Ramachari Serial: ಎಲ್ಲರ ಪ್ರಶ್ನೆಗೂ ಕಣ್ಣೀರೊಂದೇ ಉತ್ತರ; ಜಾನಕಿಯ ಈ ಪರಿಸ್ಥಿತಿಗೆ ಕಾರಣ ಮಗಳು ಶ್ರುತಿ
Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಜಾನಕಿ ತುಂಬಾ ಬೇಸರ ಮಾಡಿಕೊಂಡಿದ್ದಾಳೆ. ಅವಳಿಗೆ ಶ್ರುತಿ ಮೇಲೆ ಬೇಸರ ಆಗಿದೆ. ಆದರೆ ಎಲ್ಲರೊಂದಿಗೆ ಆ ವಿಚಾರ ಹೇಳಿಕೊಳ್ಳಲು ಅವಳಿಗೆ ಆಗುತ್ತಿಲ್ಲ.

Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಜಾನಕಿ ತುಂಬಾ ಬೇಸರ ಮಾಡಿಕೊಂಡಿದ್ದಾರೆ. ಶ್ರುತಿಯನ್ನು ನೋಡಲು ಬಂದ ಗಂಡಿನ ಕಡೆಯವರಿಗೆ ಅವಳು ತುಂಬಾ ಅವಮಾನ ಮಾಡಿದ್ದಾಳೆ. ಆ ಸಂಗತಿ ಅವಳಿಗೂ ಗೊತ್ತಿದೆ. ಅದೇ ಕಾರಣಕ್ಕೆ ಅವಳೊಬ್ಬಳೇ ಅಳುತ್ತಾ ಕುಳಿತಿದ್ದಾಳೆ. ಇನ್ನು ಇತ್ತ ರಾಮಾಚಾರಿ ಹಾಗೂ ಚಾರು ಇಬ್ಬರೂ ಅಮ್ಮ ಯಾಕೆ ಆ ರೀತಿ ಮಾತಾಡಿದ್ರು ಎಂದು ಆಲೋಚನೆ ಮಾಡುತ್ತಾ ಇರುತ್ತಾರೆ. ಮಾತನಾಡುವ ಭರದಲ್ಲಿ ಅವಳು ಚಾರುಗೂ ಬೈದಿದ್ದಾಳೆ. ಆ ಕಾರಣಕ್ಕಾಗಿ ರಾಮಾಚಾರಿ ತನ್ನ ಪತ್ನಿ ಚಾರುಗೆ ಸಮಾಧಾನ ಮಾಡುತ್ತಾನೆ. ಆದರೆ ಚಾರು ತನಗಾದ ಬೇಸರವನ್ನು ತೋರಿಸಿಕೊಳ್ಳುವುದಿಲ್ಲ.
ಅವಳು ರಾಮಾಚಾರಿ ಹತ್ತಿರ ನಾವು ಅತ್ತೆಯನ್ನು ಯಾಕೆ ಈ ರೀತಿ ಮಾಡಿದ್ರಿ ಎಂದು ಪ್ರಶ್ನಿಸಬೇಕು ಎಂದು ಹೇಳುತ್ತಾಳೆ. ನಂತರ ಅವರಿಬ್ಬರೂ ಜಾನಕಿ ಹತ್ತಿರ ಮಾತಾಡಲು ಹೋಗುತ್ತಾರೆ. ಅಷ್ಟರಲ್ಲಾಗಲೇ ನಾರಾಯಣಾಚಾರ್ಯರು ಮಾತಾಡುತ್ತಾ ಇರುತ್ತಾರೆ. “ಜಾನಕಿ ಯಾಕೆ ನೀನು ಗಂಡಿನ ಕಡೆಯವರಿಗೆ ಅವಮಾನ ಮಾಡಿದೆ. ಮದುವೆಯಾದಾಗಿನಿಂದ ಒಂದು ದಿನವೂ ನನಗೆ ಎದುರಾಡದ ನೀನು ಇಂದು ಈ ರೀತಿ ಮಾತಾಡಲು ಕಾರಣ ಏನು?” ಎಂದು ಕೇಳುತ್ತಾರೆ. ಆಗ ಜಾನಕಿ ಕೂಡ ಮತ್ತೆ ಅದೇ ವಿಚಾರ ಹೇಳುತ್ತಾಳೆ. “ಹೌದು ನಾನು ಮದುವೆಯಾದಾಗಿನಿಂದ ಒಂದು ಮಾತೂ ನಿಮ್ಮೆದುರು ಆಡಿಲ್ಲ. ಈಗ ಮಾತ್ರ ಕಾರಣ ಕೇಳಬೇಡಿ” ಎಂದು ಹೇಳುತ್ತಾಳೆ.
ಅಳು ನಿಲ್ಲಿಸದ ಜಾನಕಿ
ಆದರೆ ಅವಳು ಅಳುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಅವಳ ಅಳು ನೋಡಿದರೆ ಅದರ ಹಿಂದೆ ಏನೋ ಬಲವಾದ ಕಾರಣ ಇದೆ ಎಂದು ಅನಿಸುತ್ತದೆ. ಆದರೆ ಅವಳು ಯಾರೊಂದಿಗೂ ಆ ಕಾರಣವನ್ನು ಹಂಚಿಕೊಳ್ಳುತ್ತಿಲ್ಲ. ಬರು ಅವಳುವಿನಲ್ಲೇ ಉತ್ತರಿಸುತ್ತಿದ್ದಾಳೆ. ಅವಳ ಆತಂಕ ಏನು ಎನ್ನುವುದು ಯಾರಿಗೂ ಅರ್ಥ ಆಗುತ್ತಿಲ್ಲ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ

ವಿಭಾಗ