Ramachari Serial: ಪ್ರೀತಿಯಲ್ಲಿ ಮೋಸ ಹೋದ ಶ್ರುತಿ; ಮಗಳ ಪರಿಸ್ಥಿತಿ ಕಂಡು ಕಣ್ಣೀರಿಟ್ಟ ಜಾನಕಿ
Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಶ್ರುತಿ ಹಾಗೂ ಜಾನಕಿ ಇಬ್ಬರೂ ಈಗ ಸಂಕಷ್ಟದಲ್ಲಿದ್ದಾರೆ. ಶ್ರುತಿಯನ್ನು ಮದುವೆ ಆಗುತ್ತೇನೆ ಎಂದು ನಂಬಿಸಿ ಒಬ್ಬ ಮೋಸ ಮಾಡಿದ್ದಾನೆ. ಅದರೆ ಮನೆಯಲ್ಲಿ ಯಾರಿಗೂ ಈ ವಿಚಾರ ತಿಳಿದಿಲ್ಲ.

Ramachari Serial: ರಾಮಾಚಾರಿ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ರಾಮಾಚಾರಿ ತಾಯಿ ಜಾನಕಿ ಹಾಗೂ ತಂಗಿ ಶ್ರುತಿ ಇಬ್ಬರೂ ತುಂಬಾ ಬೇಸರದಲ್ಲಿದ್ದಾರೆ. ಶ್ರುತಿ ಅಂದುಕೊಂಡಿದ್ದೊಂದು, ಆದರೆ ಈಗ ಆಗಿದ್ದೇ ಇನ್ನೊಂದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಜಾನಕಿ ಮತ್ತು ಶ್ರುತಿ ಇಬ್ಬರೂ ಸೇರಿಕೊಂಡು ಮನೆಯಲ್ಲಿ ಯಾರಿಗೂ ತಿಳಿಯದ ಹಾಗೆ ಶ್ರುತಿ ಪ್ರೀತಿಸಿದ ಹುಡುಗನನ್ನು ಭೇಟಿ ಮಾಡಲು ಹೋಗುತ್ತಾರೆ. ಅವನನ್ನು ಭೇಟಿಯಾಗುತ್ತಾರೆ. ಶ್ರುತಿ ಬದಲಾಗಿ ಮೊದಲು ಜಾಕಿನೇ ಮಾತಾಡುತ್ತಾಳೆ. ನೀವು ಪ್ರೀತಿಸಿದ್ದೀರಿ ನಿಜ, ಆದರೆ ಎಲ್ಲರ ಎದುರು ಮದುವೆ ಕೂಡ ಆಗಬೇಕು ಎಂದು ಹೇಳುತ್ತಾಳೆ. ಆದರೆ ಅವನ ಮಾತಿನಲ್ಲಿ ಮದುವೆಯ ಬಗ್ಗೆ ಬಂದ ವಿಚಾರವೇ ಬೇರೆ.
ಜಾನಕಿಗೆ ಬೇಸರ
ಶ್ರುತಿ ಅವನನ್ನು ನಂಬಿಕೊಂಡು ಅವನೊಟ್ಟಿಗೆ ತನ್ನ ಮನಸು ಮಾತ್ರವಲ್ಲ, ದೇಹವನ್ನೂ ಹಂಚಿಕೊಂಡಿದ್ದಾಳೆ. ಆ ಕಾರಣದಿಂದ ಇಂದು ಅವಳ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿದೆ. ಆ ವಿಚಾರವನ್ನೂ ಸಹ ಅವಳು ಅವನ ಮುಂದೆ ಹೇಳುತ್ತಾಳೆ. ಆದರೆ ಶ್ರುತಿಯ ಗೆಳೆಯ ತನಗೂ ಈ ವಿಚಾರಕ್ಕೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಮಾತಾಡುತ್ತಾನೆ. ತನ್ನ ಮಗಳಿಗೊಂದು ಬಾಳು ಕೊಡು, ನೀನು ನಿನ್ನ ತಂದೆ, ತಾಯಿಯನ್ನು ಕರೆದುಕೊಂಡು ಹೆಣ್ಣು ಕೇಳಲು ನಮ್ಮ ಮನೆಗೆ ಬಾ ಎಂದು ಜಾನಕಿ ಒತ್ತಾಯ ಮಾಡುತ್ತಾಳೆ “ಏನ್ ಹೇಳ್ತಾ ಇದೀರಾ ಆಂಟಿ? ಇದೆಲ್ಲ ಆಗೋದಿಲ್ಲ. ನಾನು ಶ್ರುತಿನಾ ಮದುವೆ ಆಗಬೇಕಾ?” ಎಂದು ಅವನು ಪ್ರಶ್ನೆ ಮಾಡುತ್ತಾನೆ.
ಶ್ರುತಿಗೆ ಮೋಸ ಮಾಡಿದ ಪ್ರಿಯತಮ
ಆ ಮಾತನ್ನು ಕೇಳಿದ ತಕ್ಷಣ ಶ್ರುತಿಗೆ ತುಂಬಾ ನೋವಾಗುತ್ತದೆ. ಯಾಕೆಂದರೆ ಅವಳು ತನ್ನ ಗೆಳೆಯನನ್ನು ಅಷ್ಟು ನಂಬಿದ್ದಳು. ಆದರೆ ಈಗ ಅವನು ಮೋಸ ಮಾಡುತ್ತಾನೆ ಎಂದು ತಿಳಿದ ತಕ್ಷಣ ಅವಳು ಹೋಗಿ ಅವನ ಕಾಲರ್ ಹಿಡಿದು ಪ್ರಶ್ನೆ ಮಾಡುತ್ತಾಳೆ. ಆದರೂ ಅವನು ಮದುವೆ ಆಗುವುದಕ್ಕೆ ಒಪ್ಪುವುದಿಲ್ಲ. ಆಗ ಜಾನಕಿ ಕೋಪದಿಂದ ಅವನಿಗೆ ಹೊಡೆಯಲು ಮುಂದಾಗುತ್ತಾಳೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ
