Ramachari Serial: ಮನೆ ಬಿಟ್ಟು ಹೋದ ಮಗ ಸೊಸೆಯನ್ನು ನೆನೆದು ಕಣ್ಣೀರಿಟ್ಟ ಜಾನಕಿ; ಸಮಾಧಾನ ಮಾಡಿದ ಚಾರು
Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಕಿಟ್ಟಿ ಮತ್ತು ರುಕ್ಕು ಇಬ್ಬರೂ ಮನೆ ಬಿಟ್ಟು ಹೋಗಿದ್ದಾರೆ. ಅದರಿಂದಾಗಿ ಜಾನಕಿ ಹಾಗೂ ಮನೆಯವರೆಲ್ಲರಿಗೂ ಬೇಸರ ಆಗಿದೆ.

ರಾಮಾಚಾರಿ ಧಾರಾವಾಹಿಯಲ್ಲಿ ಜಾನಕಿ ತುಂಬಾ ತಲೆಕೆಡಿಸಿಕೊಂಡಿದ್ದಾಳೆ. ಸಾಕಷ್ಟು ಬಾರಿ ಯೋಚನೆ ಮಾಡಿದರೂ ಸಹ ಕಿಟ್ಟಿ ಮಾಡಿದ್ದು ತಪ್ಪು ಎಂದೇ ಜಾನಕಿಗೆ ಅನಿಸುತ್ತಿದೆ. ಮನೆಯವರೆಲ್ಲರೂ ಸಮಾಧಾನದಲ್ಲಿ ಇರುವ ಸಂದರ್ಭದಲ್ಲಿ ಕಿಟ್ಟಿ ಹಾಗೂ ರುಕ್ಕು ಮಾತು ಬಿರುಗಾಳಿಯಂತೆ ಆವರಿಸಿದೆ. ಆ ಕಾರಣಕ್ಕಾಗಿ ಜಾನಕಿ ತುಂಬಾ ಸಂಕಟಪಡುತ್ತಿದ್ದಾಳೆ. ಯಾಕೆಂದರೆ ರುಕ್ಮಿಣಿ ಮತ್ತು ಕೃಷ್ಣ ಇಬ್ಬರೂ ನಮಗೆ ಈ ಮನೆಯಲ್ಲಿ ಪಾಲು ಬೇಕು ಎಂದು ಕೇಳುತ್ತಾರೆ. ಮನೆಯಲ್ಲಿ ಹಿರಿಯರು ಇಲ್ಲ ಎಂದು ಹೇಳಿದರೂ ಕೇಳದೆ ಮನೆ ಬಿಟ್ಟು ಹೋಗಿದ್ದಾರೆ. ಇದರಿಂದ ಜಾನಕಿಗೆ ನೋವಾಗಿದೆ.
ಜಾನಕಿಗೆ ಬೇಸರ
ರಾಮಾಚಾರಿ ಹಾಗೂ ಮನೆಯವರೆಲ್ಲರೂ ಸಹ ಒಟ್ಟಾಗಿ ಕುಳಿತುಕೊಂಡು ಆಲೋಚನೆ ಮಾಡುತ್ತಾ ಇರುತ್ತಾರೆ. ಯಾಕೆ ಹೀಗೆಲ್ಲ ಆಯ್ತು ಎಂದು ಎಲ್ಲರ ಮನಸಿನಲ್ಲೂ ಪ್ರಶ್ನೆ ಇರುತ್ತದೆ. ಆದರೆ ಏನು ಮಾಡುವುದು ಎಂದು ತೋಚದೆ ಎಲ್ಲರೂ ತಮ್ಮಷ್ಟಕ್ಕೆ ತಾವೇ ಸಮಾಧಾನ ಮಾಡಿಕೊಳ್ಳುತ್ತಾ ಇರುತ್ತಾರೆ. ಆದರೆ ಜಾನಕಿ ಅಳು ಮಾತ್ರ ನಿಲ್ಲುತ್ತಿಲ್ಲ. “ಕೃಷ್ಣ ಚಿಕ್ಕವನಿದ್ದಾಗಲೇ ಮನೆಯಿಂದ ದೂರ ಆದ. ಕಳೆದು ಹೋದವನು ಮತ್ತೆ ಸಿಕ್ಕಿದ್ದಾನೆ ಎಂದು ಸಮಾಧಾನಪಡುವಷ್ಟರಲ್ಲಿ ಹೀಗೆಲ್ಲ ಆಗೋಯ್ತು” ಎಂದು ಗೋಳಾಡುತ್ತಾ ಇರುತ್ತಾಳೆ.
ಸಮಾಧಾನ ಮಾಡಿದ ಚಾರು
ಆಗ ರಾಮಾಚಾರಿ, ಚಾರು ಮತ್ತು ಮುರಾರಿ ಎಲ್ಲರೂ ಜಾನಕಿಗೆ ಸಮಾಧಾನದ ಮಾತುಗಳನ್ನಾಡುತ್ತಾ ಇರುತ್ತಾರೆ. ಒಬ್ಬೊಬ್ಬರು ಒಂದೊಂದು ರೀತಿ ಮಾತಾಡುತ್ತಾರೆ. ಆದರೆ, ಯಾವ ಮಾತಿನಿಂದಲೂ ಜಾನಕಿಗೆ ಸಮಾಧಾನ ಆಗುತ್ತಿಲ್ಲ. ನಮ್ಮ ಮನೆ ಒಡೆದು ಹೋಯ್ತು ಎನ್ನುತ್ತಾ ಅಳುತ್ತಿದ್ದಾಳೆ. ಆಗ ಚಾರು ಹೇಳುತ್ತಾಳೆ “ಇಲ್ಲ ಅತ್ತೆ ಹಾಗೆಲ್ಲ ಏನೂ ಇಲ್ಲ. ಮೊದಲು ನಾನು ಕೆಟ್ಟವಳಾಗಿದ್ದೆ, ಆದರೆ ನನಗೆ ರಾಮಾಚಾರಿ ಸರಿಯಾದ ಜೀವನ ಮಾಡಲು ಹೇಳಿಕೊಟ್ಟ. ಈಗ ವೈಶಾಖಾ ಅಕ್ಕ ಕೂಡ ಬದಲಾಗಿದ್ದಾಳೆ. ಇನ್ನು ಕಿಟ್ಟಿ ಕೂಡ ರುಕ್ಕುವನ್ನು ಬದಲಾಯಿಸಿ ಈ ಮನೆಗೆ ಕರೆದುಕೊಂಡು ಬರುತ್ತಾನೆ. ಅನುಮಾನ ಬೇಡ” ಎಂದು ಹೇಳುತ್ತಾಳೆ. ರಾಮಾಚಾರಿ ಕೂಡ ಅದಕ್ಕೆ ಸಹಮತ ನೀಡುತ್ತಾನೆ.
ಅಷ್ಟೆಲ್ಲ ಸಮಾಧಾನ ಹೇಳಿದ ನಂತರ ಚಾರು ಮತ್ತು ರಾಮಾಚಾರಿ ಇಬ್ಬರೇ ಮಾತಾಡುತ್ತಾ ಇರುತ್ತಾರೆ. ಆ ಸಂದರ್ಭದಲ್ಲಿ ರಾಮಾಚಾರಿ, ಚಾರು ಹತ್ತಿರ ಮಾತಾಡುತ್ತಾನೆ. ಮಾತಾಡಿ, “ನನಗೆ ಈಗ ಭಯ ಆಗ್ತಾ ಇದೆ. ಕಿಟ್ಟಿ ಮಾಡಿದ್ದು ಸರಿ ಅಲ್ಲ. ಅಮ್ಮನಿಗೇನೋ ಸಮಾಧಾನ ಹೇಳಿಬಿಟ್ಟೆ ಆದರೆ ಈಗ” ಎಂದು ರಾಗ ಎಳೆಯುತ್ತಾನೆ. ಚಾರು ಮತ್ತೆ ರಾಮಾಚಾರಿಗೂ ಸಮಾಧಾನ ಹೇಳುತ್ತಾಳೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ
