Ramachari Serial: ಹೆಣ್ಣಾಗಿ ಮುಡಿ ಕೊಡಲು ಚಾರು ಒಪ್ಪಿದ್ಯಾಕೆ; ಅತ್ತೆ ಮಾತನ್ನೂ ಧಿಕ್ಕರಿಸಿ ತೆಗೆದುಕೊಂಡ ಈ ನಿರ್ಧಾರ ನೆರವೇರುತ್ತಾ?
Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ದೇವರಿಗೆ ಮುಡಿ ಕೊಡುತ್ತೇನೆ ಎಂದು ದೇವಸ್ಥಾನಕ್ಕೆ ಬಂದಿದ್ದಾಳೆ. ಆದರೆ ಆ ವಿಚಾರ ವೈಶಾಖಾ ಹಾಗೂ ರುಕ್ಕು ಇಬ್ಬರಿಗೆ ಮಾತ್ರ ಗೊತ್ತಿತ್ತು. ಈಗ ಜಾನಕಿ ವಿಷಯ ತಿಳಿದು ದೇವಸ್ಥಾನಕ್ಕೆ ಓಡಿ ಬಂದಿದ್ದಾಳೆ.
ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಅಕ್ಕ ವೈಶಾಖಾಳ ಕಾಲು ಸರಿಯಾಗಬೇಕು. ಅವಳು ಮೊದಲಿನಂತೆ ನಡೆಯಬೇಕು ಎಂಬ ಆಸೆಯನ್ನು ಹೊತ್ತಿದ್ದಾಳೆ. ಅದೇ ಕಾರಣಕ್ಕಾಗಿ ವೈಶಾಖಾ ಈಗಾಗಲೇ ತಾನು ದೇವರಿಗೆ ಹರಕೆ ಹೇಳಿಕೊಂಡಿದ್ದೆ ಎಂದು ಸುಳ್ಳು ಹೇಳಿ ಚಾರುವನ್ನು ಒಪ್ಪಿದ್ದಾಳೆ. ಅವಳು ಹೇಳಿದ ಎಲ್ಲ ಹರಕೆಯನ್ನು ತೀರಿಸಲು ಚಾರು ತಾನೇ ಬಂದಿದ್ದಾಳೆ. ಉರುಳು ಸೇವೆ, ಜೋತಿ ಸೇವೆ ಮಾಡಿ ಈಗ ಅವಳು ತನ್ನ ಮುಡಿಯನ್ನು ದೇವರಿಗೆ ಅರ್ಪಿಸಲು ರೆಡಿಯಾಗಿದ್ದಾಳೆ. ಆದರೆ ಜಾನಕಿಗೆ ಈ ವಿಚಾರ ಗೊತ್ತಾಗಿದೆ.
ಜಾನಕಿಗೆ ಗಾಬರಿ
ವೈಶಾಖಾ ಮತ್ತು ರುಕ್ಕು ಇಬ್ಬರೂ ದೇವಸ್ಥಾನದ ಬಳಿ ನಿಂತುಕೊಂಡು ಚಾರುಗೆ ಕಾಟ ಕೊಡುತ್ತಿದ್ದಾರೆ. ಅವಳು ಎಷ್ಟು ನೋವು ಅನುಭವಿಸುತ್ತಾಳೋ ಇವರಿಬ್ಬರೂ ಅಷ್ಟು ಖುಷಿ ಪಡುತ್ತಿದ್ದಾರೆ. ಹೀಗಿರುವಾಗ ಜಾನಕಿ ಬಂದವಳೇ ಗಾಬರಿಯಿಂದ ದೇವಸ್ಥಾನದ ಆವರಣದ ತುಂಬೆಲ್ಲಾ ಚಾರುವನ್ನು ಹುಡುಕುತ್ತಾಳೆ. ಚಾರು ಸಿಕ್ಕಿದ ನಂತರ ಬೈತಾಳೆ. “ಯಾಕೆ ಚಾರು ನೀನು ಎಲ್ಲ ವಿಷಯ ನನ್ನಿಂದ ಮುಚ್ಚಿಟ್ಟೆ? ಇದನ್ನೆಲ್ಲ ಮಾಡು ಎಂದು ಹೇಳಿದವರು ಯಾರು ನಿನಗೆ?” ಎಂದು ಪ್ರಶ್ನೆ ಮಾಡುತ್ತಾಳೆ.
ಆಗ ಜಾನಕಿ ಮಾತಿಗೆ ಚಾರು ಉತ್ತರ ಕೊಡಲೇಬೇಕಿತ್ತು. ಅವಳು ವೈಶಾಖಾ ವಿಚಾರವನ್ನು ಹೇಳುತ್ತಾಳೆ. ನಾನೇ ಈ ಎಲ್ಲ ಹರಕೆ ತೀರಿಸುತ್ತೇನೆ ಎಂದು ದೇವರ ಮುಂದೆ ಹೇಳಿದ್ದೇನೆ ಎಂದು ಹೇಳುತ್ತಾಳೆ. ಅದಾದ ನಂತರದಲ್ಲಿ ಜಾನಕಿ ಇನ್ನಷ್ಟು ಸಮಾಧಾನ ಮಾಡಿ ಮನೆಗೆ ಕರೆದುಕೊಂಡು ಬರುವ ಪ್ರಯತ್ನ ಮಾಡುತ್ತಾಳೆ. ಆದರೆ ಚಾರು ತಾನು ದೇವರಿಗೆ ಮಾತು ಕೊಟ್ಟಾಗಿದೆ, ಇನ್ನು ನನ್ನ ನಿರ್ಧಾರ ಬದಲಾಗೋದಿಲ್ಲ ಎಂದು ಹೇಳುತ್ತಾಳೆ. ಆ ಮಾತನ್ನು ಕೇಳಿ ಜಾನಕಿಗೆ ಏನು ಮಾಡಬೇಕು ಎಂದು ತೋಚದಾಗಿದೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope