Ramachari Serial: ಗುಟ್ಟಾಗಿ ಮಾನ್ಯತಾಳನ್ನು ಜೈಲಿನಿಂದ ಬಿಡಿಸಿದ ರುಕ್ಕು; ಚಾರು ಮನಸಿನಲ್ಲಿ ಶುರುವಾಗಿದೆ ಆತಂಕ
Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಹಾಗೂ ಚಾರು ಒಂದಾಗಿದ್ದ ಕೆಲವೇ ದಿನಗಳಲ್ಲಿ ಮತ್ತೆ ತೊಂದರೆ ಉಂಟಾಗುವ ಸೂಚನೆ ಸಿಕ್ಕಿದೆ. ಮಾನ್ಯತಾ ಮತ್ತು ರುಕ್ಕು ಭೇಟಿಯಾಗಿದ್ದಾರೆ.

ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಮತ್ತು ಚಾರು ಇಬ್ಬರೂ ಪ್ರೀತಿಯಿಂದಲೇ ಇದ್ದರೂ ಸಹ ಚಾರು ಮನಸಿನಲ್ಲಿ ಆತಂಕ ಶುರುವಾಗಿದೆ. ಯಾಕೋ ಎಲ್ಲೋ ಏನೋ ಮಿಸ್ ಆಗ್ತಿದೆ ಎನ್ನುವ ಭಾವನೆ ಚಾರು ಮನಸಿನ ಆಳದಲ್ಲಿ ಶುರುವಾಗಿದೆ. ನನ್ನನ್ನು ಬಿಟ್ಟು ಇನ್ಯಾರೋ ರಾಮಾಚಾರಿ ಜೀವನದಲ್ಲಿ ಬರುತ್ತಾರೆ ಎಂದು ಚಾರು ಮನಸಿಗೆ ಬಲವಾಗಿ ಅನಿಸಲು ಆರಂಭವಾಗಿದೆ. ಅದೇ ಕಾರಣಕ್ಕೆ ಚಾರು ತುಂಬಾ ಬೇಸರ ಮಾಡಿಕೊಂಡು ರಾಮಾಚಾರಿ ಹತ್ತಿರ ಮಾತಾಡುತ್ತಾ ಇದ್ದಾಳೆ. ಆದರೆ ರಾಮಾಚಾರಿಗೆ ಮುಂದೇನಾಗಬಹುದು ಎಂಬುದರ ಯಾವ ಸುಳಿವೂ ಸಿಕ್ಕಿಲ್ಲ. ಅವನು ಆರಾಮಾಗಿದ್ದಾನೆ.
ರಾಮಾಚಾರಿ ಹಾಗೂ ಚಾರು ಒಂದಾಗಲ್ವಾ?
ಇತ್ತ ಮಾನ್ಯತಾ ಮತ್ತು ರುಕ್ಕು ಇಬ್ಬರೂ ಒಟ್ಟಾಗಿ ಸೇರಿದ್ದಾರೆ. ರುಕ್ಕು, ವೈಶಾಖಾಳನ್ನು ತನ್ನ ಬಳಿ ಸೇರಿಸಿಕೊಳ್ಳದೆ ತಾನೊಬ್ಬಳೇ ಹೋಗಿ ಮಾನ್ಯತಾಳನ್ನು ಭೇಟಿ ಆಗಿದ್ದಾಳೆ. ಸಾಕಷ್ಟು ಬಾರಿ ಯೋಚನೆ ಮಾಡಿಯೇ ರುಕ್ಕು ಈ ನಿರ್ಧಾರ ತೆಗೆದುಕೊಂಡಿರುತ್ತಾಳೆ. ಮಾನ್ಯತಾಳಿಗೆ ರುಕ್ಕು ಯಾರು ಎಂಬ ಸತ್ಯ ಗೊತ್ತಿರುವುದಿಲ್ಲ. ಮಾನ್ಯತಾ ಮೊದಲು ರುಕ್ಕುವನ್ನು “ನೀನ್ಯಾರು?” ಎಂದು ಪ್ರಶ್ನೆ ಮಾಡುತ್ತಾಳೆ. ಆಗ ರುಕ್ಕು ತಾನು ರಾಮಾಚಾರಿ ಮನೆಯವಳೇ ಎಂಬ ಸತ್ಯವನ್ನು ಹೇಳುತ್ತಾಳೆ. ಮಾನ್ಯತಾಗೆ ಆಶ್ಚರ್ಯ ಆಗುತ್ತದೆ. “ನೀನು ನನ್ನನ್ನು ಯಾಕೆ ಗುಟ್ಟಾಇ ಜೈಲಿನಿಂದ ಬಿಡಿಸಿದ್ದೀಯಾ?” ಎಂದು ಪ್ರಶ್ನೆ ಮಾಡುತ್ತಾಳೆ.
ಮಾನ್ಯತಾಳನ್ನು ಭೇಟಿಯಾದ ರುಕ್ಕು
ಆಗ ರುಕ್ಕು ತನಗೆ ಮಾನ್ಯತಾಳಿಂದ ಏನಾಗಬೇಕು ಎಂಬ ಸತ್ಯವನ್ನು ತಿಳಿಸಲು ಆರಂಭಿಸುತ್ತಾಳೆ. “ನಾನು ಚಾರು ಮೇಲೆ ದ್ವೇಷ ಸಾಧಿಸಬೇಕು ಎಂದು ಈ ಮನೆಗೆ ಬಂದಿದ್ದೇನೆ” ಎನ್ನುತ್ತಾಳೆ. ಅದನ್ನು ಕೇಳಿ ಮಾನ್ಯತಾಗೆ ಶಾಕ್ ಆಗುತ್ತದೆ. ಆದರೆ “ನೀವು ಭಯ ಪಡುವ ಅಗತ್ಯವಿಲ್ಲ. ನಾನು ಚಾರುಗೆ ಏನೂ ಮಾಡೋದಿಲ್ಲ. ಅವಳಿಗೆ ಜೀವನದಲ್ಲಿ ತಾನು ಒಂಟಿ ಎಂದು ಅನಿಸಬೇಕು ಆ ರೀತಿ ಮಾಡುತ್ತೇನೆ" ಎಂದು ಹೇಳಿದ್ದಾಳೆ. ಮಾನ್ಯತಾಗೆ ರುಕ್ಕು ವರ್ತನೆಯನ್ನು ನೋಡಿ ಅನುಮಾನ ಆರಂಭವಾಗಿದೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ
