Ramachari Serial: ಗುರುಗಳಿಗೆ ಅಡುಗೆ ಮಾಡುವ ಅದೃಷ್ಟ ಕಳೆದುಕೊಂಡ ಚಾರು; ಜಾನಕಿಯ ಅಸಮಾಧಾನದ ಮಾತು
ರಾಮಾಚಾರಿ ಧಾರಾವಾಹಿಯಲ್ಲಿ ಜಾನಕಿ ತುಂಬಾ ಬೇಸರ ಮಾಡಿಕೊಂಡಿದ್ದಾಳೆ. ಚಾರುಗಿದ್ದ ಅಡುಗೆ ಮಾಡುವ ಅವಕಾಶವನ್ನು ತಾನು ಕಸಿದುಕೊಂಡೆ ಎಂದು ಅವಳಿಗೆ ಅನಿಸುತ್ತಿದೆ. ರುಕ್ಕು ಈಗ ಅಡುಗೆ ಮಾಡುತ್ತಿದ್ದಾಳೆ.

ರಾಮಾಚಾರಿ ಧಾರಾವಾಹಿಯಲ್ಲಿ ಮನೆಗೆ ಗುರುಗಳು ಬಂದಿದ್ದಾರೆ. ಆದರೆ ಗುರುಗಳು ಬಂದಾಗ ಅಡುಗೆ ಮಾಡಿ ಬಡಿಸುವ ಭಾಗ್ಯ ಮಾತ್ರ ಚಾರುಗೆ ತಪ್ಪಿ ಹೋಗಿದೆ. ಚಾರು ಅಡುಗೆ ಮಾಡುವುದು ಬೇಡ ಈ ಬಾರಿ ರುಕ್ಕು ಅಡುಗೆ ಮಾಡಲಿ ಎಂದು ಜಾನಕಿ ಹೇಳಿದ್ದಳು, ಆದರೆ ಅದರಿಂದ ಜಾನಕಿಗೇ ಬೇಸರ ಆಗಿದೆ. ನಾನು ಆ ರೀತಿ ಹೇಳಬಾರದಿತ್ತು ಎಂದು ಅಂದುಕೊಳ್ಳುತ್ತಾ ಇದ್ದಾಳೆ. ಆ ವಿಚಾರವಾಗಿ ತಾನು ಚಾರು ಹತ್ತಿರ ಮಾತಾಡಬೇಕು ಎಂದು ಜಾನಕಿ ಅವಳ ಬಳಿ ಬಂದಿದ್ದಾಳೆ “ಚಾರು ಮೊದಲು ನಿನಗೆ ಅಡುಗೆ ಮಾಡಲು ಹೇಳಿ, ಆ ನಂತರ ಬೇಡ ಎಂದು ಹೇಳಬೇಕಾಗಿ ಬಂತು ಈ ವಿಚಾರವಾಗಿ ನಿನಗೆ ಬೇಸರ ಆಗಿರಬಹುದು ಅಲ್ವಾ?” ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಚಾರು ಏನೂ ಹೆಚ್ಚು ಆಲೋಚನೆ ಮಾಡದೆ “ಇಲ್ಲ ನನಗೆ ಯಾವ ಬೇಸರವೂ ಇಲ್ಲ, ಅವಳು ನನ್ನ ತಂಗಿತಾನೆ?” ಎಂದು ಮರು ಪ್ರಶ್ನೆ ಮಾಡುತ್ತಾಳೆ.
ಜಾನಕಿಗೆ ಬೇಸರ
ಅದಾದ ನಂತರದಲ್ಲಿ ಜಾನಕಿ ತುಂಬಾ ಬೇರಸದಿಂದ ಇನ್ನಷ್ಟು ಮಾತಾಡುತ್ತಾಳೆ “ಜೀವನದಲ್ಲಿ ಒಂದು ಬಾರಿ ಮಾತ್ರ ಇಂತಹ ಭಾಗ್ಯ ಸಿಗೋದು. ಗುರುಗಳು ಯಾವಾಗಲೂ ನಮ್ಮ ಮನೆಗೆ ಬರೋದಿಲ್ಲ. ಹೀಗಿರುವಾಗ ಆ ಅವಕಾಶವನ್ನು ನಾನು ನಿನ್ನಿಂದ ಕಸಿದುಕೊಂಡೆ ಎಂದು ನನಗೆ ಅನಿಸ್ತಾ ಇದೆ” ಎಂದು ಜಾನಕಿ ಹೇಳುತ್ತಾಳೆ. ಆಗ ಚಾರು ಇನ್ನೊಂದಷ್ಟು ಸಮಾಧಾನದ ಮಾತುಗಳನ್ನಾಡುತ್ತಾಳೆ. "ಈ ಮನೆಗೆ ಬಂದಾಗಿನಿಂದ ರುಕ್ಕು ಯಾವ ಜವಾಬ್ದಾರಿಯನ್ನೂ ತೆಗೆದುಕೊಂಡಿರಲಿಲ್ಲ. ಅವಳ ಮೊದಲ ಜವಾಬ್ದಾರಿ ಈ ರೀತಿಯಲ್ಲಿ ಶುಭಾರಂಭ ಆಗುತ್ತಿದೆ ಎಂದರೆ ಮುಂದೆಲ್ಲ ಒಳ್ಳೆಯದಾಗುತ್ತದೆ ಎಂದೇ ಅರ್ಥ ಎನ್ನುತ್ತಾ ಸಮಾಧಾನ ಮಾಡುತ್ತಾಳೆ.
ಆಗ ಜಾನಕಿಗೆ ಅವಳ ಮಾತಿನಲ್ಲಿರುವ ಪ್ರಬುದ್ಧತೆಯನ್ನು ನೋಡಿ ತುಂಬಾ ಸಂತೋಷವಾಗುತ್ತದೆ. ನೀನೇ ನನ್ನ ಮುದ್ದಿನ ಸೊಸೆ ಎಂದು ಅವಳನ್ನು ಕೊಂಡಾಡುತ್ತಾಳೆ. ಇನ್ನು ಇತ್ತ ಕಿಟ್ಟಿಗೂ ತನ್ನ ಹೆಂಡತಿ ಮೇಲೆ ಪ್ರೀತಿ ಬಂದಿದೆ. “ನೀನು ತುಂಬಾ ಒಳ್ಳೆಯವಳು. ಈ ಮನೆಗೆ ತಕ್ಕ ಸೊಸೆ” ಎಂದು ಅವನು ರುಕ್ಕುವನ್ನು ಹೊಗಳುತ್ತಿದ್ದಾನೆ. ಯಾಕೆಂದರೆ ಅವಳು ಅಷ್ಟು ಜನರಿಗೆ ಅಡುಗೆ ಮಾಡಲು ಒಪ್ಪಿಕೊಂಡಿದ್ದಾಳೆ ಎನ್ನುವುದು ಅವನಿಗೆ ಹೆಮ್ಮೆ ತಂದಿದೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ
