Ramachari Serial: ರಾಮಾಚಾರಿ ಕುಟುಂಬಕ್ಕೆ ಕಾದಿದೆ ಆಪತ್ತು; ರುಕ್ಕುವನ್ನು ಹುಡುಕಿ ಬಂದ ಅಣ್ಣಾಜಿ
ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ತನ್ನ ತಮ್ಮ ಕಿಟ್ಟಿ ಮದುವೆಗೆ ಎಲ್ಲ ತಯಾರಿ ಮಾಡಿಕೊಂಡಿದ್ದಾನೆ. ಮದುವೆ ಮಂಟಪವೂ ರೆಡಿಯಾಗಿದೆ. ಕಿಟ್ಟಿ ಬಂದು ಹಸೆಮಣೆ ಏರಿದ್ದಾನೆ. ಹೀಗಿರುವಾಗ ಅಣ್ಣಾಜಿ ಕುಟುಂಬ ರಾಮಾಚಾರಿಯನ್ನು ಹುಡುಕಿಕೊಂಡು ಬಂದಿದೆ.
ರಾಮಾಚಾರಿ ಧಾರಾವಾಹಿಯಲ್ಲಿ ರುಕ್ಕು ಹಾಗೂ ಕಿಟ್ಟಿಯ ಮದುವೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ತುಂಬಾ ಜನರನ್ನು ಮದುವೆಗೆ ಆಹ್ವಾನಿಸಿಲ್ಲ. ಆದರೈ ಸಾಕಷ್ಟು ಜನರು ಮದುವೆಗೆ ಬಂದಿದ್ದಾರೆ. ಜಾನಕಿ ತನ್ನ ಮಗನ ಮದುವೆ ಎಂದು ತುಂಬಾ ಖುಷಿಯಲ್ಲಿ ಓಡಾಡಿಕೊಂಡು ಕೆಲಸ ಮಾಡುತ್ತಾ ಇದ್ದಾಳೆ. ಇನ್ನು ಚಾರು ಕೂಡ ಎಲ್ಲ ಕೆಲಸವನ್ನು ಜವಾಬ್ಧಾರಿಯಿಂದ ಮಾಡುತ್ತಾ ಇದ್ದಾಳೆ. ಹೀಗಿರುವಾಗ ಅಣ್ಣಾಜಿ ಮನೆಯವರು ಹೇಗಾದರೂ ಮಾಡಿ ರುಕ್ಕುವನ್ನು ವಾಪಸ್ ಕರೆದುಕೊಂಡು ಹೋಗಬೇಕು ಎಂದು ಉಪಾಯ ಮಾಡುತ್ತಾ ಇದ್ದಾರೆ.
ಅವರೇನಾದರೂ ಮದುವೆ ಮನೆಗೆ ಬಂದರೆ ಅಲ್ಲಿ ರಕ್ತಪಾತ ಆಗುವುದು ಗ್ಯಾರಂಟಿಯಾಗಿದೆ. ಯಾಕೆಂದರೆ ಅವರು ರಾಮಾಚಾರಿ ಅವರ ಮನೆ ಹೆಣ್ಣು ಮಗಳನ್ನು ಅವರಿಗೇ ಗೊತ್ತಿಲ್ಲದಂತೆ ಕರೆದುಕೊಂಡು ಬಂದಿದ್ದಾನೆ ಎಂದು ತುಂಬಾ ಕೋಪದಲ್ಲಿದ್ದಾರೆ. ರಾಮಾಚಾರಿಯ ಕಾರಣದಿಂದ ಅವರ ಮನೆಯಲ್ಲಿ ಮದುವೆ ಕೂಡ ನಿಂತಿದೆ. ಅವರಿಗೆ ಅವಮಾನ ಆಗಿದೆ. ಅದಕ್ಕೆ ತಕ್ಕ ಬೆಲೆಯನ್ನು ಇವರು ತೆರಬೇಕು ಎಂದು ಅಣ್ಣಾಜಿ ಬಯಸಿದ್ದಾರೆ.
ರಾಮಾಚಾರಿ ಮನೆ ಹುಡುಕಾಟ
ರಾಮಾಚಾರಿ ಮನೆ ಎಲ್ಲಾಗುತ್ತದೆ ಎಂದು ಹಾದಿಬೀದಿಯಲ್ಲಿ ಸಿಕ್ಕಿದವರೆಲ್ಲರ ಬಳಿ ಕೇಳಿಕೊಂಡು ಅವರು ಬರುತ್ತಿದ್ದಾರೆ. ಆಗ ಯಾರೋ ಒಬ್ಬ ದಾರಿ ಹೇಳುತ್ತಾನೆ. ಇತ್ತ ಮುಹೂರ್ತದ ಸಮಯ ಆಗಿರುತ್ತದೆ. ರುಕ್ಕುನಾ ಕರೆದುಕೊಂಡು ಬರಲು ರಾಮಾಚಾರಿ ಹೇಳುತ್ತಾನೆ. ರಾಮಾಚಾರಿನೇ ಮದುವೆ ಮಂತ್ರಗಳನ್ನು ಹೇಳುತ್ತಾ ತಮ್ಮನ ಮದುವೆ ನಡೆಸುತ್ತಿದ್ದಾನೆ.
ಚಾರುಗೆ ಹೆಚ್ಚಾಗಿದೆ ಗಾಬರಿ
ಚಾರುಗೆ ಹಾಗೂ ಮುರಾರಿಗೆ ಇಬ್ಬರಿಗೂ ಗಾಬರಿಯಾಗಿದೆ. ಮುರಾರಿ ಹೊರಗಿನಿಂದ ಗಾಬರಿ ಆಗಿದೆ ಎನ್ನುವುದನ್ನು ತೋರಿಸಿಕೊಳ್ಳುತ್ತಿದ್ದಾನೆ. ಆದರೆ ಚಾರು ತೋರಿಸಿಕೊಳ್ಳುತ್ತಿಲ್ಲ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ