Ramachari Serial: ರಾಮಾಚಾರಿ ಮಾತು ಕೇಳಿ ಸಿಟ್ಟಾದ ಚಾರು; ಜಾನಕಿ ಕುಟುಂಬದಲ್ಲಿ ಮತ್ತೆ ಅಶಾಂತಿ
Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಹಾಗೂ ರಾಮಾಚಾರಿ ನಡುವೆ ಮತ್ತೆ ಜಗಳವಾಗಿದೆ. ಚಾರು ಎಲ್ಲವನ್ನೂ ಅತಿಯಾಗಿ ಗ್ರಹಿಸಿ ರಾಮಾಚಾರಿ ಮೇಲೆ ಕೋಪ ಮಾಡಿಕೊಂಡಿದ್ದಾಳೆ.

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಹಾಗೂ ರಾಮಾಚಾರಿ ಇಬ್ಬರೂ ಒಂದಾಗುತ್ತಿರುವ ಸಂದರ್ಭದಲ್ಲಿ ಮತ್ತೊಂದು ಸಮಸ್ಯೆ ಎದುರಾಗುತ್ತಿದೆ. ರಾಮಾಚಾರಿ ಆಫೀಸಿನಿಂದ ತುಸು ಬೇಗ ಮನೆಗೆ ಬಂದಿರುತ್ತಾನೆ. ರಾಮಾಚಾರಿ ಬರುತ್ತಿರುವುದನ್ನು ನೋಡಿ ಚಾರು ತುಂಬಾ ಸಂತಸದಿಂದ ಅವನ ಬಳಿ ಬಂದು ಅವನನ್ನು ಸ್ವಾಗತಿಸುತ್ತಾಳೆ. ರಾಮಾಚಾರಿ ಕೂಡ ತುಂಬಾ ಖುಷಿ ಖುಷಿಯಾಗಿ ಅವಳೊಟ್ಟಿಗೆ ಮಾತಾಡುತ್ತಾನೆ. “ಯಾಕೆ ಇವತ್ತು ಬೇಗ ಬಂದೆ?” ಎಂದು ಚಾರು ಪ್ರಶ್ನೆ ಮಾಡುತ್ತಾಳೆ. ಆಗ ರಾಮಾಚಾರಿ ಸತ್ಯ ಹೇಳುತ್ತಾನೆ. “ಆಫೀಸ್‌ನಲ್ಲಿ ಒಂದು ಪ್ರೆಸೆಂಟೇಶನ್ ಇತ್ತು, ಅದು ಮುಗಿದ ಬಳಿಕ ಯಾವುದೇ ಕೆಲಸ ಇರಲಿಲ್ಲ. ಹಾಗಾಗಿ, ಸುಮ್ಮನೆ ಕೂರೋದ್ಯಾಕೆ ಅಂತ ಬೇಗ ಬಂದೆ” ಎಂದು ಹೇಳುತ್ತಾನೆ. “ಪ್ರತಿದಿನವೂ ಹೀಗೆ ಇದ್ರೆ ಎಷ್ಟು ಚನಾಗಿರತ್ತೆ ಅಲ್ವಾ?” ಎಂದು ಚಾರು ಅವನನ್ನು ಪ್ರಶ್ನೆ ಮಾಡುತ್ತಾಳೆ.
ಸತ್ಯವನ್ನೇ ಹೇಳಿದ ರಾಮಾಚಾರಿ, ಸಿಟ್ಟಾದ ಚಾರು
ಆಗ ಅವನು ನೇರವಾಗಿ “ನಿಮ್ಮ ನಾಲಿಗೆ ತೋರ್ಸಿ ಎಂದು ಹೇಳುತ್ತಾನೆ” ಯಾಕೆಂದರೆ ಚಾರು ನಾಲಿಗೆಯಲ್ಲಿ ಮಚ್ಚೆ ಇರಬಹುದು ಎಂಬ ಅನುಮಾನ ಅವನಿಗಿರುತ್ತದೆ. ಅವಳು ಹೇಳಿದ ಮಾತು ಸತ್ಯ ಆಗಿರುತ್ತದೆ. ತಲೆ ಮೇಲೆ ಎರಡು ಸುಳಿ ಇದೆ ಎಂದು ಅವಳು ಕಂಡಾಗಿನಿಂದಲೂ ಅವಳಿಗೆ ಅನುಮಾನ ಆರಂಭವಾಗಿತ್ತು. ರಾಮಾಚಾರಿಯನ್ನು ಬೇರೆ ಯಾರಾದರೂ ಮದುವೆ ಆದರೆ ಎಂಬ ಭಯವೂ ಅವಳಿಗೆ ಆರಂಭವಾಗಿತ್ತು. ಈಗ ಅದೇ ಮಾತಿಗೆ ತಕ್ಕಂತೆ ರಾಮಾಚಾರಿ ಬಳಿ ಅಂದು ಅವನು ಕಾಪಾಡಿದ ಹುಡುಗಿಯ ತಂದೆ ಬಂದು ನನ್ನ ಮಗಳನ್ನು ಮದುವೆ ಆಗುತ್ತೀಯಾ? ಎಂದು ಪ್ರಶ್ನೆ ಮಾಡಿದ್ದಾನೆ.
ಜಾನಕಿ ಕುಟುಂಬದಲ್ಲಿಲ್ಲ ನೆಮ್ಮದಿ
ಅವಳ ತಂದೆ ತನ್ನ ಬಳಿ ಹೇಳಿದ ಯಾವ ಮಾತನ್ನೂ ಮುಚ್ಚಿಡದೆ ರಾಮಾಚಾರಿ ಎಲ್ಲವನ್ನೂ ಚಾರು ಬಳಿ ಹೇಳಿಕೊಂಡಿದ್ದಾನೆ. ಆದರೂ, ಚಾರು ರಾಮಾಚಾರಿಯ ಮೇಲೆ ಸಿಟ್ಟಾಗಿದ್ದಾಳೆ. ಜಾನಕಿಯ ಕುಟುಂಬದಲ್ಲಿ ನೆಮ್ಮದಿಯೇ ಇಲ್ಲದಂತಾಗಿದೆ. ಕಿಟ್ಟಿ ಮತ್ತು ರುಕ್ಕು ಕೂಡ ಮನೆ ಬಿಟ್ಟು ಹೋಗಿದ್ದಾರೆ. ಈ ಎಲ್ಲ ಕಾರಣದಿಂದ ವೀಕ್ಷಕರಿಗೂ ಈ ಧಾರಾವಾಹಿ ಬೇಸರ ತರಿಸುತ್ತಿದೆ. ರಾಮಾಚಾರಿ ಹಾಗೂ ಚಾರು ಒಟ್ಟಾಗಿದ್ದರೆ ಮಾತ್ರ ನಾವು ಧಾರಾವಾಹಿ ನೋಡುತ್ತೇವೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ
