ಹಳೇ ಸೀರಿಯಲ್‌ಗಳ ಮುಂದೆ ಮಂಕಾದ ಹೊಸ ಧಾರಾವಾಹಿಗಳು; ಕಲರ್ಸ್ ಕನ್ನಡದ ಟಾಪ್ 9ರಲ್ಲಿ ಯಾರಿಗೆ ನಂಬರ್ 1 ಪಟ್ಟ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಲಕ್ಷ್ಮೀ ಬಾರಮ್ಮ, ಭಾಗ್ಯಲಕ್ಷ್ಮೀ, ರಾಮಾಚಾರಿ, ನಿನಗಾಗಿ, ವಧು, ಯಜಮಾನ, ಭಾರ್ಗವಿ ಎಲ್‌ಎಲ್‌ಬಿ, ಕರಿಮಣಿ, ದೃಷ್ಟಿಬೊಟ್ಟು ಧಾರಾವಾಹಿಗಳು ಪ್ರಸಾರವಾಗುತ್ತವೆ. ಈ 9 ಸೀರಿಯಲ್‌ಗಳ ಪೈಕಿ ಹತ್ತನೇ ವಾರದ ಟಾಪರ್ ಯಾರು? ಇಲ್ಲಿದೆ ಕಲರ್ಸ್ ಕನ್ನಡ ಧಾರಾವಾಹಿಗಳ ಟಿಆರ್‌ಪಿ ಲಿಸ್ಟ್

Colors Kannada Serial TRP: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ನಿತ್ಯ ಟಾಪ್ 9 ಧಾರಾವಾಹಿಗಳು ಪ್ರಸಾರವಾಗುತ್ತವೆ. ಲಕ್ಷ್ಮೀ ಬಾರಮ್ಮ, ಭಾಗ್ಯಲಕ್ಷ್ಮೀ, ರಾಮಾಚಾರಿ, ನಿನಗಾಗಿ, ವಧು, ಯಜಮಾನ, ಭಾರ್ಗವಿ ಎಲ್‌ಎಲ್‌ಬಿ, ಕರಿಮಣಿ, ದೃಷ್ಟಿಬೊಟ್ಟು ಧಾರಾವಾಹಿಗಳು ಪ್ರಸಾರವಾಗುತ್ತವೆ. ಈ 9ರಲ್ಲಿ 10ನೇ ವಾರದ ಟಾಪ್ ಟಿಆರ್‌ಪಿ ಪಡೆದ ಸೀರಿಯಲ್ ಯಾವುದು? ಹೀಗಿದೆ ವಿವರ.
ಕಲರ್ಸ್ ಕನ್ನಡದಲ್ಲಿ ಸಾಲು ಸಾಲು ಹೊಸ ಧಾರಾವಾಹಿಗಳು ಪ್ರಸಾರ ಆರಂಭಿಸಿವೆ. ಆದರೆ, ನಿರೀಕ್ಷೆ ಹೊತ್ತು ಬಂದ ಆ ಸೀರಿಯಲ್‌ಗಳು ಅಂದುಕೊಂಡಂತೆ ಮೋಡಿ ಮಾಡುತ್ತಿಲ್ಲ. ಟಿಆರ್‌ಪಿಯಲ್ಲಿಯೂ ಹೆಚ್ಚು ನಂಬರ್ ತರುತ್ತಿಲ್ಲ. ಈ ಹಿಂದಿನ ಹಳೇ ಸೀರಿಯಲ್‌ಗಳೇ ಟಾಪ್ ಸ್ಥಾನದಲ್ಲಿ ಮುಂದುವರಿಯುತ್ತಿವೆ. ಇದೀಗ 10ನೇ ವಾರದ ಟಿಆರ್‌ಪಿ ರೇಟಿಂಗ್ ಹೊರಬಿದ್ದಿದ್ದು, ಕಲರ್ಸ್ ಕನ್ನಡದ 9 ಧಾರಾವಾಹಿಗಳ ಟಿಆರ್‌ಪಿ ಅಂಕಿ ಅಂಶ ಇಲ್ಲಿದೆ.
ಲಕ್ಷ್ಮೀ ಬಾರಮ್ಮ: ಕಲರ್ಸ್‌ನ ಕನ್ನಡ ವಾಹಿನಿಯ ಲಕ್ಷ್ಮೀ ಬಾರಮ್ಮ ಸೀರಿಯಲ್ 10ನೇ ವಾರದ ಟಿಆರ್‌ಪಿ ರೇಟಿಂಗ್‌ನಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಈ ಸೀರಿಯಲ್ 5.1 ಟಿಆರ್‌ಪಿ ಪಡೆದ ಮೂಲಕ ನಂಬರ್ 1 ಸ್ಥಾನದಲ್ಲಿದೆ. ಕೆಲ ವಾರಗಳ ಹಿಂದೆ ಅಚ್ಚರಿಯ ರೀತಿಯಲ್ಲಿ ಕನ್ನಡ ಕಿರುತೆರೆಯ ನಂಬರ್ 1 ಧಾರಾವಾಹಿಯಾಗಿಯೂ ಹೊರಹೊಮ್ಮಿತ್ತು.
ಭಾಗ್ಯಲಕ್ಷ್ಮೀ: ಸದಾ ಮೊದಲ ಸ್ಥಾನದಲ್ಲಿಯೇ ಕಾಣಿಸುವ ಕಲರ್ಸ್ ಕನ್ನಡದ ನಂಬರ್ 1 ಧಾರಾವಾಹಿ ಭಾಗ್ಯಲಕ್ಷ್ಮೀ. 10ನೇ ವಾರದ ಟಿಆರ್‌ಪಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿತ ಕಂಡಿದೆ. ಈ ಧಾರಾವಾಹಿ 5.0 ಟಿಆರ್‌ಪಿ ಪಡೆದುಕೊಂಡಿದೆ
ರಾಮಾಚಾರಿ: ಕಲರ್ಸ್‌ನ ಇನ್ನೊಂದು ಪ್ರಮುಖ ಸೀರಿಯಲ್‌ಗಳಲ್ಲಿ ರಾಮಾಚಾರಿ ಸಹ ಒಂದು. ಈ ಸೀರಿಯಲ್ 10ನೇ ವಾರದ ಟಿಆರ್‌ಪಿಯಲ್ಲಿ 4.9 ಟಿವಿಆರ್ ರೇಟಿಂಗ್ಸ್ ಪಡೆದು, ಮೂರನೇ ಸ್ಥಾನದಲ್ಲಿದೆ. 9ನೇ ವಾರಕ್ಕಿಂತ ಚೂರು ಕುಸಿತ ಕಂಡಿದೆ.
ನಿನಗಾಗಿ: ಕಲರ್ಸ್ ಕನ್ನಡದ ನಿನಗಾಗಿ ಸೀರಿಯಲ್‌ಗೂ ದೊಡ್ಡ ವೀಕ್ಷಕ ವರ್ಗವಿದೆ. ಈ ಸೀರಿಯಲ್, 10ನೇ ವಾರದ ಟಿಆರ್‌ಪಿಯಲ್ಲಿ4.7 ರೇಟಿಂಗ್ಸ್ ಪಡೆದು ನಾಲ್ಕನೇ ಸ್ಥಾನ ಅಲಂಕರಿಸಿದೆ.
ಭಾರ್ಗವಿ ಎಲ್‌ಎಲ್‌ಬಿ: ಹೊಸ ಧಾರಾವಾಹಿ ಭಾರ್ಗವಿ ಎಲ್‌ಎಲ್‌ಬಿ ವೀಕ್ಷಕರಿಂದ ಮೆಚ್ಚುಗೆ ಪಡೆದಿದೆ. 10ನೇ ವಾರ 4.6 ಟಿವಿಆರ್ ಪಡೆದುಕೊಂಡು ಐದನೇ ಸ್ಥಾನದಲ್ಲಿದೆ. 9ನೇ ವಾರ 4.9 ಟಿವಿಆರ್ ಪಡೆದಿತ್ತು ಈ ಸೀರಿಯಲ್.
ದೃಷ್ಟಿಬೊಟ್ಟು: ಕಲರ್ಸ್ ಕನ್ನಡದ ದೃಷ್ಟಿಬೊಟ್ಟು ಸೀರಿಯಲ್ 3.9 ರೇಟಿಂಗ್ ಪಡೆದು, 10ನೇ ವಾರದ ಟಿಆರ್‌ಪಿ ಆರನೇ ಸ್ಥಾನದಲ್ಲಿದೆ. 9ನೇ ವಾರದ ಟಿಆರ್‌ಪಿಯಲ್ಲಿಯೂ ಈ ಸೀರಿಯಲ್ 3.9 ರೇಟಿಂಗ್ ಅನ್ನೇ ಪಡೆದಿತ್ತು.
ವಧು: ವಧು ಸೀರಿಯಲ್ ಆರಂಭದಲ್ಲಿ ನಿರೀಕ್ಷೆ ಮೂಡಿಸಿದರೂ, ಟಿಆರ್‌ಪಿಯಲ್ಲಿ ಮೋಡಿ ಮಾಡುತ್ತಿಲ್ಲ. 10ನೇ ವಾರದ ಟಿಆರ್‌ಪಿಯಲ್ಲಿಈ ಸೀರಿಯಲ್‌ಗೆ 3.1 ಟಿಆರ್‌ಪಿ ಪಡೆದುಕೊಂಡು, ಏಳನೇ ಸ್ಥಾನದಲ್ಲಿದೆ.
ಕರಿಮಣಿ: ಕರಿಮಣಿ ಸೀರಿಯಲ್ 9ನೇ ವಾರದ ಟಿಆರ್‌ಪಿ ರೇಟಿಂಗ್‌ನಲ್ಲಿ 2.9 ಟಿಆರ್‌ಪಿ ಪಡೆದು ಎಂಟನೇ ಸ್ಥಾನದಲ್ಲಿದೆ. ಗ್ರಾಮೀಣ ಭಾಗದಲ್ಲಿ ಈ ಸೀರಿಯಲ್‌ಗೆ 2.7 ಟಿವಿಆರ್ ಸಿಕ್ಕಿದೆ.
ಯಜಮಾನ: ಯಜಮಾನ ಧಾರಾವಾಹಿ ಅದ್ಯಾಕೋ ಟಿಆರ್‌ಪಿಯಲ್ಲಿ ಮೋಡಿ ಮಾಡುತ್ತಿಲ್ಲ. ದೊಡ್ಡ ನಿರೀಕ್ಷೆ ಮೂಲಕ ಆಗಮಿಸಿದ್ದ ಈ ಸೀರಿಯಲ್, 10ನೇ ವಾರ 2.7 ರೇಟಿಂಗ್ ಪಡೆದು, 9ನೇ ಸ್ಥಾನದಲ್ಲಿದೆ.

ವಿಭಾಗ