Ramachari Serial: ಹರಿದು ಹಂಚಿ ಹೋಗ್ತಿದೆ ಶ್ರುತಿ ಬದುಕು; ಕ್ಷಣ ಕ್ಷಣವೂ ಜಾನಕಿಗೆ ನರಕ ದರ್ಶನ
ರಾಮಾಚಾರಿ ಧಾರಾವಾಹಿಯಲ್ಲಿ ಜಾನಕಿ ತನ್ನ ಮಗಳು ಶ್ರುತಿ ಬದುಕಿನ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಚಾರು ಹಾಗೂ ರಾಮಾಚಾರಿ ಗಂಡು ಹುಡುಕುತ್ತಿದ್ದಾರೆ.

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಮತ್ತು ಚಾರಿ ಇಬ್ಬರೂ ಶ್ರುತಿ ಮದುವೆ ಜವಾಬ್ಧಾರಿ ತೆಗೆದುಕೊಂಡಿದ್ದಾರೆ. ಚಾರು ಅದೇ ಕೆಲಸದಲ್ಲಿದ್ಧಾಳೆ. ಶ್ರುತಿಗೆ ಯಾರಾದರೂ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಬೇಕು ಎಂದು ಅವಳು ಬಯಸಿದ್ದಾಳೆ. ಹೀಗಿರುವಾಗ ಚಾರು ಅವಳ ತಂದೆಯ ಗೆಳೆಯರೊಬ್ಬರ ಮಗನನ್ನು ವಿಚಾರಿಸುವ ಸಲುವಾಗಿ ರಾಮಾಚಾರಿ ಜತೆ ಹೋಗಿದ್ಧಾಳೆ. ಆದರೆ ಅವರು ತುಂಬಾ ಶ್ರೀಮಂತರಾಗಿರುತ್ತಾರೆ. ಆ ಕಾರಣಕ್ಕಾಗಿ ಅವರ ಬಳಿ ಶ್ರುತಿ ವಿಚಾರವನ್ನು ಮಾತಾಡಿದ್ದು ರಾಮಾಚಾರಿಗೆ ಶಾಕ್ ಆಗುತ್ತದೆ. "ನೀವು ಮೊದಲೇ ಈ ವಿಚಾರ ಮಾತಾಡ್ತೀನಿ ಅಂತ ನನ್ನ ಹತ್ರ ಯಾಕೆ ಹೇಳಿರಲಿಲ್ಲ?" ಎಂದು ರಾಮಾಚಾರಿ ಪ್ರಶ್ನೆ ಮಾಡುತ್ತಾನೆ. ಆದರೆ ಚಾರು ಈ ಹಿಂದೆಯೇ ತನ್ನ ತಂದೆ ಬಳಿ ಈ ವಿಚಾರ ಮಾತಾಡಿದ್ದಾಳೆ ಅನ್ನೋದು ರಾಮಾಚಾರಿಗೆ ತಿಳಿದಿರುವುದಿಲ್ಲ.
ಜಾನಕಿಗೆ ಕ್ಷಣ ಕ್ಷಣವೂ ನರಕ
ಇತ್ತ ಜಾನಕಿ ಹೆದರಿಕೊಂಡೇ ಪ್ರತಿಕ್ಷಣ ಬದುಕುವಂತಾಗಿದೆ. ವೈಶಾಖಾ ಒಂದು ಹೊಸ ಉಪಾಯ ಮಾಡಿದ್ದಾಳೆ. ಶ್ರುತಿ ಮಾಡಿದ ತಪ್ಪನ್ನೇ ಅಸ್ತ್ರವಾಗಿಸಿಕೊಂಡು ಮೋಸ ಮಾಡಲು ನೋಡುತ್ತಿದ್ದಾಳೆ. ಜಾಕಿಗೆ ಭಯ ಆಗುವಂತೆ ವಿಡಿಯೋ ಸಂದೇಶ ಕಳಿಸಿದ್ದಾಳೆ. ಮೊಬೈಲ್ ಕಂಡರೆ ದೂರ ಓಡಬೇಕು ಎಂದು ಅನಿಸುವ ಸಂದರ್ಭ ತಂದುಕೊಂಡ ಶ್ರುತಿ ಮೊದಲು ಮೊಬೈಲ್ ಮುಟ್ಟಿಲ್ಲ. ಆದರೆ ಜಾನಕಿ ಯಾರ ಮೆಸೆಜ್ ಎಂದು ನೋಡಲು ಮೊಬೈಲ್ ಕೈಗೆತ್ತಿಕೊಂಡಾಗ ಯಾರೋ ವಿಡಿಯೋ ಕಳಿಸಿರುವುದು ಗೊತ್ತಾಗಿದೆ. ಆದರೆ ವಿಡಿಯೋ ಕಳಿಸಿದ್ದು ಯಾರು ಎಂದು ಗೊತ್ತಾಗಿಲ್ಲ.
ಕಣ್ಣೀರಿಟ್ಟ ಶ್ರುತಿಗೂ ಗೊತ್ತಿಲ್ಲ ಸತ್ಯ
ಶ್ರುತಿ ಹೊಟ್ಟೆಯಲ್ಲಿ ಮಗು ಇರುವ ವಿಚಾರ ಹಾಗೂ ಡಾಕ್ಟರ್ ಗರ್ಪಪಾತ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ವಿಚಾರ ಎಲ್ಲವೂ ಆ ಮೊಬೈಲ್‌ನಲ್ಲಿ ಕಳಿಸಿದ ವಿಡಿಯೋದಲ್ಲಿತ್ತು. ಆದರೆ ಶ್ರುತಿಗೆ ಇದು ತನ್ನನ್ನು ಪ್ರೀತಿಸಿ ಮೋಸ ಮಾಡಿದವನ ನಂಬರ್ ಅಲ್ಲ ಎನ್ನುವುದು ಗೊತ್ತಾಗಿದೆ. ಹಣದ ಆಸೆಗಾಗಿ ಯಾರೋ ಈ ರೀತಿ ಮಾಡಿದ್ದಾರೆ ಎಂದು ಜಾನಕಿ ಅಂದುಕೊಂಡಿದ್ದಾಳೆ. ಆದರೆ ನೆಮ್ಮದಿ ಕೆಡಿಸಲು ಮನೆಯವರೇ ಈ ರೀತಿ ಮಾಡಿದ್ದು ಎಂದು ಅವಳಿಗೆ ಗೊತ್ತಿಲ್ಲ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ
