Ramachari Serial: ಕುಡಿದು ಮನೆಗೆ ಬಂದ ಕೋದಂಡನಿಗೆ ಹೊಡೆದ ನಾರಾಯಣಾಚಾರ್ಯರು; ಕಷ್ಟ ತೋಡಿಕೊಂಡ ಮಗನ ಮಾತು ಕೇಳಿ ಜಾನಕಿ ಕಣ್ಣೀರು
ರಾಮಾಚಾರಿ ಧಾರಾವಾಹಿಯಲ್ಲಿ ಮತ್ತೆ ನಾರಾಯಣಾಚಾರ್ಯರ ಮನೆಯಲ್ಲಿ ನೆಮ್ಮದಿ ಕೆಡುತ್ತಿದೆ. ಅವರು ಇನ್ನು ಮುಂದಿನ ದಿನಗಳಲ್ಲಿ ನಾವು ಸುಖವಾಗಿ ಬದುಕಬಹುದು ಎಂದುಕೊಂಡಿರುತ್ತಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ.
ರಾಮಾಚಾರಿ ಧಾರಾವಾಹಿಯಲ್ಲಿ ಕಿಟ್ಟಿ ಹಾಗೂ ರುಕ್ಕು ಮದುವೆ ಆಗಿದೆ. ರುಕ್ಕು ತಾನು ಒಳ್ಳೆಯವಳಂತೆ ನಟನೆ ಮಾಡಿಕೊಂಡು ಈ ಮನೆ ಸೇರಿಕೊಂಡಿದ್ದಾಳೆ. ಕೋದಂಡನಿಗೆ ತನ್ನ ಹೆಂಡತಿಯನ್ನು ನೆನೆಸಿಕೊಂಡು ಹಾಗೂ ತನ್ನ ಜೀವನ ಹೀಗಾಯ್ತಲ್ಲ ಎಂದು ನೆನಪಿಸಿಕೊಂಡು ತುಂಬಾ ಬೇಸರ ಆಗಿದೆ. ಹಾಗಾಗಿ ಅವನು ಕುಡಿದುಕೊಂಡು ಮನೆಗೆ ಬಂದಿದ್ದಾನೆ. ಅವನು ಕುಡಿದು ಮನೆಗೆ ಬಂದಿದ್ದಾನೆ ಎಂದು ಅವನ ತಂದೆಗೆ ಕೋಪ ಬಂದಿದೆ. ಸಂಸ್ಕಾರ ತುಂಬಿರುವ ಈ ಮನೆಯಲ್ಲಿ ನೀನು ಯಾಕೆ ಈ ರೀತಿ ಮಾಡ್ತಾ ಇದ್ದೀಯಾ ಎಂದು ಪ್ರಶ್ನೆ ಮಾಡುತ್ತಾ ಥಳಿಸಿದ್ದಾರೆ.
ಕೋದಂಡನ ಅಂತರಾಳ
ಕೋದಂಡ ತುಂಬಾ ಬೇಸರ ಮಾಡಿಕೊಂಡಿದ್ದಾನೆ. ಮನೆಯವರೆಲ್ಲ ಎದೆ ಎತ್ತರಕ್ಕೆ ಬೆಳೆದ ಮಗನಿಗೆ ಹೊಡೆಯುವುದನ್ನು ನೋಡಿ ಬೇಸರ ಮಾಡಿಕೊಂಡಿದ್ದಾರೆ. ಯಾಕೆ ಇಲ್ಲಿ ಈ ರೀತಿ ಆಗ್ತಾ ಇದೆ ಎಂದು ಕಂಗಾಲಾಗಿದ್ದಾರೆ. ರುಕ್ಕು, ರಾಮಾಚಾರಿ, ಜಾನಕಿ ಎಲ್ಲರೂ ಅಲ್ಲೇ ನಿಂತಿದ್ದಾರೆ. ಆದರೂ ನಾರಾಯಣಾಚಾರ್ಯರು ಮಾತ್ರ ಹೊಡೆಯುವುದನ್ನು ನಿಲ್ಲಿಸಿಲ್ಲ.
ಕಣ್ಣೀರಿಟ್ಟ ಜಾನಕಿ
ಮುರಾರಿ ಹಾಗೂ ಶ್ರುತಿ ಕೂಡ ಅಲ್ಲೇ ಇದ್ದಾರೆ. ಎಲ್ಲರೂ ತಡೆಯುವ ಪ್ರಯತ್ನ ಮಾಡಿದ್ದಾರೆ. ಕೊನೆಗೆ ಸುಸ್ತಾಗಿ ಅವರು ನಿಲ್ಲಿಸಿದ್ದಾರೆ. ಯಾರಾದ್ರೂ ಈ ಮನೆಯಲ್ಲಿ ನನ್ನ ಕಷ್ಟ ಏನು ಎಂದು ಕೇಳಿದ್ದೀರಾ ಎಂದು ಕೋದಂಡ ಪ್ರಶ್ನೆ ಮಾಡುತ್ತಾನೆ. ಆಗ ಎಲ್ಲರೂ ಮೌನವಹಿಸುತ್ತಾರೆ. ಯಾಕೆಂದರೆ ಅವನಿಗೆ ಮಾತ್ರ ಹೆಂಡತಿ ಇಲ್ಲ. ಕಿಟ್ಟಿ, ರಾಮಾಚಾರಿ ಇಬ್ಬರೂ ತಮ್ಮ ಹೆಂಡತಿಯರ ಜೊತೆ ಸಂತೋಷದಿಂದ ದಿನ ಕಳೆಯುತ್ತಿದ್ದಾರೆ. ಅದು ಅವನಿಗೆ ಕಾಡಿದೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ