Ramachari Serial: ಅನವಶ್ಯಕ ಚಿಂತೆ ಮಾಡಿಕೊಂಡ ಚಾರುಗೆ ಸಮಾಧಾನ ಮಾಡಿದ ಜಾನಕಿ
Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಹಾಗೂ ರಾಮಾಚಾರಿ ನಡುವೆ ಬಿರುಕು ಮೂಡುವ ಲಕ್ಷಣ ಇದೆ.

ರಾಮಾಚಾರಿ ಧಾರಾವಾಹಿಯಲ್ಲಿ ಚಾರು, ರಾಮಾಚಾರಿಯ ಬಗ್ಗೆ ತುಂಬಾ ಆಲೋಚನೆ ಮಾಡುತ್ತಿದ್ಧಾಳೆ. ರಾಮಾಚಾರಿ ಬೇರೆ ಯಾರನ್ನಾದರೂ ಮದುವೆ ಆದರೆ ತನ್ನ ಗತಿ ಏನು ಎಂದು ಅವಳಿಗೆ ಅಳುಕಾಗುತ್ತಿದೆ. ರಾಮಾಚಾರಿ ಎಷ್ಟೇ ಧೈರ್ಯ ಹಾಗೂ ಭರವಸೆ ನೀಡಿದರೂ ಸಹ ಚಾರುಗೆ ಸಮಾಧಾನ ಆಗುತ್ತಿಲ್ಲ. ಚಾರು ತುಂಬಾ ಅನವಶ್ಯಕ ಚಿಂತೆ ಮಾಡುತ್ತಿದ್ದಾಳೆ. ರಾಮಾಚಾರಿ ಅವಳನ್ನು ಬಿಟ್ಟು ಇನ್ಯಾರನ್ನೂ ಮದುವೆ ಆಗೋದಿಲ್ಲ ಎಂದು ಹೇಳಿದರೂ ಚಾರು ಆತಂಕ ಕಡಿಮೆ ಆಗುತ್ತಿಲ್ಲ. ಅದೇ ಕಾರಣಕ್ಕೆ ಅವಳು ಜಾನಕಿ ಬಳಿಯೂ ಈ ವಿಚಾರವನ್ನು ಹೇಳಿಕೊಳ್ಳುತ್ತಾಳೆ. ಜಾನಕಿ ಬಳಿ ಹೋಗಿ ನೀವೇ ನನ್ನ ತಲೆಕೆಡುವಂತೆ ಮಾಡಿದ್ದು ಎನ್ನುತ್ತಾಳೆ.
ಆಗ ಜಾನಕಿ ಆಶ್ಚರ್ಯದಿಂದ ತಾನೇನು ಮಾಡಿದ್ದೇನೆ ಎಂದು ಆಲೋಚನೆ ಮಾಡುತ್ತಾಳೆ. ಚಾರು ಹೇಳುತ್ತಾಳೆ “ನೀವು ಅಂದು ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದುವೆ ಆಗುತ್ತೆ ಎಂದು ಹೇಳಿದ್ರಿ. ಅದೇ ಕಾರಣಕ್ಕೆ ನಾನು ಈಗ ತಲೆ ಕೆಡಿಸಿಕೊಂಡಿರೋದು" ಎಂದು ಹೇಳುತ್ತಾಳೆ. ಅದಕ್ಕೆ ಜಾನಕಿ ನಗುತ್ತಾಳೆ. ಅದೆಲ್ಲ ನಿಜ ಆಗೋದಿಲ್ಲ ಎಂದು ಹೇಳುತ್ತಾಳೆ. ಚಾರು “ಇಲ್ಲ ನಿಜ ಆಗುತ್ತೆ” ಎಂದು ಹೇಳಿದ್ದಾಳೆ. ಯಾಕೆ ಎಂದು ಪ್ರಶ್ನಿಸಿದಾಗ ಅವಳು ರಾಮಾಚಾರಿ ಹೇಳಿದ ಎಲ್ಲ ಸಂಗತಿಗಳನ್ನು ಹಂಚಿಕೊಳ್ಳುತ್ತಾಳೆ.
ರಾಮಾಚಾರಿ ಮಾಡಿದ್ದೇ ಸರಿ
ರಾಮಾಚಾರಿ ಒಂದು ಹುಡುಗಿಯನ್ನು ಅಪಘಾತದಿಂದ ಕಾಪಾಡಿರುವುದು, ನಂತರ ಅವಳು ಇವನನ್ನು ಇಷ್ಟಪಟ್ಟಿರುವುದು. ಅಷ್ಟೇ, ಅಲ್ಲ ನಂತರ ಅವಳ ತಂದೆ ಬಂದು ನನ್ನ ಮಗಳನ್ನು ಮದುವೆ ಆಗು ಎಂದು ಹೇಳಿರುವುದು ಎಲ್ಲವನ್ನೂ ಚಾರು ಅತ್ತೆಯ ಬಳಿ ಹೇಳಿಕೊಳ್ಳುತ್ತಾಳೆ. ಆಗ ರಾಮಾಚಾರಿ ಅವಳಿಗೆ ಏನುತ್ತರ ಕೊಟ್ಟ ಎಂಬುದನ್ನೂ ಹೇಳುತ್ತಾಳೆ. ರಾಮಾಚಾರಿ ಅವರಿಗೆ “ನನಗೆ ಮದುವೆ ಆಗಿದೆ” ಎಂದು ಹೇಳಿ ಬಂದಿರುವುದನ್ನೂ ಹೇಳುತ್ತಾಳೆ. ಜಾನಕಿ ನಗುತ್ತಾಳೆ. ಆಗ ಚಾರುಗೆ ಕೋಪ ಬರುತ್ತದೆ. “ನೀವೂ ಯಾಕೆ ನಗ್ತಾ ಇದ್ದೀರಾ? ರಾಮಾಚಾರಿನೂ ಸುಮ್ಮನೆ ನಕ್ಕು ಉತ್ತರಿಸಿ ಬಂದಿದ್ದಾನೆ. ಇದು ತಪ್ಪು” ಎಂದು ಹೇಳುತ್ತಾಳೆ. ಆಗ ಜಾನಕಿ ಇಲ್ಲ ಅವನು ಮಾಡಿದ್ದು ಸರಿ ಇದೆ ಎಂದು ಹೇಳುತ್ತಾಳೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ
