Ramachari Serial: ರಾಮಾಚಾರಿಯನ್ನು ಹುಡುಕಿ ಬಂದ ಅಣ್ಣಾಜಿ; ಭಯದಿಂದ ಮುಖ ಮುಚ್ಚಿಕೊಂಡ ಕೋದಂಡ, ಮುರಾರಿ
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ರಾಮಾಚಾರಿಯನ್ನು ಹುಡುಕಿ ಬಂದ ಅಣ್ಣಾಜಿ; ಭಯದಿಂದ ಮುಖ ಮುಚ್ಚಿಕೊಂಡ ಕೋದಂಡ, ಮುರಾರಿ

Ramachari Serial: ರಾಮಾಚಾರಿಯನ್ನು ಹುಡುಕಿ ಬಂದ ಅಣ್ಣಾಜಿ; ಭಯದಿಂದ ಮುಖ ಮುಚ್ಚಿಕೊಂಡ ಕೋದಂಡ, ಮುರಾರಿ

ರಾಮಾಚಾರಿ ಧಾರಾವಾಹಿಯಲ್ಲಿ ಅಣ್ಣಾಜಿ ಕುಟುಂಬ ಈ ರಾಮಾಚಾರಿಯನ್ನು ಹುಡುಕಿಕೊಂಡು ಬಂದಿದೆ. ಅವರಿಗೆ ರುಕ್ಕುವನ್ನು ಹೇಗಾದರೂ ಮಾಡಿ ಮತ್ತೆ ಅಲ್ಲಿಂದ ಕರೆದುಕೊಂಡು ಹೋಗಬೇಕಿದೆ. ಅಪಾಯ ಈಗ ರಾಮಾಚಾರಿಯನ್ನು ಸುತ್ತುತ್ತಿದೆ.

ರಾಮಾಚಾರಿಯನ್ನು ಹುಡುಕಿ ಬಂದ ಅಣ್ಣಾಜಿ
ರಾಮಾಚಾರಿಯನ್ನು ಹುಡುಕಿ ಬಂದ ಅಣ್ಣಾಜಿ

ರಾಮಾಚಾರಿ ಧಾರಾವಾಹಿಯಲ್ಲಿ ಹೇಗಾದರೂ ಮಾಡಿ ರುಕ್ಕುವನ್ನು ತಮ್ಮ ಮನೆ ಸೊಸೆಯಾಗಿಸಿಕೊಳ್ಳಬೇಕು ಎಂದು ಎಲ್ಲರೂ ಆಸೆಪಟ್ಟು ಕೃಷ್ಣನ ಪ್ರೀತಿಗಾಗಿ ಸಹಾಯ ಮಾಡಿದ್ದಾರೆ. ಆದರೆ ಅದೇ ಕಾರಣಕ್ಕೆ ಈಗ ಮನೆಯ ಎಲ್ಲರೂ ತುಂಬಾ ಕಷ್ಟದ ಸನ್ನಿವೇಷದಲ್ಲಿ ಇದ್ದಾರೆ. ರಾಮಾಚಾರಿ ಇಡೀ ಕುಟುಂಬ ಹೋಗಿ ಅಣ್ಣಾಜಿಗೆ ಮೋಸ ಮಾಡಿದೆ. ಆ ಕಾರಣಕ್ಕಾಗಿ ಈಗ ಅವರು ರಾಮಾಚಾರಿ ಮನೆಯನ್ನು ಹುಡುಕಿಕೊಂಡು ಬಂದಿದ್ದಾರೆ. ಮುಂದೆ ಏನಾಗುತ್ತದೋ ಏನೋ ಎಂಬ ಭಯ ಈಗ ಮುರಾರಿ ಹಾಗೂ ಕೋದಂಡನಿಗೆ ಆರಂಭವಾಗಿದೆ.

ಹೂವಿನ ಹಾರತರಲು ಬಂದ ಕೋದಂಡ, ಮುರಾರಿ

ರಾಮಾಚಾರಿ ಮನೆಯಲ್ಲಿ ಮದುವೆಗೆ ಎಲ್ಲ ಸಿದ್ಧತೆಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ಮದುವೆಗೆ ಬೇಕಾದ ಹೂವಿನ ಹಾರ ತೆಗೆದುಕೊಳ್ಳಲು ರಾಮಾಚಾರಿ ಮನೆಯವರು ಬರುತ್ತಾರೆ. ಕೋದಂಡ ಹಾಗೂ ಮುರಾರಿ ಬಂದಿರುತ್ತಾರೆ. ಅವರು ಅಲ್ಲೇ ನಿಂತು ಮಾತಾಡುವಾಗ ಉತ್ತರ ಕರ್ನಾಟಕದ ಭಾಷೆ ಮುರಾರಿ ಕಿವಿಗೆ ಬೀಳುತ್ತದೆ. ಆ ಭಾಷೆ ಕಿವಿಗೆ ಬಿದ್ದಾಗ ಆಶ್ಚರ್ಯ ಹಾಗೂ ಭಯ ಎರಡೂ ಒಟ್ಟಿಗೆ ಆಗಿ ಮುರಾರಿ ತಿರುಗಿ ನೋಡುತ್ತಾನೆ.

ಅಣ್ಣಾಜಿ ಅಲ್ಲೇ ಪಕ್ಕದಲ್ಲಿ ಇರುವವರ ಹತ್ತಿರ ರಾಮಾಚಾರಿ ಗೊತ್ತಾ? ಅವನ ಮನೆಯ ದಾರಿ ಯಾವುದು ಎಂದೆಲ್ಲ ಪ್ರಶ್ನೆ ಮಾಡುತ್ತಾ ನಿಂತಿರುತ್ತಾನೆ. ಇವರು ಮೊದಲು ಅಲ್ಲ

ಮುಖ ಮುಚ್ಚಿಕೊಂಡ ಮುರಾರಿ

ನೋಡಿದರೆ ಅಲ್ಲಿಗೆ ಅಣ್ಣಾಜಿ ಹಾಗೂ ಅವನ ಸಹಚರರು ಬಂದಿರುತ್ತಾರೆ. ಹೇಗಾದರೂ ಮಾಡಿ ಇಲ್ಲಿಂದ ತಪ್ಪಿಸಿಕೊಂಡು ಹೋಗಬೇಕು. ಇವರ ಕಣ್ಣಿಗೆ ಬೀಳಬಾರದು ಎಂದು ಮುರಾರಿ ಹೆಲ್ಮೆಟ್ ಹಾಕಿಕೊಳ್ಳುತ್ತಾನೆ. ಆಗ ಕೋದಂಡ ಈಗ್ಯಾಕೆ ಹೆಲ್ಮೇಟ್ ಹಾಕಿಕೊಳ್ಳುತ್ತಾ ಇದ್ದೀಯಾ? ಎಂದು ಪ್ರಶ್ನೆ ಮಾಡುತ್ತಾನೆ, ಆಗ ಇಲ್ಲಿ ಬಂದಿರೋದು ಅಣ್ಣಾಜಿ ಎಂದು ಮುರಾರಿ ಹೇಳುತ್ತಾನೆ. ಆಗ ಕೋದಂಡನಿಗೂ ಭಯವಾಗಿ ಮುಖ ಮುಚ್ಚಿಕೊಳ್ಳುತ್ತಾನೆ.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

Whats_app_banner