Ramachari Serial: ರಾಮಾಚಾರಿ ಬದುಕಲ್ಲಿ ಎಂಟ್ರಿ ಕೊಡಲಿದ್ದಾಳೆ ಇನ್ನೊಂದು ಹುಡುಗಿ; ಚಾರುಗೆ ಶುರುವಾಗಿದೆ ಆತಂಕ
Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಹಾಗೂ ರಾಮಾಚಾರಿ ನೆಮ್ಮದಿಯಿಂದ ಇರಲು ಸಾಧ್ಯವೇ ಇಲ್ಲ. ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತದೆ. ಈ ಬಾರಿ ಹೊಸದೊಂದು ಸಮಸ್ಯೆ ಎದುರಾಗಿದೆ.

ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಯಾವುದೋ ಒಂದು ಅಪಾಯದಲ್ಲಿರುವ ಹುಡುಗಿಯನ್ನು ಕಾಪಾಡಿರುತ್ತಾನೆ. ಕಾರ್ ಬ್ರೇಕ್ ಫೇಲ್ ಆಗಿ ಆ ಹುಡುಗಿ ಮರವೊಂದಕ್ಕೆ ಕಾರ್ ಗುದ್ದಿರುತ್ತಾಳೆ. ಕಾರ್‍ನ ಎಲ್ಲ ಬಾಗಿಲುಗಳು ಬಂದ್ ಆಗಿರುವ ಕಾರಣ ಅವಳಿಗೆ ಒಳಗಡೆ ಉಸಿರಾಡಲು ಕಷ್ಟವಾಗುತ್ತಾ ಇರುತ್ತದೆ. ಕಾರ್ ಆಕ್ಸಿಡೆಂಟ್ ಆದ ಜಾಗದಲ್ಲಿ ಸಾಕಷ್ಟು ಜನ ಇದ್ದರೂ ಯಾರೂ ಅವಳನ್ನು ಕಾಪಾಡುವ ಯೋಚನೆ ಮಾಡಿರಲಿಲ್ಲ. ಆಗ ಅಲ್ಲಿಗೆ ಹೋಗಿ ಅವಳನ್ನು ಕಾಪಾಡಿದವನು ರಾಮಾಚಾರಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವಳ ಪ್ರಾಣ ಉಳಿಸಿದ್ದಾನೆ. ಆ ಹುಡುಗಿಗೆ ರಾಮಾಚಾರಿ ತುಂಬಾ ಇಷ್ಟವಾಗಿದ್ದಾನೆ.
ರಾಮಾಚಾರಿ ಬದುಕಲ್ಲಿ ಎಂಟ್ರಿ ಕೊಡಲಿದ್ದಾಳೆ ಇನ್ನೊಂದು ಹುಡುಗಿ
ರಾಮಾಚಾರಿಯ ಧೈರ್ಯ, ಅವನ ಕರುಣೆ, ಸಹನೆ ಇವೆಲ್ಲವನ್ನೂ ನೋಡಿದ ಆ ಹುಡುಗಿಗೆ ರಾಮಾಚಾರಿ ಇಷ್ಟ ಆಗಿದ್ದಾನೆ. ಮನೆಗೆ ಹೋದ ನಂತರ ಅವಳು ತನ್ನ ತಂದೆ, ತಾಯಿ ಬಳಿ ರಾಮಾಚಾರಿ ವಿಚಾರವಾಗಿ ಮಾತಾಡಿದ್ದಾಳೆ. ನನಗೆ ರಾಮಾಚಾರಿ ಇಷ್ಟ ಆಗಿದ್ದಾನೆ. ನಾನು ಅವನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳುತ್ತಾಳೆ. ಆ ಮಾತಿಗೆ ಅವಳ ತಾಯಿ ಆಶ್ಚರ್ಯಪಟ್ಟಿದ್ದಾಳೆ. "ಒಂದೇ ಸಲ ನೀನು ಅವನನ್ನು ನೋಡಿದ್ದು, ಅವನ ಬಗ್ಗೆ ನಿನಗೇನು ಗೊತ್ತೇ ಇಲ್ಲ. ಆದರೂ ಅವನನ್ನು ಹೇಗೆ ಪ್ರೀತಿ ಮಾಡ್ತೀಯಾ?" ಎಂದು ಪ್ರಶ್ನೆ ಮಾಡುತ್ತಾ, ಮಗಳು ಮಾಡುತ್ತಿರುವುದು ಸರಿ ಅಲ್ಲ ಎಂದು ಹೇಳುತ್ತಾಳೆ.
ಚಾರುಗೆ ಶುರುವಾಗಿದೆ ಆತಂಕ
ಆದರೆ, ತಂದೆ ಮಾತ್ರ ಅವಳ ಪರ ಇರುತ್ತಾನೆ. ನಿನಗೆ ಇಷ್ಟ ಆಗಿದ್ದಾನೆ ಅಂದರೆ ಅವನೇ ನನ್ನ ಅಳಿಯ ಎನ್ನುವ ರೀತಿಯಲ್ಲಿ ಮಾತಾಡುತ್ತಾನೆ. ಇತ್ತ ಚಾರುಗೆ ತುಂಬಾ ಬೇಸರ ಹಾಗೂ ಆತಂಕ ಆರಂಭವಾಗಿರುತ್ತದೆ, ರಾಮಾಚಾರಿ ಬದುಕಿನಲ್ಲಿ ಯಾರಾದರೂ ಬೇರೆಯವರು ಬಂದರೆ ಎಂದು ಅವಳು ಅಂದುಕೊಳ್ಳುತ್ತಾ ರಾಮಾಚಾರಿಯನ್ನು ಪ್ರಶ್ನೆ ಮಾಡುತ್ತಾಳೆ. ಆದರೆ, ರಾಮಾಚಾರಿ ನಾನು ನಿಮ್ಮನ್ನು ಬಿಟ್ಟು ಇನ್ಯಾವ ಹುಡುಗಿಯನ್ನೂ ಪ್ರೀತಿ ಮಾಡುವುದಿಲ್ಲ ಎಂದು ಹೇಳಿದ್ದಾನೆ.
ಹೀಗಿದೆ ಜನಾಭಿಪ್ರಾಯ
"ಧಾರವಾಹಿ ಯಾಕೋ ಹಳಿ ತಪ್ಪುತ್ತಿದೆ, ಸಿಕ್ಕ ಸಿಕ್ಕ ರೀತಿಯಲ್ಲಿ ತಿರುವು ಕೊಡುತ್ತಿದ್ದೀರಿ. ಜನರಿಗೆ ಇಷ್ಟವಿದೆಯೋ ಇಲ್ಲವೋ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ,ಬೇಗ ಮುಗಿಸಿ ಬೇರೆಯವರಿಗೆ ಅನುಕೂಲ ಮಾಡಿಕೊಡಿ" ಎಂದು ನಾರಾಯಣ್ ಮೈಸೂರ್ ಕಾಮೆಂಟ್ ಮಾಡಿದ್ದಾರೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ
