RGV on Kantara: ‘ಬಿಗ್ ಬಜೆಟ್ ನಿರ್ಮಾಪಕರ ಕನಸಲ್ಲೀಗ ‘ಕಾಂತಾರ’ದ ಗೆಲುವಿನ ದುಸ್ವಪ್ನ, ಒಳ್ಳೆ ಪಾಠ ಕಲಿಸಿದ್ದಕ್ಕೆ ಥ್ಯಾಂಕ್ಸ್’ ಎಂದ RGV
ಫಿಲಂ ಮೇಕರ್ ಆರ್‌ಜಿವಿ ಅಷ್ಟು ಸುಲಭವಾಗಿ ಎಲ್ಲ ಸಿನಿಮಾಗಳನ್ನು ಹೊಗಳುವುದಿಲ್ಲ. ಒಂದು ವೇಳೆ ಆ ಸಿನಿಮಾ ಬಗ್ಗೆ ಮಾತನಾಡಿದ್ದಾರೆ ಎಂದರೆ, ಅಲ್ಲಿ ಏನೋ ಒಂದು ವಿಶೇಷತೆ ಇದ್ದೇ ಇರುತ್ತದೆ.
‘ಕಾಂತಾರ’ ಸಿನಿಮಾ ಇದೀಗ ಕನ್ನಡ ಮಾತ್ರವಲ್ಲ ಪರಭಾಷಿಕರ ನೆಚ್ಚಿನ ಸಿನಿಮಾ ಆಗಿದೆ. ಮೂಲ ಕನ್ನಡದ ಈ ಸಿನಿಮಾ ಹಿಂದಿಯಲ್ಲಿ ದೊಡ್ಡ ಮಟ್ಟದ ಮೆಚ್ಚುಗೆ ಪಡೆದರೆ, ಪಕ್ಕದ ತೆಲುಗು ನಾಡಲ್ಲಿ ಸಿನಿಮಾ ನೋಡಲು ಜನ ಮುಗಿ ಬೀಳುತ್ತಿದ್ದಾರೆ. ಅದೇ ರೀತಿ, ತಮಿಳು ಮತ್ತು ಮಲಯಾಳಂನಲ್ಲಿಯೂ ಸಿನಿಮಾದ ಓಟ ಜೋರಾಗಿದೆ. ಸಿನಿಮಾ ಮಂದಿಯೂ ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಗೆಬಗೆಯ ಮೆಚ್ಚುಗೆಯ ಮಾತುಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಇದೀಗ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅವರ ಸರದಿ.
ಫಿಲಂ ಮೇಕರ್ ಆರ್‌ಜಿವಿ ಅಷ್ಟು ಸುಲಭವಾಗಿ ಎಲ್ಲ ಸಿನಿಮಾಗಳನ್ನು ಹೊಗಳುವುದಿಲ್ಲ. ಒಂದು ವೇಳೆ ಆ ಸಿನಿಮಾ ಬಗ್ಗೆ ಮಾತನಾಡಿದ್ದಾರೆ ಎಂದರೆ, ಅಲ್ಲಿ ಏನೋ ಒಂದು ವಿಶೇಷತೆ ಇದ್ದೇ ಇರುತ್ತದೆ. ಇದೀಗ ‘ಕಾಂತಾರ’ ಬಗ್ಗೆ ಇಡೀ ದೇಶವೇ ಮಾತನಾಡುತ್ತಿದೆ. ಅದರ ಜತೆಗೆ ಆರ್‌ಜಿವಿ ಸಹ ಸರಣಿ ಟ್ವಿಟ್ ಮೂಲಕ ಚಿತ್ರವನ್ನು ಕೊಂಡಾಡಿದ್ದಾರೆ. ಒಂದರ್ಥದಲ್ಲಿ ಪರೋಕ್ಷವಾಗಿ ಬಿಗ್ ಬಜೆಟ್ ಸಿನಿಮಾ ಮಾಡುವವರಿಗೆ ಟಾಂಗ್ ಕೊಟ್ಟಿದ್ದಾರೆ..
ಆರ್‌ಜಿವಿ ಮಾಡಿದ ಟ್ವೀಟಾರ್ಥ ಇಲ್ಲಿದೆ..
- ‘ಮೆಗಾ ಬಜೆಟ್ ಚಿತ್ರಗಳೇ ಜನರನ್ನು ಥಿಯೇಟರ್‌ಗಳತ್ತ ಸೆಳೆಯುತ್ತವೆ ಎಂಬ ಚಿತ್ರರಂಗದ ಮಿಥ್ಯೆಯನ್ನು ರಿಷಬ್ ಶೆಟ್ಟಿ ಮುರಿದಿದ್ದಾರೆ. ಕಾಂತಾರ ಮುಂದಿನ ದಿನಗಳಲ್ಲಿ ಎಲ್ಲರಿಗೂ ಒಂದು ದೊಡ್ಡ ಮತ್ತು ಉತ್ತಮ ಪಾಠವಾಗಲಿದೆ.
- 'ರಿಷಬ್ ಶೆಟ್ಟಿ ಶಿವನಿದ್ದಂತೆ, ಅದಕ್ಕೆ ಗುಳಿಗ ದೈವವನ್ನು ಗುಣಿಸಬೇಕು. ಆಗ 300 ಕೋಟಿ, 400 ಕೋಟಿ, 500 ಕೋಟಿ ಬಜೆಟ್‌ನ ಸಿನಿಮಾಗಳ ನಿರ್ಮಾಪಕರು ಕಾಂತಾರ ಕಲೆಕ್ಷನ್ ನೋಡಿ ಹೃದಯಾಘಾತದಿಂದ ಸಾಯುತ್ತಾರೆ.
- 'ಧನ್ಯವಾದಗಳು ರಿಷಬ್ ಶೆಟ್ಟಿ, ಎಲ್ಲ ದೊಡ್ಡ ಬಜೆಟ್‌ನ ಸಿನಿಮಾ ತಯಾರಕರೀಗ ರಾತ್ರಿ ವೇಳೆ ಕಾಂತಾರದ ದುಸ್ವಪ್ನದಿಂದ ಎಚ್ಚರಗೊಳ್ಳುತ್ತಿದ್ದಾರೆ. ಹೇಗೆ ಶಿವನನ್ನು ಗುಳಿಗ ದೈವ ಬಡಿದೆಬ್ಬಿಸಿತ್ತೋ ಹಾಗೆ.
- ಹೇ ರಿಷಬ್ ಶೆಟ್ಟಿ, ಕಾಂತಾರ ಎಂಬ ಅದ್ಭುತವಾದ ಪಾಠಕ್ಕಾಗಿ ಧನ್ಯವಾದಗಳು. ಎಲ್ಲ ಚಿತ್ರರಂಗದ ಜನರು ನಿಮಗೆ ಟ್ಯೂಷನ್ ಫೀ ಪಾವತಿಸಬೇಕಾಗುತ್ತದೆ.
ಹೀಗೆ ಸುದೀರ್ಘವಾದ ಟ್ವಿಟ್ ಮಾಡಿ, ರಿಷಬ್ ಶೆಟ್ಟಿಯ ಹೊಸ ಸಾಹಸವನ್ನು ಕೊಂಡಾಡಿದ್ದಾರೆ.