Ramachari Serial: ಚಾರು ಕೆನ್ನೆಗೆ ಹೊಡೆದು ತಾನೇ ಅಳುತ್ತಿದ್ದಾಳೆ ಜಾನಕಿ; ರಾಮಾಚಾರಿ ಮುಂದೆ ಸತ್ಯ ಬಚ್ಚಿಟ್ಟ ಪತ್ನಿ
Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಶ್ರುತಿ ಹಾಗೂ ಜಾನಕಿಯ ಕಷ್ಟದ ದಿನಗಳು ಆರಂಭವಾಗಿದೆ. ಚಾರು ಕೆನ್ನೆಗೆ ಜಾನಕಿ ಹೊಡೆದಿದ್ದಾಳೆ. ರಾಮಾಚಾರಿಯ ಬಳಿ ಚಾರು ಯಾವ ವಿಷಯವನ್ನೂ ಹೇಳಿಕೊಂಡಿಲ್ಲ.

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಅಳುತ್ತಾ ಕುಳಿತಿದ್ದಾಳೆ. ಆದರೆ ರಾಮಾಚಾರಿ ಕೋಣೆಗೆ ಬಂದ ತಕ್ಷಣ ಅವನಿಗೆ ಗೊತ್ತಾಗದ ಹಾಗೆ ಕಣ್ಣೊರೆಸಿಕೊಳ್ಳುತ್ತಾಳೆ. ಆದರೂ ರಾಮಾಚಾರಿಗೆ ಅನುಮಾನ ಬರುತ್ತದೆ. “ಯಾಕೆ ಕಣ್ಣೆಲ್ಲ ಕೆಂಪಾಗಿದೆ? ಅಳ್ತಾ ಇದ್ದೀರಾ?” ಎಂದು ಪ್ರಶ್ನೆ ಮಾಡುತ್ತಾನೆ. ಆಗ ಚಾರು ಮತ್ತೆ ಸುಳ್ಳು ಹೇಳುತ್ತಾಳೆ. “ಇಲ್ಲ ರಾಮಾಚಾರಿ, ನಾನು ಏನೋ ಕೆಲ್ಸ್ ಮಾಡ್ತಾ ಇದ್ದೆ. ಆಗ ಕಣ್ಣಲ್ಲಿ ಧೂಳು ಬಿತ್ತು, ಹಾಗಾಗಿ ಸ್ವಲ್ಪ ಕಣ್ಣುರಿ” ಎಂದು ಹೇಳುತ್ತಾಳೆ. ಆಗ ರಾಮಾಚಾರಿ, ಚಾರು ಹೇಳಿದ ಮಾತನ್ನೇ ನಂಬಿಕೊಂಡು ಸುಮ್ಮನಾಗುತ್ತಾನೆ. ಆದರೂ, ಏನೇ ಕಷ್ಟ ಬಂದ್ರೂ ನನ್ನತ್ರ ಹೇಳಿಕೊಳ್ಳಿ ಎಂಬ ಮಾತೊಂದನ್ನು ಹೇಳಿರುತ್ತಾನೆ. ಚಾರು ತನ್ನ ಕೆನ್ನೆಗೆ ಅತ್ತೆ ಹೊಡೆದಿದ್ದಾರೆ ಎಂಬ ಮಾತನ್ನು ಅವನ ಮುಂದೆ ಹೇಳಲಾಗದೆ ಸುಮ್ಮನಾಗುತ್ತಾಳೆ.
ಅಳುತ್ತಲೇ ಕೂತ ಜಾನಕಿ
ಇತ್ತ ಜಾನಕಿ ತಾನು ಮಾಡಿದ ತಪ್ಪಿಗೆ ಅಳುತ್ತಾ ಹಣೆ ಚಚ್ಚಿಕೊಳ್ಳುತ್ತಾಳೆ. “ನೀನು ಮಾಡಿದ ಒಂದು ತಪ್ಪಿನಿಂದಾಗಿ ನಾನು ಎಷ್ಟೆಲ್ಲ ಅನುಭವಿಸಬೇಕಾಗಿದೆ ನೋಡು ಈಗ” ಎಂದು ಶ್ರುತಿ ಹತ್ತಿರ ಹೇಳಿಕೊಳ್ಳುತ್ತಾಳೆ. “ನನ್ನ ಮುದ್ದಿನಂತ ಸೊಸೆಗೆ ನಾನು ಈ ಕೈಯ್ಯಾರೆ ಹೊಡೆದುಬಿಟ್ಟೆ. ಈಗ ಈ ಕೈಗೆ ನಾನು ಶಿಕ್ಷೆಕೊಟ್ಟುಕೊಳ್ಳಬೇಕು” ಎಂದು ಹೇಳುತ್ತಾ, ತನ್ನ ಕೈಯ್ಯನ್ನು ಗೋಡೆಗೆ ಹಾಗೂ ಬಾಗಿಲಿಗೆ ನೋವಾಗುವಂತೆ ಬಡಿಯುತ್ತಾಳೆ. ಅಮ್ಮನಿಗೆ ನೋವಾಗಬಾರದು ಎಂದು ಶ್ರುತಿ ತಡೆಯಲು ಮುಂದಾಗುತ್ತಾಳೆ. ಆದರೆ, ಕೋಪದಿಂದ ಜಾನಕಿ ಅವಳನ್ನು ತಳ್ಳುತ್ತಾಳೆ. ಆಗ ಶ್ರುತಿ ಸುಮ್ಮನಾಗುತ್ತಾಳೆ.
ಎಂದಿಗೂ ನಮ್ಮ ಮನೆಗೆ ಒಳ್ಳೆಯದನ್ನೇ ಮಾಡುವ ಚಾರು ಕೆನ್ನೆಗೆ ತಾನು ಹೊಡೆದೆ ಎಂಬುದೇ ಜಾನಕಿಗೆ ಈಗ ನೋವಿನ ಸಂಗತಿ. ಸಾಕಷ್ಟು ಕಷ್ಟಪಟ್ಟು ನಿನ್ನ ಬೆಳೆಸಿದರೂ ನೀನು ಬುದ್ದಿ ಕಲಿಯಲಿಲ್ಲ ಎಂದು ಶ್ರುತಿಗೆ ಹೇಳುತ್ತಾ, ಸಂಕಷ್ಟದ ದಿನಗಳನ್ನು ಜಾನಕಿ ಕಳೆಯುತ್ತಿದ್ದಾಳೆ. ಇಂದಲ್ಲ ನಾಳೆ ಶ್ರುತಿ ಬಸುರಾಗಿರುವ ಸತ್ಯ ಎಲ್ಲರಿಗೂ ಗೊತ್ತಾಗುತ್ತದೆ ಎಂದು ತಿಳಿದಿದ್ದರೂ ಈಗ ಏನೂ ಹೇಳಲಾಗದ ಸ್ಥಿತಿಯಲ್ಲಿ ಜಾನಕಿ ಇದ್ದಾಳೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ವೀಕ್ಷಕರ ಅಭಿಪ್ರಾಯ
ಈ ಧಾರಾವಾಹಿಯಲ್ಲಿ ಗಂಡಸರೇ ಇಲ್ಲ. ಇಬ್ಬರು ಸೊಸೆಯರು ಮನೆ ಹಾಳು ಮಾಡ್ತಾ ಇದ್ದರೂ ಯಾರಿಗು ಗೊತ್ತಾಗ್ತ್ಲಿಲ್ಲ. ಈ ಧಾರಾವಾಹಿ ನೋಡೋಕೆ ಮನಸಿಲ್ಲ. ಇನ್ನು ಎಷ್ಟು ಅಂತ ಎಳೀತೀರಾ ಧಾರಾವಾಹಿನಾ? ಈ ರೀತಿ ಅಭಿಪ್ರಾಯಗಳು ವೀಕ್ಷಕರಿಂದ ಕೇಳಿ ಬರುತ್ತಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ
