Ramachari Serial: ಅಣ್ಣಾಜಿ ಕತ್ತಿಗೆ ಕತ್ತಿ ಹಿಡಿದು ನಿಂತ ಚಾರು; ರುಕ್ಕುಗೆ ತಾಳಿ ಕಟ್ಟಲು ಮಂತ್ರ ಹೇಳಿದ ರಾಮಾಚಾರಿ
ರಾಮಾಚಾರಿ ಧಾರಾವಾಹಿಯಲ್ಲಿ ಕಿಟ್ಟಿ ಹಾಗೂ ರುಕ್ಕು ಹಸೆಮಣೆ ಏರಿದ್ದಾರೆ. ಆದರೆ ಈ ಮದುವೆಯನ್ನು ತಡೆಯಲು ಸರಿಯಾದ ಸಮಯಕ್ಕೆ ಅಣ್ಣಾಜಿ ಬಂದಿದ್ದಾರೆ. ಆದರೆ ಚಾರು ತನ್ನ ಜಾಣತನದಿಂದ ಮದುವೆ ಮಾಡಿಸಿದ್ದಾಳೆ.
ರಾಮಾಚಾರಿ ಧಾರಾವಾಹಿಯಲ್ಲಿ ಕಿಟ್ಟಿ ಮದುವೆಗೆ ಎಲ್ಲ ಸಿದ್ಧತೆಯೂ ಆಗಿದೆ. ಚಾರು ಎಲ್ಲ ತಯಾರಿ ಮಾಡಿಕೊಂಡಿದ್ದಾಳೆ. ಆದರೆ ಅಷ್ಟರಲ್ಲಾಗಲೇ ಅಣ್ಣಾಜಿ ಮನೆಯವರು ಮದುವೆ ಮಂಟಪಕ್ಕೆ ತಲುಪಿದ್ದಾರೆ. ಅವರು ಹೇಗಾದರೂ ಮಾಡಿ ರುಕ್ಕುವನ್ನು ಕರೆದುಕೊಂಡು ಹೋಗಬೇಕು ಎಂದುಕೊಂಡಿದ್ದಾರಾ? ಅಥವಾ ರಾಮಾಚಾರಿ ಕುಟುಂಬವನ್ನೇ ಸುಟ್ಟು ಹಾಕಬೇಕು ಎಂದುಕೊಂಡಿದ್ದಾರೆ ಎಂದು ತಿಳಿಯುವಂತಿಲ್ಲ. ಆ ರೀತಿಯಾಗಿ ದಂಡು ದಂಡಾಗಿ ಬಂದಿದ್ದಾರೆ.
ಆದರೆ ಚಾರು ಧೈರ್ಯಕ್ಕೆ ಮಾತ್ರ ಎಲ್ಲರೂ ಮೆಚ್ಚಲೇಬೇಕು ಅವಳು ಮುಂಚಿತವಾಗಿ ಎಲ್ಲ ಉಪಾಯ ಮಾಡಿಟ್ಟುಕೊಂಡು ಕತ್ತಿ ಹಾಗೂ ಖಾರದ ಪುಡಿಯನ್ನು ಒಂದು ಕಡೆ ಇಟ್ಟುಕೊಂಡಿದ್ದಳು. ಅವಳು ಖಾರದ ಪುಡಿಯನ್ನು ಅಣ್ಣಾಜಿ ಕಣ್ಣಿಗೆ ಎರಚಿ ಎಚ್ಚರಿಕೆ ನೀಡಿದಳು. ಆಗ ಅಣ್ಣಾಜಿ ಜೊತೆಗೆ ಬಂದವರೆಲ್ಲ ಸುಮ್ಮನೆ ನಿಂತುಕೊಂಡಿದ್ದರು. ಅಷ್ಟರಲ್ಲಾಗಲೇ ಅಲ್ಲೇ ಪಕ್ಕದಲ್ಲಿದ್ದ ಕತ್ತಿಯನ್ನು ಎತ್ತಿಕೊಂಡು ಚಾರು ಅಣ್ಣಾಜಿಯ ಕತ್ತಿನ ಮೇಲೆ ಇಟ್ಟುಕೊಂಡಳು.
ಅಣ್ಣಾಜಿ ಕೈಯ್ಯಿಂದ ಅಕ್ಷತೆ
ಅಷ್ಟೇ ಅಲ್ಲ ರುಕ್ಕು ಹಾಗೂ ಕಿಟ್ಟಿ ಮದುವೆ ಅವನ ಕೈಯ್ಯಿಂದಲೇ ಅಕ್ಷತೆ ಹಾಕಿಸಿದ್ದಾಳೆ. ಕೋವಿ ಹಿಡಿದುಕೊಂಡಿದ್ದ ಅಣ್ಣಾಜಿ ಕತ್ತಿ ನೋಡಿ ಸುಮ್ಮನಾಗಿದ್ದಾನೆ. ನಾರಾಯಣಾಚಾರ್ಯರು ಹಾಗೂ ಜಾನಕಿ ಕೂಡ ಚಾರು ನಿರ್ಧಾರವನ್ನು ಕಂಡು ಅಚ್ಚರಿಪಟ್ಟಿದ್ದಾರೆ. ತಮ್ಮ ಮನೆಯ ಸೊಸೆ ಇವಳು ಎಂದು ಹೆಮ್ಮೆ ಪಟ್ಟಿದ್ದಾರೆ. ಅಂತು ಕಾಪಾಡಿಯೇ ಬಿಟ್ಟಳು ಎಂದು ಅಂದುಕೊಂಡಿದ್ದಾರೆ.
ಚಾರು ಕೊಟ್ಟ ಸೂಚನೆ
ಚಾರು ಸೂಚನೆ ನೀಡುತ್ತಾ ಹೋದಂತೆ ಮದುವೆ ಆಗುತ್ತಾ ಹೋಯ್ತು. ನೀನು ಮಂತ್ರ ಹೇಳು ರಾಮಾಚಾರಿ ಉಳಿದಿದ್ದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾ ತಾಳಿ ಕೊಟ್ಟಳು. ಈಗ ಕಿಟ್ಟಿ ಅದನ್ನು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದಾನೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ