Ramachari Serial: ಚಾರುಗೆ ಬಾಳು ನರಕ ಮಾಡಲು ಬಂದ ರುಕ್ಕು; ಜೈಲಿಗೆ ಹೋಗಿ ವೈಶಾಖಳ ಭೇಟಿ
ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಮನೆಯ ಎಲ್ಲ ಸಮಸ್ಯೆಗಳು ಈಗ ನಿಲ್ಲುತ್ತವೆ ಎಂದು ಅಂದುಕೊಳ್ಳುವಷ್ಟರಲ್ಲಿ ಮತ್ತೇನೋ ಒಂದು ಆಗಿದೆ. ರಾಮಾಚಾರಿ ಮನೆಗೆ ಗ್ರಹಚಾರ ತಪ್ಪಿದ್ದಲ್ಲ ಎನ್ನುವಂತಾಗಿದೆ.
ರಾಮಾಚಾರಿ ಮನೆಗೆ ಹೊಸದಾಗಿ ಸೊಸೆಯಾಗಿ ಬಂದ ರುಕ್ಕು ಕೂಡ ವೈಶಾಖ ಕಡೆಯವಳು ಎಂದು ಯಾರೂ ಊಹೆಯನ್ನೂ ಮಾಡಿರಲಿಲ್ಲ. ಆದರೆ ಮನೆಯಿಂದ ನಾನು ದೇವಸ್ಥಾನಕ್ಕೆ ಹೋಗಿ ಬರ್ತೀನಿ ಎಂದು ಸುಳ್ಳು ಹೇಳಿಕೊಂಡು ಜೈಲಿನಲ್ಲಿರುವ ವೈಶಾಖಳನ್ನು ನೋಡಲು ರುಕ್ಕು ಬಂದಿದ್ದಾಳೆ. ಅವಳನ್ನು ಕರೆಸಿಕೊಂಡು ವೈಶಾಖ ಏನೇನಾಗಿದೆ ಎಂಬ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾಳೆ.
ಅಣ್ಣನ ಹತ್ತಿರ ಅತ್ತಿಗೆ ಬಗ್ಗೆ ಪ್ರಶ್ನೆ ಮಾಡಿದ ತಂಗಿ
ಹೀಗಿರುವಾಗ ಮನೆಯಲ್ಲಿ ಜಾನಕಿ ಕೇಳುತ್ತಾಳೆ. ಕಿಟ್ಟಿ ಆಗಷ್ಟೇ ಬಂದಿರುತ್ತಾನೆ. ಶೃತಿ ಅವನ ಬಳಿ ಹೋಗುತ್ತಾಳೆ. ಹೋಗಿ ಅಣ್ಣ ಎಲ್ಲಿ ನೀನೊಬ್ಬನೆ ಕಾಣ್ತಾ ಇದೀಯ ಅತ್ಗೆ ಕಾಣ್ತಾನೇ ಇಲ್ಲ. ನಾನು ಒಂದು ವಿಚಾರ ಮಾತಾಡ್ಬೇಕಿತ್ತು. ಅದೇನೆಂದ್ರೆ ಈಗ ಎಲ್ಲರೂ ಮದುವೆಗೂ ಮುನ್ನ ಫ್ರೀವೆಡ್ಡಿಂಗ್ ಶೂಟ್ ಮಾಡಿಸುತ್ತಾರೆ. ನಿಮಗಂತು ಮಾಡಿಸೋಕೆ ಆಗ್ಲೇ ಇಲ್ಲ. ಅಟ್ಲೀಸ್ಟ್ ಪೋಸ್ಟ್ ವೆಡ್ಡಿಂಗ್ ಶೂಟ್ ಆದ್ರೂ ಮಾಡ್ಸಬೇಕಿತ್ತು ಎಂದು ಹೇಳುತ್ತಾಳೆ.
ದೇವಸ್ಥಾನಕ್ಕೆ ಹೋಗಿದ್ದಲ್ಲ ರುಕ್ಕು
ಆದರೆ ಆ ವಿಚಾರವನ್ನು ಕಿಟ್ಟಿ ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಜಾನಕಿ ಅವನ ಪಕ್ಕ ರುಕ್ಕು ಇರದೇ ಇರುವುದನ್ನು ಗಮನಿಸಿ. ನನ್ನ ಸೊಸೆ ಎಲ್ಲಿ ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಅವನು ಹೇಳುತ್ತಾನೆ, ಅವಳು ಏನೋ ಹರಕೆ ಹೊತ್ತುಕೊಂಡಿದ್ದಳಂತೆ ಈಗ ಒಬ್ಬಳೇ ಹೋಗಿ ಆ ಹರಕೆ ತೀರಿಸಿ ಬರಬೇಕು ಎಂದು ಹೇಳಿದ್ದಾಳೆ. ಆ ಕಾರಣಕ್ಕಾಗಿ ನಾನು ಅವಳ ಜೊತೆ ಹೋಗಿಲ್ಲ ಎಂದು ಹೇಳುತ್ತಾನೆ. ಆದರೂ ಈ ಜಾಗ ಹೊಸದು ನೀನು ಜೊತೆಗೆ ಹೋಗಬೇಕಿತ್ತು ಎಂದು ಎಲ್ಲರೂ ಹೇಳುತ್ತಾರೆ.
ಇತ್ತ ನಡೆದದ್ದೇ ಬೇರೆ
ರುಕ್ಕು ಮದುವೆಯ ಮರುದಿನವೇ ಮನೆಯಲ್ಲಿ ಸುಳ್ಳು ಹೇಳಿಕೊಂಡು ಜೈಲಿಗೆ ಬಂದಿದ್ಧಾಳೆ. ಬಂದು ವೈಶಾಖಳನ್ನು ಭೇಟಿಯಾಗಿ ನಾನು ನಿನ್ನ ಜೊತೆ ಕೈ ಜೋಡಿಸುತ್ತೇನೆ ಎಂದು ಹೇಳಿದ್ದಾಳೆ. ವೀಕ್ಷಕರಲ್ಲಿ ಇದು ನಿರೀಕ್ಷೆಯನ್ನು ಹುಸಿ ಮಾಡಿದೆ. ಒಂದಾದನಂತರ ಒಂದು ಇದೇ ರೀತಿಯಾಗುತ್ತದೆ. ಯಾವಾಗಲೂ ಚಾರು ಜೀವನ ಸರಿಹೋಗೋದಿಲ್ಲ. ಸಮಸ್ಯೆಗಳೇ ಎದುರಾಗುತ್ತದೆ ಎಂದಿದ್ದಾರೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ