Ramachari Serial: ಕೊನೆಗೂ ಮುಡಿಕೊಟ್ಟೇಬಿಟ್ಲು ಚಾರು; ವೈಶಾಖಾ ಮೇಲೆ ಸಿಟ್ಟಾದ ರಾಮಾಚಾರಿ, ಜಾನಕಿಗೂ ಬೈಗುಳ
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ಕೊನೆಗೂ ಮುಡಿಕೊಟ್ಟೇಬಿಟ್ಲು ಚಾರು; ವೈಶಾಖಾ ಮೇಲೆ ಸಿಟ್ಟಾದ ರಾಮಾಚಾರಿ, ಜಾನಕಿಗೂ ಬೈಗುಳ

Ramachari Serial: ಕೊನೆಗೂ ಮುಡಿಕೊಟ್ಟೇಬಿಟ್ಲು ಚಾರು; ವೈಶಾಖಾ ಮೇಲೆ ಸಿಟ್ಟಾದ ರಾಮಾಚಾರಿ, ಜಾನಕಿಗೂ ಬೈಗುಳ

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಅಕ್ಕನ ಬದಲಾಗಿ ತಾನು ಹರಕೆ ತೀರಿಸುತ್ತೇನೆ ಎಂದು ದೇವಸ್ಥಾನಕ್ಕೆ ಹೋಗಿ ಮುಡಿಕೊಟ್ಟು ಬಂದಿದ್ದಾಳೆ. ಆದರೆ ರಾಮಾಚಾರಿಗೆ ಈ ವಿಷಯ ಮೊದಲೇ ಗೊತ್ತಾಗಲೇ ಇಲ್ಲ. ಗೊತ್ತಾಗಿದ್ದರೆ ಪರಿಸ್ಥಿತಿ ಹೀಗಿರುತ್ತಿರಲಿಲ್ಲ.

ರಾಮಾಚಾರಿ ಧಾರಾವಾಹಿ
ರಾಮಾಚಾರಿ ಧಾರಾವಾಹಿ (ಕಲರ್ಸ್‌ ಕನ್ನಡ)

ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಪ್ರೀತಿಯಿಂದ ತನ್ನ ಹೆಂಡತಿ ಚಾರುಗೆ ಎಂದು ಮಲ್ಲಿಗೆ ಹೂವು ತಂದಿರುತ್ತಾನೆ. ಆದರೆ ಅದನ್ನು ಅವಳಿಗೆ ಮುಡಿಸಬೇಕು ಎನ್ನುವಷ್ಟರಲ್ಲಿ ಅವಳ ತಲೆಯಲ್ಲಿ ಕೂದಲೇ ಇರುವುದಿಲ್ಲ. ಅದನ್ನು ನೋಡಿ ರಾಮಾಚಾರಿಗೆ ತುಂಬಾ ಕೋಪ ಬರುತ್ತದೆ. “ಯಾಕೆ ಈ ರೀತಿ ಮಾಡಿಕೊಂಡಿದ್ದೀರಾ? ಏನಾಯ್ತು?” ಎಂದು ಪ್ರಶ್ನೆ ಮಾಡುತ್ತಾನೆ. ಈ ರೀತಿ ಪ್ರಶ್ನೆ ಮಾಡಿದಾಗ ಚಾರು ಸತ್ಯ ಹೇಳುತ್ತಾಳೆ. ವೈಶಾಖಾ ಅಕ್ಕನ ಸಲುವಾಗಿ ನಾನು ಇಷ್ಟೆಲ್ಲ ಮಾಡಿದೆ ಎಂದು ಹೇಳುತ್ತಾಳೆ. ಆ ಮಾತನ್ನು ಕೇಳಿ ಅವನಿಗೆ ಇನ್ನಷ್ಟು ಕೋಪ ಬರುತ್ತದೆ.

ಸಿಟ್ಟಿಗೆದ್ದ ರಾಮಾಚಾರಿ

ಇದನ್ನೆಲ್ಲ ಯಾರನ್ನು ಕೇಳಿ ಮಾಡಿದ್ರಿ? ನೀವು ಎಂದು ಮತ್ತೆ ಪ್ರಶ್ನೆ ಮಾಡ್ತಾನೆ. ಆದರೆ ಎಲ್ಲದಕ್ಕೂ ಉತ್ತರ ಮಾತ್ರ ವೈಶಾಖಾ ಆಗಿರುತ್ತಾಳೆ. ಅವಳಿಗೆ ತುಂಬಾ ಬೇಸರ ಆಗುತ್ತದೆ. ಆದರೂ ಅಕ್ಕನಿಗಾಗಿ ನಾನು ಇಷ್ಟಾದರೂ ಮಾಡಿದ್ದೇನೆ ಎಂಬ ತೃಪ್ತಿ ಇರುತ್ತದೆ. ತನ್ನ ಹೆಂಡತಿಗೆ ಹೀಗಾಯ್ತಲ್ಲ ಎಂದು ರಾಮಾಚಾರಿ ತುಂಬಾ ನೋವು ಮಾಡಿಕೊಂಡು ವೈಶಾಖಾಳನ್ನೇ ಪ್ರಶ್ನೆ ಮಾಡೋಣ ಎಂದು ಅವಳ ಬಳಿ ಹೋಗುತ್ತಾನೆ. ವೀಲ್‌ಚೇರ್‌ ಮೇಲೆ ಕುಳಿತುಕೊಂಡಿದ್ದ ವೈಶಾಖಾಳನ್ನು ವೇಗವಾಗಿ ಬೇರೆ ಕಡೆ ರುಕ್ಕು ತಳ್ಳಿಕೊಂಡು ಹೋಗುತ್ತಾಳೆ.

ಜಾನಕಿಗೂ ಬೈಗುಳ

ಆದರೆ ಅದಕ್ಕೂ ಮುನ್ನವೇ ವೈಶಾಖಾ ಇವರಿಬ್ಬರೂ ಆಡುತ್ತಿರುವ ಮಾತುಗಳನ್ನು ಕೇಳಿಸಿಕೊಂಡಿರುತ್ತಾಳೆ. ಅವಳ ಜೊತೆ ರುಕ್ಕು ಕೂಡ ಸೇರಿಕೊಂಡಿರುತ್ತಾಳೆ. ಸೀದಾ ಇವನು ವೈಶಾಖಾಳ ಹತ್ತಿರ ಹೋಗಿ “ಯಾಕತ್ಗೆ ನನ್ನ ಹೆಂಡತಿಗೆ ಈ ರೀತಿ ಮಾಡಿದ್ದೀರಾ? ಅವರ ಹತ್ತಿರ ಇದನ್ನೆಲ್ಲ ಮಾಡಿಸಬೇಕು ಅಂದ್ರೆ ನನತ್ರ ಒಂದು ಮಾತು ಕೇಳಬೇಕು ಎಂದು ನಿಮಗೆ ಅನಿಸಿಲ್ವಾ? ಎಂದು ಪ್ರಶ್ನೆ ಮಾಡುತ್ತಾನೆ. ಜೊತೆಗೆ ತಾಯಿ ಜಾನಕಿಗೂ ಬೈದಿದ್ದಾನೆ. ನೀನಾದ್ರೂ ತಡಿಬಾರದಿತ್ತಾ?” ಎಂದು ಕೇಳಿದ್ದಾನೆ. “ಇವರಿಗಂತೂ ಏನೂ ಗೊತ್ತಾಗಲ್ಲ ನೀವೆಲ್ಲ ದೊಡ್ಡವರು ನೀವು ಬುದ್ಧಿ ಹೇಳೋದು ಬಿಟ್ಟು ಹೀಗ್ ಮಾಡೋದಾ? ಇದರಿಂದ ಅವರ ಅಂದಾನೇ ಹಾಳಾಗೋಯ್ತು” ಎಂದು ರೇಗಾಡುತ್ತಾನೆ. ನಾನು ಕೇಳಿದ ಎಲ್ಲ ಪ್ರಶ್ನೆಗಳಿಗೆ ನೀವು ಉತ್ತರ ಕೊಡಲೇಬೇಕು ಅತ್ಗೆ ಎಂದು ಗದರುತ್ತಿದ್ದಾನೆ.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

Whats_app_banner