Ramachari Serial: ಚಾರುಗೆ ಕಾಡುತ್ತಿದೆ ಭಯ; ರುಕ್ಕು ಅಪ್ಪ, ಅಮ್ಮನನ್ನು ತಾನೇ ಕೊಂದೆ ಎಂಬ ನೋವಿನಲ್ಲಿ ಹೆಚ್ಚಾಯ್ತು ಸಂಕಟ
ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಭಯದಿಂದಲೇ ತನ್ನ ಜೀವನ ನಡೆಸುತ್ತಿದ್ದಾಳೆ. ಅವಳಿಗೆ ರುಕ್ಕು ಬಗ್ಗೆ ಅನುಮಾನ ಆರಂಭವಾಗಿದೆ. ತಾನೇ ಅವಳ ತಂದೆ, ತಾಯಿಯನ್ನು ಕೊಂದೆ ಎಂಬ ವಿಚಾರ ಗೊತ್ತಾಗಿದೆ ಎಂದುಕೊಂಡಿದ್ದಾಳೆ.
ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಭ್ರಮೆಯಿಂದ ಬದುಕುವಂತಾಗಿದೆ. ರುಕ್ಕು ಹೇಳಿದ ಎಲ್ಲಾ ಮಾತು ಅವಳಿಗೆ ಭಯ ಹುಟ್ಟಿಸುತ್ತಿದೆ. ಅವಳು ಆಡದ ಮಾತುಗಳು ಸಹ ಅವಳಿಗೆ ಕೇಳಿಸುತ್ತಿದೆ. ರಾಮಾಚಾರಿ ಕಿಟ್ಟಿ ಹಾಗೂ ರುಕ್ಕುಗಾಗಿ ಕೋಣೆಯನ್ನು ಸಿದ್ಧಪಡಿಸುತ್ತಾ ಇರುತ್ತಾನೆ. ಆಗ ಚಾರು ಅಲ್ಲಿಗೆ ಹೋಗಿ ಅವನ ಜೊತೆ ಮಾತಾಡುತ್ತಾಳೆ. ನಾವು ಅವರಿಗಿಂತ ಮುಂದಿರಬೇಕು. ನಾನು ಮೊದಲು ತಾಯಿಯಾಗಬೇಕು ಎಂದು ಬಯಸುತ್ತಾಳೆ. ಹೀಗೆ ಅವರಿಬ್ಬರು ಒಂದಿಷ್ಟು ತಮಾಷೆ ಮಾಡುತ್ತಾರೆ.
ಚಾರುಗೆ ಭ್ರಮೆ
ಆ ನಂತರ ಅವಳು ಕೋಣೆಯಿಂದ ಹೊರಗಡೆ ಬರುತ್ತಾಳೆ. ಬಂದು ಬೇರೆ ಕಡೆ ಹೋಗುತ್ತಿರುವಾಗ ಹಿಂದಿನಿಂದ ಚಾರು ಎಂದು ರುಕ್ಕು ಕರೆದ ಹಾಗೆ ಕೇಳಿಸುತ್ತದೆ. ಹಿಂತಿರುಗಿ ನೋಡಿದರೆ ರುಕ್ಕು ಮಾತಾಡುತ್ತಾ ಇರುತ್ತಾಳೆ. ಏನು ಆಶ್ಚರ್ಯ ಆಯ್ತಾ? ನಾನೇ ನಿನ್ನನ್ನು ಕರೆದಿದ್ದು. ಇಷ್ಟು ದಿನ ಅಕ್ಕ ಅಂತ ಹೇಳ್ತಾ ಇದ್ದವಳು ಈಗ ಹೇಗೆ ಚಾರು ಅಂದ್ಲು ಅಂತ ಆಶ್ಚರ್ಯ ಆಗ್ತಾ ಇದ್ಯಾ? ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಚಾರು ಮನದಲ್ಲೇ ಭಯ ಪಡುತ್ತಾಳೆ.
ಆನಂತರದಲ್ಲಿ ರುಕ್ಕು “ನನಗೆ ಗೊತ್ತು ನನ್ನ ತಂದೆ ತಾಯಿನಾ ನೀನೇ ಕೊಂದೆ” ಎಂದು ಹೇಳುತ್ತಾಳೆ. ಅದನ್ನು ಕೇಳಿ ಇವಳು ಗಾಬರಿಯಾಗುತ್ತಾಳೆ. ನಾನು ಈ ಮನೆಗೆ ಬಂದ್ರೆ ಒಳ್ಳೆದಾಗುತ್ತೆ ಅಂತ ನೀನು ಅಂದುಕೊಂಡಿದ್ದೆ ಅಲ್ವ? ಆದ್ರೆ ಹಾಗೆ ಆಗೋದಿಲ್ಲ ಎಂದು ಹೇಳುತ್ತಾಳೆ. ಆದರೆ ಇದೆಲ್ಲ ಚಾರು ಭ್ರಮೆ ಆಗಿರುತ್ತದೆ. ರುಕ್ಕು ಇನ್ನೂ ರೆಡಿಯಾಗುತ್ತಾ ಇರುತ್ತಾಳೆ. ಜಾನಕಿ ಅವಳನ್ನು ರೆಡಿ ಮಾಡ್ತಾ ಇರ್ತಾಳೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ