ನಿರ್ದೇಶಕ​ ರಾಮ್​ ಗೋಪಾಲ್ ವರ್ಮಾ ಜೈಲು ಪಾಲು; 2018ರ ಪ್ರಕರಣದಲ್ಲಿ 3 ತಿಂಗಳು ಕಾರಾಗೃಹ ಶಿಕ್ಷೆ
ಕನ್ನಡ ಸುದ್ದಿ  /  ಮನರಂಜನೆ  /  ನಿರ್ದೇಶಕ​ ರಾಮ್​ ಗೋಪಾಲ್ ವರ್ಮಾ ಜೈಲು ಪಾಲು; 2018ರ ಪ್ರಕರಣದಲ್ಲಿ 3 ತಿಂಗಳು ಕಾರಾಗೃಹ ಶಿಕ್ಷೆ

ನಿರ್ದೇಶಕ​ ರಾಮ್​ ಗೋಪಾಲ್ ವರ್ಮಾ ಜೈಲು ಪಾಲು; 2018ರ ಪ್ರಕರಣದಲ್ಲಿ 3 ತಿಂಗಳು ಕಾರಾಗೃಹ ಶಿಕ್ಷೆ

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಮುಂಬೈ ಕೋರ್ಟ್ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. 2018ರಲ್ಲಿ ಅವರ ವಿರುದ್ಧ ದಾಖಲಾದ ಪ್ರಕರಣದಲ್ಲಿ ಈಗ ಶಿಕ್ಷೆ ಅನುಭವಿಸುತ್ತಿದ್ದಾರೆ.

ನಿರ್ದೇಶಕ​ ರಾಮ್​ ಗೋಪಾಲ್ ವರ್ಮಾ ಜೈಲು ಪಾಲು; ಐದು ವರ್ಷಗಳ ಹಿಂದಿನ ಪ್ರಕರಣದಲ್ಲಿ 3 ತಿಂಗಳು ಕಾರಾಗೃಹ ಶಿಕ್ಷೆ
ನಿರ್ದೇಶಕ​ ರಾಮ್​ ಗೋಪಾಲ್ ವರ್ಮಾ ಜೈಲು ಪಾಲು; ಐದು ವರ್ಷಗಳ ಹಿಂದಿನ ಪ್ರಕರಣದಲ್ಲಿ 3 ತಿಂಗಳು ಕಾರಾಗೃಹ ಶಿಕ್ಷೆ

RGV Jail Sentence: ಐದು ವರ್ಷಗಳ ಹಿಂದಿನ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಟಾಲಿವುಡ್​ ಸೆನ್​ಸೇಷನಲ್ ಡೈರೆಕ್ಟರ್​ ರಾಮ್​ ಗೋಪಾಲ್ ವರ್ಮಾ (Ram Gopal Varma sentenced) ಅವರು ಮೂರು ತಿಂಗಳ ಕಾಲ ಜೈಲು ಪಾಲಾಗಿದ್ದಾರೆ. 2018ರ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ (ಜನವರಿ 23) ಮುಂಬೈ ನ್ಯಾಯಾಲಯವು (Mumbai court) ಆರ್​ಜಿವಿ ಅವರಿಗೆ ಜಾಮೀನು ರಹಿತ 3 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಮಹೇಶ್ ಚಂದ್ರ ಮಿಶ್ರಾ (Mahesh Chandra Mishra) ಎಂಬವರು 2018 ರಲ್ಲಿ ಶ್ರೀ ಎಂಬ ಕಂಪನಿಯ ಮೂಲಕ ಆರ್​​ಜಿವಿ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಐದು ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದ ಈ ಪ್ರಕರಣದ ಅಂತಿಮ ತೀರ್ಪನ್ನು ಇಂದು (ಜ 23) ಪ್ರಕಟಿಸಿದೆ. 2022 ರಲ್ಲೇ ರಾಮ್​ ಗೋಪಾಲ್ ವರ್ಮಾ ಅವರನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿತ್ತು. ಆದರೆ ಅಂದು 5,000 ರೂ.ಗಳ ಗ್ಯಾರೆಂಟಿ ಜಾಮೀನು ಪಡೆದಿದ್ದರು.

ಇದು ಹಿಂದಿನ ಚೆಕ್ ಬೌನ್ಸ್ ಪ್ರಕರಣವಾಗಿದ್ದು, ಇದರಲ್ಲಿ ಆರ್​ಜಿವಿ ಅವರನ್ನು ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ದೋಷಿ ಎಂದು ಘೋಷಿಸಿದೆ. ದೂರುದಾರರಿಗೆ 3.72 ಲಕ್ಷ ರೂ.ಗಳನ್ನು ಪಾವತಿಸುವಂತೆ ನಿರ್ದೇಶಿಸಿದೆ. ಈ ಮೊತ್ತವನ್ನು ಪಾವತಿಸದಿದ್ದರೆ, ಅವರು ಹೆಚ್ಚುವರಿಯಾಗಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಈ ಶಿಕ್ಷೆಗೆ ಆರ್ ಜಿವಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಭಯಾನಕ ಸಿನಿಮಾವಂತೆ ಸಿಂಡಿಕೇಟ್!

ಇತ್ತೀಚೆಗೆ ಸತ್ಯ ಚಿತ್ರದ ಮರು ಬಿಡುಗಡೆಯ ಸಂದರ್ಭದಲ್ಲಿ ಭಾವುಕರಾಗಿದ್ದ ರಾಮ್ ಗೋಪಾಲ್ ವರ್ಮಾ, ಇನ್ನು ಮುಂದೆ ನೀವು ಹೊಸ ವರ್ಮಾ ನೋಡುತ್ತೀರಿ ಎಂದು ಹೇಳಿದ್ದು ತಿಳಿದೇ ಇದೆ. ಬುಧವಾರ (ಜನವರಿ 22) ಎಕ್ಸ್ ಮೂಲಕ ಅವರು ಕೇವಲ 2 ದಿನಗಳ ನಂತರ ತಮ್ಮ ವೃತ್ತಿಜೀವನದ ಅತಿದೊಡ್ಡ ಚಿತ್ರ ಸಿಂಡಿಕೇಟ್ ಅನ್ನು ನಿರ್ಮಿಸುವುದಾಗಿ ಬಹಿರಂಗಪಡಿಸಿದ್ದರು. ಅತ್ಯಂತ ಭಯಾನಕ ಪ್ರಾಣಿ ಮನುಷ್ಯ' ಎಂಬುದನ್ನು ಈ ಚಿತ್ರದ ಮೂಲಕ ತೋರಿಸುವೆ. ನಾನು ಇದುವರೆಗೆ ಮಾಡದ ಅತಿದೊಡ್ಡ ಚಲನಚಿತ್ರವನ್ನು ಮಾಡಲು ಬಯಸುತ್ತೇನೆ ಎಂದಿದ್ದರು.

ಭಾರತದ ಅಸ್ತಿತ್ವ ಪ್ರಶ್ನಿಸುವ ಸಿನಿಮಾ ಇದಾಗಿದೆ ಎಂದಿದ್ದರು

ಈ ಚಿತ್ರಕ್ಕೆ ಸಿಂಡಿಕೇಟ್ ಎಂದು ಹೆಸರಿಡಲಾಗಿದ್ದು, ಇದು ಭಾರತದ ಅಸ್ತಿತ್ವವನ್ನು ಪ್ರಶ್ನಿಸಲು ಬಯಸುವ ಕಂಪನಿಯ ಚಿತ್ರವಾಗಿದೆ ಎಂದು ಅವರು ಸುದೀರ್ಘ ಪೋಸ್ಟ್​​ನಲ್ಲಿ ತಿಳಿಸಿದ್ದಾರೆ. ಸಿಂಡಿಕೇಟ್ ಸಿನಿಮಾವು ಮನುಷ್ಯನಿಗಿಂತ ಭಯಾನಕ ಪ್ರಾಣಿ ಭೂಮಿಯ ಮೇಲೆ ಇಲ್ಲ ಎಂಬ ಸಂದೇಶದೊಂದಿಗೆ ಪ್ರಾರಂಭವಾಗಲಿದೆ ಎಂದು ಅವರು ಹೇಳಿದ್ದರು. ಭಾರತವನ್ನು ನವ ಭಾರತದೊಂದಿಗೆ ಬದಲಾಯಿಸುವುದು ಸಿಂಡಿಕೇಟ್​ನ ಗುರಿಯಾಗಿದೆ. ಇದು ಭಯಾನಕ ಚಲನಚಿತ್ರವಾಗಿದೆ ಎಂದು ರಾಮ್ ಗೋಪಾಲ್ ವರ್ಮಾ ಸ್ಪಷ್ಟಪಡಿಸಿದ್ದರು. ಚಿತ್ರದ ಪಾತ್ರವರ್ಗ ಮತ್ತು ಇತರ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಅವರು ಹೇಳಿದ್ದರು.

Whats_app_banner