಅಭಿಪ್ರಾಯ ಹೇಗಿದೆ ಎಂದು ತಿಳಿದುಕೊಳ್ಳಲು ಸಹ ಕಾತುರರಾಗಿದ್ದಾರೆ. ರಾಮ್ ಚರಣ್‌ ಎಂಟ್ರಿ ಸೀನ್‌ ಬಗ್ಗೆ ಹಾಗೂ ಈ ಸಿನಿಮಾ ಬಗ್ಗೆ ಸಾಕಷ್ಟು ಜನರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೊಂದು ಮಸಾಲಾ ಮೂವಿ ಎಂದು ಹೇಳುತ್ತಿದ್ದಾರೆ. ಟ್ವಿಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಮ್ ಚರಣ್ ಅವರ ಅಭಿನಯವನ್ನು ವೀಕ್ಷಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು, ಆದರೀಗ ಕಾಯುವಿಕೆ ಕೊನೆಗೊಂಡಿದೆ. ಸಿನಿಮಾ ಬಿಡುಗಡೆಯಾಗಿದೆ. ಬೆಳಗಿನ ಶೋ ನೋಡಿದ ವೀಕ್ಷಕರು ಟ್ವೀಟರ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾದ ಬಗ್ಗೆ ನಾನಾ ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. "ಸಂಪೂರ್ಣ ಮಾಸ್ ಎಂಟರ್ಟೈನರ್" ಎಂಬ ಮಾತು ಕೇಳಿಬರುತ್ತಿದೆ.

ಆಕ್ಷನ್-ಪ್ಯಾಕ್ಡ್ ಸೀಕ್ವೆನ್ಸ್ ಮತ್ತು ಈ ಸಿನಿಮಾದ ಕಥೆ ತುಂಬಾ ಚೆನ್ನಾಗಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಮ್ ಚರಣ್ ಅವರ ಗ್ರ್ಯಾಂಡ್ ಎಂಟ್ರಿ ಬಗ್ಗೆ ಸಾಕಷ್ಟು ಜನ ಬರೆದುಕೊಂಡಿದ್ದಾರೆ.

ಟ್ವೀಟರ್‌ನಲ್ಲಿ ಉಸ್ತಾದ್ ಎನ್ನುವವರು 4.5/5 ರೇಟಿಂಗ್ ನೀಡಿದ್ದಾರೆ. ಹಾಗೂ ಸಿನಿಮಾದ ಮೊದಲಾರ್ಧ ತುಂಬಾ ಚೆನ್ನಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಫನ್‌, ಮಾಸ್, ಮಸಾಲಾ, ಮನರಂಜನೆ ಎಲ್ಲವೂ ಇದೆ. ಟೆಕ್ನಿಕಲ್ ಬ್ರಿಲಿಯ್ಸ್‌ಅನ್ನು ಮೆಚ್ಚಲೇಬೇಕು ಹಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸಿನಿಮಾದಲ್ಲಿ ರಾಮ್‌ ಚರಣ್‌ ಎಂಟ್ರಿ ದೃಶ್ಯದ ಬಗ್ಗೆ ಸಾಮಾನ್ಯವಾಗಿ ಎಲ್ಲರೂ ಮಾತಾಡುತ್ತಿದ್ದಾರೆ. ಎಲ್ಲರೂ ಇದೊಂದು ವಿಷಯವನ್ನು ಹೆಚ್ಚು ಒತ್ತುಕೊಟ್ಟು ಪ್ರಸ್ತಾಪ ಮಾಡಿದ್ದು ರಾಮ್ ಚರಣ್ ಎಂಟ್ರಿ ಚೆನ್ನಾಗಿದೆ ಎಂದಿದ್ದಾರೆ.

45 ನಿಮಿಷ ಆದ ನಂತರ ಸಿನಿಮಾ ಚೆನ್ನಾಗಿದೆ. ಇಂಟರ್ವಲ್‌ಗಿಂತ ಮೊದಲ 30 ನಿಮಿಷಗಳೂ ಸಹ ತುಂಬಾ ಚೆನ್ನಾಗಿದೆ. ಆದರೂ ಮುಂದೆ ಏನಾಗಲಿದೆ ಎಂದು ನಾವು ಊಹಿಸಬಹುದು ಎಂದು ಹೇಳುತ್ತಿದ್ದಾರೆ. ಜಯರಾಮ್ ಪಾತ್ರಕ್ಕೆ ವಿಶೇಷ ಪ್ರಶಂಸೆ ವ್ಯಕ್ತವಾಗಿದೆ.

Whats_app_banner