Ramachari Serial: ರಾಮಾಚಾರಿ ಮನೆಯಲ್ಲಿ ಕಳ್ಳನ ಓಡಾಟ; ಸುಳ್ಳು ಹೇಳಿ ಚಾರುಗೆ ಮನಬಂದಂತೆ ಹೊಡೆದ ರುಕ್ಕು, ವೈಶಾಖಾ
Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ಮತ್ತು ರುಕ್ಕು ಸೇರಿಕೊಂಡು ಹೊಸದೊಂದು ಉಪಾಯ ಮಾಡುತ್ತಾರೆ. ಹೇಗಾದರು ಮಾಡಿ ಚಾರುಗೆ ಪೆಟ್ಟು ಕೊಡಬೇಕು ಎನ್ನುವುದು ಅವರ ವಿಚಾರ.
ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಮನೆಗೆ ಕಳ್ಳ ಬಂದಿದ್ದಾನೆ ಎಂದು ಸುಳ್ಳು ಹೇಳುತ್ತಾ ವೈಶಾಖಾ ಹಾಗೂ ರುಕ್ಕು ಉಪಾಯ ಮಾಡುತ್ತಾರೆ. ಮೊದಲಿಗೆ ವೈಶಾಖಾ ಹಾಗು ರುಕ್ಕು ಇಬ್ಬರೂ ಒಂದು ಕಡೆ ನಿಂತುಕೊಂಡು ನಾವು ಕಳ್ಳನನ್ನು ನೋಡಿದ್ದೇವೆ ಎಂದು ಚೀರುತ್ತಾರೆ. ಆಗ ಮನೆಯ ಇತರ ಸದಸ್ಯರೂ ಕೂಡ ಅಲ್ಲಿಗೆ ಬರುತ್ತಾರೆ. ಬಂದು ನೋಡಿದರೆ ಅಲ್ಲಿ ಯಾರೂ ಇರುವುದಿಲ್ಲ. ಆದರೂ ಇವರು ನಾಟಕ ಮುಂದುವರಿಸುತ್ತಾ. “ಇಲ್ಲ ನಾವು ಕಳ್ಳನನ್ನು ನೋಡಿದ್ದು ನಿಜ” ಎನ್ನುತ್ತಾರೆ. ಅದಾದ ನಂತರದಲ್ಲಿ ರಾಮಾಚಾರಿ " ನೀವೆಲ್ಲ ಇಲ್ಲೇ ಇರಿ ನಾನು ಹೋಗಿ ನೋಡಿಕೊಂಡು ಬರುತ್ತೇನೆ ಎಂದು ಹೇಳುತ್ತಾನೆ. ಆಗ ಎಲ್ಲರೂ ಬೇಡ ಎನ್ನುತ್ತಾರೆ. ಆದರೆ ರುಕ್ಕು ಮಾತ್ರ ಹೋಗಿ ಭಾವಾ ಈ ದೊಣ್ಣೆ ತೆಗೆದುಕೊಂಡು ಹೋಗಿ ಎಂದು ದೊಣ್ಣೆ ಕೊಡುತ್ತಾಳೆ.
ಉಪಾಯ ಫಲಿಸಿತು
ಅವನು ಇದೆಲ್ಲ ನನಗೆ ಬೇಡ ಏನೂ ಆಗೋದಿಲ್ಲ ಎಂದು ಹೇಳುತ್ತಾನೆ. ಆದರೂ ರುಕ್ಕು ಆ ದೊಣ್ಣೆ ಕೊಟ್ಟು ಕಳಿಸುತ್ತಾಳೆ. ಅವನು ಹುಡುಕಲು ಹೋದಾಗ ತಾನೂ ಹಿಂದಿನಿಂದ ಒಂದು ದೊಡ್ಡ ದೊಣ್ಣೆ ತೆಗೆದುಕೊಂಡು ಹೋಗಿ ಲೈಟ್ ಆಫ್ ಮಾಡುತ್ತಾಳೆ. ಲೈಟ್ ಆಫ್ ಮಾಡಿದವಳೇ ಸೀದಾ ಒಳಗಡೆ ಬರುತ್ತಾಳೆ. ಅಷ್ಟರಲ್ಲಿ ಅಲ್ಲಿ ವೈಶಾಖಾ ಇರುತ್ತಾಳೆ. ಆ ಕಡೆಯಿಂದ ಚಾರು ಕೂಡ ಬರುತ್ತಾಳೆ. ಚಾರು ಬಂದ ತಕ್ಷಣ ಬಂದವಳು ಚಾರು ಎಂದು ಗೊತ್ತಿದ್ದರು ಬೇಕೆಂದೇ ವೈಶಾಖಾ ಅವಳಿಗೆ ಹೊಡೆಯುತ್ತಾಳೆ.
ಜಾನಕಿಗೆ ಬೇಸರ
ಹೊಡೆದ ತಕ್ಷಣ ಕಳ್ಳ ಕಳ್ಳ ಎಂದು ವೈಶಾಖಾ ಕೂಗಿ ರುಕ್ಕುವನ್ನು ಕರೆಯುತ್ತಾಳೆ. ಅವಳೂ ಬಂದು ತನ್ನ ಕೈಯ್ಯಲ್ಲಿದ್ದ ದೊಣ್ಣೆಯಿಂದ ನಾಲ್ಕೇಟು ಹೊಡೆಯುತ್ತಾಳೆ. ಅಷ್ಟರಲ್ಲಿ ರಾಮಾಚಾರಿ ಲೈಟ್ ಆನ್ ಮಾಡುತ್ತಾನೆ. ಆಗ ಅವರು ಹೊಡೆಯುವುದನ್ನು ನಿಲ್ಲಿಸುತ್ತಾರೆ. ಜಾನಕಿ ಬಂದು ಏನಾಯ್ತು ಎಂದು ನೋಡುವಷ್ಟರಲ್ಲಿ ಇವರು ಚಾರುಗೆ ಹೊಡೆದಿರುತ್ತಾರೆ. ಅವಳು ಸುಮ್ಮನೆ ನೋವು ಅನುಭವಿಸುತ್ತಾಳೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ