Ramachari Serial: ಚಾರುಗೆ ಕಾಟ ಕೊಡಲು ದೇವಸ್ಥಾನಕ್ಕೂ ಬಂದ್ಲು ವೈಶಾಖಾ; ಒಳ್ಳೆಯವರಿಗೆ ಇಲ್ಲಿ ಉಳಿಗಾಲವೇ ಇಲ್ಲ
Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ತನ್ನ ಮನೆಯವರಿಗಾಗಿ ಅವರ ಸುಖಕ್ಕಾಗಿ ತುಂಬಾ ತ್ಯಾಗ ಮಾಡುತ್ತಿದ್ದಾಳೆ. ಈಗ ಅಕ್ಕ ವೈಶಾಖ ಹೊತ್ತ ಹರಕೆಯನ್ನೂ ತಾನೇ ತೀರಿಸಬೇಕು ಎಂದು ಹೊರಟಿದ್ದಾಳೆ.
ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಎಲ್ಲರ ಒಳಿತನ್ನೇ ಬಯಸುತ್ತಾಳೆ. ಯಾರಿಗೆ ಏನಾದರೂ ತಾನು ನೊಂದುಕೊಳ್ಳುತ್ತಾಳೆ. ಅಷ್ಟು ಒಳ್ಳೆಯ ಗುಣ ಹೊಂದಿರುವ ಅವಳನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿ ಬಂದ ಅವಳ ಅಕ್ಕ ವೈಶಾಖ ಇನ್ನಷ್ಟು ಕೆಟ್ಟ ಬುದ್ದಿಯನ್ನು ಹೊತ್ತು ತಂದಿದ್ದಾಳೆ. ಸಾಕಷ್ಟು ಬಾರಿ ಈ ಬಗ್ಗೆ ಯೋಚನೆ ಮಾಡಿ, ರಾಮಾಚಾರಿ ಮನೆಗೆ ತಾನು ಏನೇನೆಲ್ಲ ಕೆಡುಕು ತರಬಹುದು ಎಂದು ಯೋಚನೆ ಮಾಡಿಕೊಂಡೇ ಬಂದಿದ್ದಾಳೆ. ಈಗ ಚಾರುಗೆ ತಾನು ಹರಕೆ ಹೊತ್ತುಕೊಂಡಿದ್ದೆ ಎಂಬ ವಿಚಾರವನ್ನು ತಿಳಿಸಿ ಅವಳಿಂದ ಆ ಎಲ್ಲ ಕೆಲಸ ಮಾಡಿಸಬೇಕು ಎಂದು ಅಂದುಕೊಂಡಿದ್ದಾಳೆ.
ವೈಶಾಖಾಳದ್ದು ಕೆಟ್ಟ ಉದ್ದೇಶ
ಹೀಗಿರುವಾಗ ವೈಶಾಖಾ ಮನೆಯಲ್ಲೇ ಕುಳಿತುಕೊಂಡು, ನನ್ನ ಬಳಿ ದೇವಸ್ಥಾನಕ್ಕೆ ಬರೋಕೆ ಆಗೋದಿಲ್ಲ. ನಿನಗೇ ಗೊತ್ತು ನನ್ನ ಕಾಲು ಸರಿ ಇಲ್ಲ. ಆದರೆ ನನ್ನ ಕಾಲಿನ ಸಲುವಾಗಿ ನೀನು ನಾನು ಹೊತ್ತ ಹರಕೆಯನ್ನು ತೀರಿಸಬೇಕು ಎಂದು ಹೇಳಿರುತ್ತಾಳೆ. ಆಗ ಚಾರು ಖುಷಿಯಿಂದ ಅದನ್ನು ಒಪ್ಪಿಕೊಂಡಿರುತ್ತಾಳೆ. ಆದರೆ ಹರಕೆ ಮಾತ್ರ ಸರಳವಾದ ಹರಕೆ ಆಗಿರುವುದಿಲ್ಲ. ಉರುಳು ಸೇವೆ ಮಾಡಬೇಕು, ಮುಡಿ ಕೊಡಬೇಕು ಎಂದೆಲ್ಲ ಹೇಳಿರುತ್ತಾಳೆ. ಆದರೂ ಚಾರು ಅದೆಲ್ಲವನ್ನೂ ಒಪ್ಪಿಕೊಂಡಿರುತ್ತಾಳೆ.
ಚಾರುಗೆ ಉಳಿಗಾಲವಿಲ್ಲ
ಅದಾದ ನಂತರ ಚಾರು ದೇವಸ್ಥಾನದಲ್ಲಿ ಎಲ್ಲ ಸೇವೆಯನ್ನು ಮಾಡುತ್ತಾ ಇರುತ್ತಾಳೆ. ಮೊದಲನೇಯದಾಗಿ ಅವಳು ಉರುಳು ಸೇವೆ ಮಾಡುತ್ತಾ ಇರುತ್ತಾಳೆ. ಆಗ ಅಲ್ಲಿಗೆ ವೈಶಾಖಾ ಬಂದು ಪಟಾಕಿ ಸಿಡಿಸುತ್ತಾಳೆ. ಹೇಗಾದರೂ ಮಾಡಿ ಅವಳಿಗೆ ತೊಂದರೆ ಮಾಡಬೇಕು ಎನ್ನುವುದೇ ವೈಶಾಖಾಳ ನಿರ್ಧಾರ ಆಗಿರುತ್ತದೆ. ಚಾರು ವೈಶಾಖಾ ಹೀಗೆಲ್ಲ ಮಾಡ್ತಾ ಇದ್ದಾಳೆ ಎಂಬ ಯಾವ ಸುಳಿವೂ ಇಲ್ಲದೇ ತನ್ನ ಪಾಡಿಗೆ ತಾನು ಒಳ್ಳೆ ನಿರ್ಧಾರದಿಂದ ಸೇವೆ ಮಾಡುತ್ತಿದ್ದಾಳೆ. ಒಳ್ಳೆಯವರಿಗೆ ಉಳಿಗಾಲವಿಲ್ಲ ಎಂದು ಹೇಳುವುದು ಇದೇ ಮಾತಿಗೆ ಎಂದೆನಿಸುತ್ತದೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ