Ramachari Serial: ಅಣ್ಣಾಜಿ ಮನೆಯಿಂದ ಕುಟುಂಬ ಸಮೇತ ಹೊರಡಲು ರಾಮಾಚಾರಿ ಪ್ಲಾನ್; ಅಂದುಕೊಂಡಂತೆ ಎಲ್ಲ ಆದರೆ ಕಿಟ್ಟಿ ಮನೆ ಸೇರ್ತಾಳೆ ರುಕ್ಕು
ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಹಾಗೂ ಚಾರು ಈಗ ಹೊಸ ಉಪಾಯ ಮಾಡಿದ್ದಾರೆ. ಎಲ್ಲವೂ ರಾಮಾಚಾರಿ ಹೇಳದಂತೆಯೇ ನಡೆಯುತ್ತಿದೆ. ಆದರೆ ಮದುವೆ ಮನೆಯಲ್ಲಿ ಮದುವೆ ಗಂಡು ಕಾಣೆಯಾಗಿದ್ದಾನೆ.
ರಾಮಾಚಾರಿ ಧಾರಾವಾಹಿಯಲ್ಲಿ ರುಕ್ಕುವನ್ನು ಮನೆಗೆ ಕರೆದುಕೊಂಡು ಹೋಗಲು ಎಲ್ಲರೂ ಸೇರಿ ನಿರ್ಧಾರ ಮಾಡಿದ್ದಾರೆ. ತುಂಬಾ ದಿನಗಳಿಂದ ರುಕ್ಕು ಮನೆಯಲ್ಲೇ ಎಲ್ಲರೂ ಇದ್ದರು. ಆದರೆ ಈಗ ರುಕ್ಕುವನ್ನು ಕರೆದುಕೊಂಡು ತಮ್ಮ ಮನೆಗೆ ಹೋಗುವ ಸಂದರ್ಭ ಬಂದಿದೆ. ರಾಮಾಚಾರಿ ಒಂದು ಉಪಾಯ ಮಾಡಿದ್ದಾನೆ. ಆ ಉಪಾಯವನ್ನು ಎಲ್ಲರಿಗೂ ಹೇಳಿದ್ದಾನೆ. ಅವನು ಹೇಳಿದಂತೆಯೇ ಎಲ್ಲವೂ ಇಂದು ನೆಡೆಯುತ್ತದೆ ಎಂದು ಭಾವಿಸಿದ್ದಾರೆ. ಆದರೆ ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ. ಎಲ್ಲರೂ ಅಣ್ಣಾಜಿ ಮನೆಯಲ್ಲಿ ಸೇರುತ್ತಾರೆ. ಅಜ್ಜಿ ಒಂದು ಕಡೆ ಕುಳಿತಿರುತ್ತಾರೆ.
ರುಕ್ಕು ಮದುವೆ
ಅಜ್ಜಿ ಕುಳಿತಿರುವಲ್ಲಿಗೆ ಜಾನಕಿ ಬರುತ್ತಾಳೆ. ಅಜ್ಜಿ ಜೊತೆಯಾಗಿ ಶೃತಿ ಕೂಡ ನಿಂತಿರುತ್ತಾಳೆ. ಅವರೆಲ್ಲ ರುಕ್ಕು ಹಾಗೂ ಚಾರು ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಆದರೆ ರುಕ್ಕುವನ್ನು ನೋಡಿ ಜಾನಕಿಗೆ ಎಷ್ಟು ಇಷ್ಟ ಆಗುತ್ತದೆ ಎಂದರೆ ನಿನಗೆ ನನ್ನ ದೃಷ್ಟೀನೇ ಬೀಳುತ್ತದೆ ಎಂದು ಹೇಳುತ್ತಾಳೆ. ಅಷ್ಟು ಅಂದವಾಗಿ ರುಕ್ಕು ರೆಡಿಯಾಗಿ ಬಂದಿರುತ್ತಾಳೆ. ಇಂದು ರುಕ್ಕು ಮದುವೆ ಎಂದು ಪ್ಲಾನ್ ಆಗಿರುತ್ತದೆ. ಆದರೆ ರಾಮಾಚಾರಿ ಹಾಗೂ ಕಿಟ್ಟಿ ಮನೆಯವರ ಪ್ಲ್ಯಾನ್ ಬೇರೆನೇ ಇರುತ್ತದೆ. ಇನ್ನು ಇವರೆಲ್ಲ ಗುಂಪಿನಲ್ಲಿ ಮಾತಾಡುತ್ತಾ ಇರುವ ಸಂದರ್ಭದಲ್ಲಿ ಅಲ್ಲಿಗೆ ಅಣ್ಣಾಜಿ ಬರುತ್ತಾರೆ. ಬಂದು ಇವರೆಲ್ಲರ ಹತ್ತಿರ ಮಾತನಾಡುತ್ತಾರೆ. ಏನ್ಮಾಡ್ತಾ ಇದ್ದೀರಿ ಎಲ್ಲರೂ ಸೇರಿಕೊಂಡು ಎಂದು ಪ್ರಶ್ನೆ ಮಾಡುತ್ತಾರೆ. ಆಗ ನಾವೆಲ್ಲ ಇಂದು ಮನೆಗೆ ಹೋಗಬಹುದಲ್ಲ ಎಂದು ಮಾತಾಡಿಕೊಳ್ತಾ ಇದ್ವಿ ಎಂದು ಹೇಳುತ್ತಾರೆ.
ಮದುಮಗನೇ ಕಾಣೆ
ಅಷ್ಟೆಲ್ಲ ಮಾತುಕತೆ ಆದ ನಂತರದಲ್ಲಿ ಮದುವೆಗೆ ಹೊರಡೋಣ ಎಂದು ಎಲ್ಲರೂ ಸಿದ್ಧರಾಗುತ್ತಾರೆ. ಆದರೆ ಮದುವೆ ಮಾಡಿಕೊಳ್ಳಲು ವರನೇ ಕಾಣುತ್ತಿಲ್ಲ ಎಂಬ ಸುದ್ದಿ ಎಲ್ಲೆಡೆ ಹಬ್ಬುತ್ತದೆ. ಆ ಸುದ್ದಿ ಕೇಳಿ ಅಣ್ಣಾಜಿ ರೊಚ್ಚಿಗೆದ್ದಿದ್ದಾರೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ