Ramachari Serial: ಹೆಂಡತಿಗೆ ಐ ಲವ್ ಯು ಎಂದ ರಾಮಾಚಾರಿ; ಖುಷಿಯಲ್ಲಿ ತೇಲಾಡಿ ಮೈಮರೆತ ಚಾರು
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ಹೆಂಡತಿಗೆ ಐ ಲವ್ ಯು ಎಂದ ರಾಮಾಚಾರಿ; ಖುಷಿಯಲ್ಲಿ ತೇಲಾಡಿ ಮೈಮರೆತ ಚಾರು

Ramachari Serial: ಹೆಂಡತಿಗೆ ಐ ಲವ್ ಯು ಎಂದ ರಾಮಾಚಾರಿ; ಖುಷಿಯಲ್ಲಿ ತೇಲಾಡಿ ಮೈಮರೆತ ಚಾರು

Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಹಾಗೂ ಚಾರು ಮದುವೆಯಾಗಿ ವರ್ಷಗಳೇ ಕಳೆದಿದ್ದರೂ, ಮನ ಬಿಚ್ಚಿ ರಾಮಾಚಾರಿ ತನ್ನ ಪ್ರೀತಿಯನ್ನು ಹೇಳಿಕೊಂಡಿರಲಿಲ್ಲ. ಆದರೆ ಈಗ ಅವನಾಗೇ ಚಾರುಗೆ ಐ ಲವ್‌ ಯು ಎಂದಿದ್ದಾನೆ.

ರಾಮಾಚಾರಿ ಧಾರಾವಾಹಿ
ರಾಮಾಚಾರಿ ಧಾರಾವಾಹಿ (Colors Kannada)

Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಮದುವೆಯಾಗಿ ಇಷ್ಟು ದಿನಗಳಾಗಿದ್ದರೂ ತನ್ನೊಳಗಿದ್ದ ಪ್ರೀತಿಯನ್ನು ರಾಮಾಚಾರಿ ಎಂದಿಗೂ ಚಾರು ಹತ್ತಿರ ಹೇಳಿಕೊಂಡಿರಲಿಲ್ಲ. ಆದರೆ ಈಗ ಆ ಸಂದರ್ಭ ಬಂದಿದೆ. ಚಾರು ತನ್ನ ಮನೆಯವರಿಗಾಗಿ ಮಾಡುತ್ತಿರುವ ತ್ಯಾಗವನ್ನು ನೋಡಿ ರಾಮಾಚಾರಿಗೆ ಪ್ರೀತಿ ಹುಟ್ಟಿದೆ. ಅವನು ಈ ಬಾರಿ ತನ್ನ ಪ್ರೀತಿಯನ್ನು ಚಾರು ಹತ್ತಿರ ಹೇಳಿಕೊಂಡಿದ್ದಾನೆ. ಆಫೀಸ್‌ನಲ್ಲಿ ಕುಳಿತು ಕೆಲಸ ಮಾಡುತ್ತಾ ಇರುತ್ತಾನೆ. ಆ ಸಂದರ್ಭದಲ್ಲಿ ತನ್ನ ಲ್ಯಾಪ್‌ಟಾಪ್‌ ವಾಲ್‌ಪೇಪರ್‌ನಲ್ಲಿ ಅವನಿಗೆ ಚಾರು ಕಾಣಿಸುತ್ತಾಳೆ. ಅವಳನ್ನು ನೋಡಿ ತುಂಬಾ ಖುಷಿಯಾಗುತ್ತಾನೆ. ನಮ್ಮ ಮನೆಗಾಗಿ ಇವರು ಎಷ್ಟೆಲ್ಲ ತ್ಯಾಗ ಮಾಡ್ತಾ ಇದ್ದಾರೆ ಎಂದು ಮನಸಿನಲ್ಲಿಯೇ ಅಂದುಕೊಳ್ಳುತ್ತಾನೆ.

ಚಾರು ಬಳಿ ಪ್ರೀತಿ ಹೇಳಿಕೊಂಡ ರಾಮಾಚಾರಿ

ಚಾರು ತುಂಬಾ ನೆನಪಾದ ಕಾರಣ ಕಾಲ್ ಮಾಡುತ್ತಾನೆ. ಚಾರು ಹತ್ತಿರ ಮಾತನಾಡಲು ಬಯಸುತ್ತಾನೆ. ಆ ಕಡೆಯಿಂದ ಚಾರು ಕಾಲ್ ಪಿಕ್ ಮಾಡುತ್ತಾಳೆ. ಅವಳು ಯಾಕೋ ಕಾಲ್ ಮಾಡಿದ್ದಾನೆ. ಸುಮ್ಮನೆ ಇರಹುದು ಎಂದು ಅಂದುಕೊಂಡಿರುತ್ತಾಳೆ. ಆದರೆ ಅವಳಿಗೆ ಖುಷಿಯ ವಿಚಾರ ಕಾದಿರುತ್ತದೆ. ಅವನು "ಐ ಲವ್ ಯು ಚಾರು ಮೇಡಂ" ಎಂದು ಹೇಳುತ್ತಾನೆ. ಆಗ ಇವಳಿಗೆ ಒಂದೇ ಬಾರಿ ಆಶ್ಚರ್ಯ ಆಗುತ್ತದೆ. ಯಾಕೆಂದರೆ ಮೊದಲೆಲ್ಲ ಇವಳೇ ಒತ್ತಾಯ ಮಾಡಿ ಹೇಳು ಎಂದು ತೊಂದರೆ ಕೊಟ್ಟರೂ ಅವನು ಹೇಳ್ತಾ ಇರ್ಲಿಲ್ಲ. ಈಗ ಅವನಾಗೇ ಹೇಳಿದ್ದಾನೆ ಅಂದ್ರು ಅದು ಖುಷಿ ವಿಚಾರವೇ ಎಂದು ಅಂದುಕೊಳ್ಳುತ್ತಾಳೆ.

ಸೊಸೆ ಸಂತೋಷ ನೋಡಿ ಜಾನಕಿಗೆ ಸಮಾಧಾನ

ಅವನ ಬಾಯಿಂದ ಬಂದ ಆ ಮಾತನ್ನು ಮತ್ತೊಮ್ಮೆ ಕೇಳುವ ಮನಸಾಗುತ್ತದೆ. ಅವಳು ರಾಮಾಚಾರಿ ಇನ್ನೊಮ್ಮೆ ಹೇಳು ಎಂದು ಕೇಳುತ್ತಾಳೆ. ಆಗ ಅವನು ಇನ್ನೊಮ್ಮೆ ಹೇಳುತ್ತಾನೆ. ಆಗ ಇವನು ಕಾಲ್‌ನಲ್ಲಿ ಮಾತಾಡುವುದನ್ನು ನೋಡಿ ಮ್ಯಾನೇಜರ್ ಬಂದು ಬೇಗ ಕೆಲಸ ಮುಗಿಸಿ ಎಂದು ಹೇಳುತ್ತಾರೆ. ಆಗ ರಾಮಾಚಾರಿಗೆ ಸ್ವಲ್ಪ ಮುಜುಗರ ಆಗುತ್ತದೆ. ಆದರೂ ನಗುತ್ತಾನೆ. ಜಾನಕಿ ಇತ್ತ ಚಾರು ಖುಷಿಯನ್ನು ನೋಡಿ ಆನಂದಿಸುತ್ತಾಳೆ. ಖುಷಿಯಾಗಿರಲು ಕೂದಲು ಬೇಕಿಲ್ಲ. ನಿನ್ನ ಸೌಂದರ್ಯ ಹೆಚ್ಚಲು ಮುಖದ ಮೇಲೆ ನಗುವೊಂದಿದ್ದರೆ ಸಾಕು ಎಂದು ಹೇಳುತ್ತಾಳೆ.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

Whats_app_banner