Ramachari Serial: ಅಣ್ಣಾಜಿ ಕೈಯ್ಯಲ್ಲಿ ರಾಮಾಚಾರಿ ಕುಟುಂಬದ ಮಾರಣ ಹೋಮ! ಕಿಟ್ಟಿ, ರುಕ್ಕು ಒಂದಾಗೋದು ಕನಸಿನ ಮಾತು
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ಅಣ್ಣಾಜಿ ಕೈಯ್ಯಲ್ಲಿ ರಾಮಾಚಾರಿ ಕುಟುಂಬದ ಮಾರಣ ಹೋಮ! ಕಿಟ್ಟಿ, ರುಕ್ಕು ಒಂದಾಗೋದು ಕನಸಿನ ಮಾತು

Ramachari Serial: ಅಣ್ಣಾಜಿ ಕೈಯ್ಯಲ್ಲಿ ರಾಮಾಚಾರಿ ಕುಟುಂಬದ ಮಾರಣ ಹೋಮ! ಕಿಟ್ಟಿ, ರುಕ್ಕು ಒಂದಾಗೋದು ಕನಸಿನ ಮಾತು

ರಾಮಾಚಾರಿ ಕುಟುಂಬ ಈಗ ಅಣ್ಣಾಜಿ ಮನೆಯಲ್ಲಿ ಸಿಕ್ಕಿಬಿದ್ದಿದೆ. ನಿಮಗೆಲ್ಲ ಸಾವಿನ ಉಡುಗೊರೆ ಕೊಡುತ್ತೇನೆ ಎಂದು ಅಣ್ಣಾಜಿ ಬಂದೂಕು ಹಿಡಿದು ನಿಂತಿದ್ದಾರೆ. ರಾಮಾಚಾರಿ ಮನೆಯ ಎಲ್ಲರನ್ನೂ ಕೊಲ್ಲುತ್ತೇನೆ ಎಂದಿದ್ದಾರೆ.

ಅಣ್ಣಾಜಿ ಕೈಯ್ಯಲ್ಲಿ ರಾಮಾಚಾರಿ ಕುಟುಂಬದ ಮಾರಣ ಹೋಮ
ಅಣ್ಣಾಜಿ ಕೈಯ್ಯಲ್ಲಿ ರಾಮಾಚಾರಿ ಕುಟುಂಬದ ಮಾರಣ ಹೋಮ

ರಾಮಾಚಾರಿ ಕುಟುಂಬ ಈಗ ಅಣ್ಣಾಜಿ ಮನೆಯಲ್ಲಿ ಸಿಕ್ಕಿಬಿದ್ದಿದೆ. ಯಾಕೆಂದರೆ ಯಾರೂ ಒಬ್ಬ ಅನಾಮಿಕ ಅಣ್ಣಾಜಿ ಮನೆಗೆ ಬಂದು ಎಲ್ಲ ಸತ್ಯ ಬಯಲು ಮಾಡಿದ್ದಾನೆ. ಅಣ್ಣಾಜಿ ಮನೆಗೆ ಬಂದವನೇ ಗಾಡಿ ಹತ್ತಲು ರೆಡಿಯಾಗಿ ನಿಂತಿದ್ದ ರಾಮಾಚಾರಿ ಹಾಗೂ ಮುರಾರಿ ಸಮೀಪಕ್ಕೆ ಹೋಗಿದ್ದಾನೆ. ಹೋಗಿ ಅವರ ತಲೆ ಮೇಲಿದ್ದ ವಿಗ್ ತೆಗೆದು ಹಾಕಿದ್ದಾನೆ. ಅದನ್ನು ನೋಡಿ ಉಳಿದವರಿಗೆ ಶಾಕ್ ಆಗಿದೆ. ಇನ್ನು ಅಜ್ಜಿ ಹಾಗೂ ಜಾನಕಿ ಇಬ್ಬರೂ ಈಗ ಮುಂದೇನು ಮಾಡೋದು ಎಂದು ಕಂಗಾಲಾಗಿದ್ದಾರೆ. ರುಕ್ಕು ತಡ ಮಾಡದೇ ಅಳಲು ಆರಂಭಿಸಿದ್ದಾಳೆ. ಯಾಕೆಂದರೆ ಅವಳಿಗೆ ಮುಂದೇನಾಗುತ್ತದೆ ಎಂಬ ತೀವ್ರತೆಯ ಅರಿವಿದೆ. ಹಾಗಾಗಿ ಅವಳ ಅಳು ಜೋರಾಗಿದೆ.

ಇನ್ನು ಚಾರು ಏನಾಗುತ್ತದೆ ನೋಡೇ ಬಿಡೋಣ ಎಂಬಂತೆ ಧೈರ್ಯವಾಗಿಯೇ ನಿಂತಿದ್ದಾಳೆ. ರಾಮಾಚಾರಿ ಮಾತ್ರ ಒಂದೂ ಮಾತಾಡುತ್ತಿಲ್ಲ. ಯಾಕೆ ಎಂದು ಗೊತ್ತಿಲ್ಲ, ಇನ್ನು ಮುರಾರಿ ಮೊದಲಿನಿಂದಲೇ ಭಯಪಡುತ್ತಿದ್ದವನು ಈಗ ಇನ್ನಷ್ಟು ಭಯಪಟ್ಟಿದ್ದಾನೆ. ಆ ಅನಾಮಿಕ ವ್ಯಕ್ತಿ ಬಂದು ಎಲ್ಲ ಸತ್ಯ ಹೇಳಿದ್ದಾನೆ. ಇವರೆಲ್ಲರೂ ಪೇಟೆಯಿಂದ ಬಂದವರು, ಹೆಂಗಸಿನ ರೂಪದಲ್ಲಿರುವ ಗಂಡಸರಿವರು ಎಂದು ಹೇಳಿದ್ದಾರೆ. ಆ ಎಲ್ಲ ವಿಷಯ ತಿಳಿದು ಅಣ್ಣಾಜಿಗೆ ಕೋಪ ಬಂದಿದೆ.

ಸಾವಿನ ಉಡುಗೊರೆ
"ನಾನು ನಿಮಗೆಲ್ಲ ಮದುವೆ ಮುಗಿದ ಮೇಲೆ ಉಡುಗೊರೆ ಕೊಡಬೇಕು ಎಂದು ಅಂದುಕೊಂಡಿದ್ದೆ. ಆದರೆ ಈಗ ಕಾಯೋದಿಲ್ಲ ಮದುವೆಗೂ ಮುನ್ನವೇ ನಿಮಗೆ ಉಡುಗೊರೆ ಕೊಡುತ್ತೇನೆ, ಸಾವಿನ ಉಡುಗೊರೆ" ಎಂದು ಹೇಳುತ್ತಾನೆ ಅಣ್ಣಾಜಿ

ನಿನ್ನ ಕಿರಿ ಮಗ ಕಲಿ ಹೇಳಿದ ಪ್ರಕಾರ ನಡೆಯುತ್ತಾನೆ. ಅವನಲ್ಲಿ ಕೆಲ ಅಂಶಗಳಿದೆ ಎಂದು ನಾರಾಯಣಾಚಾರ್ಯರಿಗೆ ಅವರ ಗುರುಗಳು ಹೇಳುತ್ತಿದ್ದಾರೆ. ನಿನ್ನ ಕಿರಿಮಗನಿಗೆ ಮದುವೆ ಆಗೋದಿಲ್ಲ ಆದರೆ ಅಪಾಯ ಇದೆ ಎಂದೂ ಸಹ ಹೇಳಿದ್ದಾರೆ.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

ಇತ್ತೀಚಿನ ದಿನಗಳಲ್ಲಿ ರಾಮಾಚಾರಿ ಧಾರಾವಾಹಿಯ ಬಗ್ಗೆ ಹೆಚ್ಚಿನ ಅಭಿಪ್ರಾಯಗಳು ವ್ಯಕ್ತವಾಗುತ್ತಿಲ್ಲ. ಬಿಡುಗಡೆಯಾದ ಪ್ರೋಮೋಗಳಿಗೂ ಜನರು ಪ್ರತಿಕ್ರಿಯಿಸುತ್ತಿಲ್ಲ. ಆದರೆ ರುಕ್ಕು ಮತ್ತು ಕಿಟ್ಟಿ ಒಂದಾಗ್ತಾರಾ ಇಲ್ವಾ ಅನ್ನೋ ಕುತೂಹಲ ಅಂತು ಇದ್ದೇ ಇದೆ.

Whats_app_banner