Ramachari Serial: ಕಿಟ್ಟಿ ಮದುವೆ ಆದ್ರೆ ರಾಮಾಚಾರಿ ಮನೆ ನೆಮ್ಮದಿ ಕೆಡಲಿದೆ; ರುಕ್ಕು ತಂದೆ-ತಾಯಿ ಸಾವಿಗೆ ಚಾರುನೇ ಕಾರಣ
Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಕಷ್ಟಪಟ್ಟು ಈಗ ರುಕ್ಕುವನ್ನು ರಾಮಾಚಾರಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಇನ್ನು ರುಕ್ಕು ಹಾಗೂ ಕಿಟ್ಟಿಯ ಮದುವೆಗೆ ಎಲ್ಲಾ ತಯಾರಿಗಳೂ ಆಗಿದೆ. ರುಕ್ಕು ಈಗ ರಾಮಾಚಾರಿ ಮನೆ ಸೊಸೆಯಾಗಲಿದ್ದಾಳೆ. ಆದರೆ ಅವಳಲ್ಲಿ ಒಂದು ದುಃಖ ಇದೆ.
Ramachari Serial: ರಾಮಾಚಾರಿ ಮನೆಯಲ್ಲಿ ಮೇಲ್ನೋಟಕ್ಕಷ್ಟೇ ಸಂಭ್ರಮ ಆದರೆ ನಿಜವಾಗಿ ಸಂಭ್ರಮ ಆ ಮನೆಯಲ್ಲಿ ಇಲ್ಲ. ರುಕ್ಕು ತನ್ನ ತಂದೆ ತಾಯಿ ಬಗ್ಗೆ ಯೋಚನೆ ಮಾಡಲು ಆರಂಭಿಸಿದ್ದಾಳೆ. ತಾನು ತನ್ನ ತಂದೆ ಹಾಗೂ ತಾಯಿಯನ್ನು ಕೊಂದವರ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದಾಳೆ. ಆದರೆ ಕೊಂದವರು ಯಾರು ಎಂದು ಅವಳಿಗೆ ಇನ್ನೂ ಗೊತ್ತಾಗಿಲ್ಲ, ಅವಳ ತಂದೆ ತಾಯಿಯನ್ನು ಚಾರು ಕೊಂದಿರಬಹುದು ಎಂಬ ಅನುಮಾನ ಬರುವಂತಹ ದೃಶ್ಯಗಳನ್ನು ಕಾಣಿಸಿದ್ದಾರೆ.
ನಾರಾಯಣಾಚಾರ್ಯರು ಕೂರ್ಚಿ ಮೇಲೆ ಕೂತು ಆಲೋಚಿಸುತ್ತಾ ಇರುತ್ತಾರೆ. ಅದೇ ಸಂದರ್ಭದಲ್ಲಿ ಅಲ್ಲಿಗೆ ಚಾರು ಬರುತ್ತಾಳೆ. ಬರುತ್ತಾ ಕಾಫಿ ಲೋಟ ಹಿಡಿದುಕೊಂಡೇ ಬಂದಿರುತ್ತಾಳೆ. ಅವರು ಅದನ್ನು ಕುಡಿಯಲು ಮೊದಲು ಒಪ್ಪುವುದಿಲ್ಲ. “ಮಾವ ನೀವ್ಯಾಕೆ ಇಷ್ಟು ಸಪ್ಪಗಿದ್ದೀರಿ? ನಿಮ್ಮದೇ ಮಗನ ಮದುವೆ. ನೀವು ಓಡಾಡಿಕೊಂಡು ಆರಾಮಾಗಿ ಇರಬಹುದಲ್ವಾ?” ಎಂದು ಪ್ರಶ್ನೆ ಮಾಡುತ್ತಾಳೆ. ಆಗ ನಾರಾಯಣಾಚಾರ್ಯರು ಇಲ್ಲ ನನಗೆ ಯಾವುದೇ ಖುಷಿ ಇಲ್ಲ ಎಂಬುದನ್ನು ವ್ಯಕ್ತ ಪಡಿಸುತ್ತಾರೆ. ಆದರೆ ಚಾರುಗೆ ಬೇಸರ ಆಗುತ್ತದೆ.
ಮಾವ ಯಾಕೆ ಈ ರೀತಿ ದಿನಾ ಒಗಟೊಗಟಾಗಿ ಮಾತಾಡ್ತಾ ಇದ್ದಾರೆ ಎಂದು ಅವಳಿಗೆ ಅರ್ಥ ಆಗುವುದಿಲ್ಲ. ಹೀಗಿರುವಾಗ ಮುಂದೇನಾಗುತ್ತದೆ ಎಂದರೆ ಇತ್ತ ಪಾರ್ವತಿ ಮತ್ತು ರುಕ್ಕು ಇಬ್ಬರೂ ಮಾತಾಡಿಕೊಳ್ಳುತ್ತಾ ಇರುತ್ತಾರೆ. ಆ ಮನೆಯಿಂದ ಹೊರಗಡೆ ಬರುವಾಗ ರುಕ್ಕು ತನ್ನ ತಂದೆ ಹಾಗೂ ತಾಯಿ ಫೋಟೋ ಹಿಡಿದುಕೊಂಡು ಬಂದಿರುತ್ತಾಳೆ. ಈಗ ಅವರ ಸಾವಿಗೆ ಕಾರಣ ಆದವರ ಮೇಲೆ ಸೇಡು ತೀರಿಸಿಕೊಳ್ಳುವ ನಿರ್ಧಾರ ಮಾಡಿದ್ದಾಳೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ
ಬರೀ ಹಠ ದ್ವೇಷ ಇದೇ ತುಂಬೋಗಿದೆ ಈ ಧಾರಾವಾಹಿಯಲ್ಲಿ ಒಳ್ಳೆಯದು ಅಂತ ಮೆಸೇಜ್ ಏನು ಇಲ್ವಾ ಎಂದು ರಮೇಶ್ ಬಾಬು ಕಾಮೆಂಟ್ ಮಾಡಿದ್ದಾರೆ.