Ramachari Serial: ಚಾರು ಎಂದು ಏಕವಚನದಲ್ಲಿ ಕೂಗಿ ಕರೆದ ಕಿಟ್ಟಿ; ಅತ್ತಿಗೆ ಮೇಲೆ ಏಕಾಏಕಿ ಸಿಟ್ಟಿಗೆದ್ದ ಕೃಷ್ಣ
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ಚಾರು ಎಂದು ಏಕವಚನದಲ್ಲಿ ಕೂಗಿ ಕರೆದ ಕಿಟ್ಟಿ; ಅತ್ತಿಗೆ ಮೇಲೆ ಏಕಾಏಕಿ ಸಿಟ್ಟಿಗೆದ್ದ ಕೃಷ್ಣ

Ramachari Serial: ಚಾರು ಎಂದು ಏಕವಚನದಲ್ಲಿ ಕೂಗಿ ಕರೆದ ಕಿಟ್ಟಿ; ಅತ್ತಿಗೆ ಮೇಲೆ ಏಕಾಏಕಿ ಸಿಟ್ಟಿಗೆದ್ದ ಕೃಷ್ಣ

Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಎಂದು ಏಕವಚನದಲ್ಲಿ ಕಿಟ್ಟಿ ಚಾರುವನ್ನು ಕೂಗುತ್ತಿದ್ದಾನೆ. ಅದರೆ ಇಷ್ಟು ದಿನ ಅವಳ ಮೇಲೆ ಕಿಟ್ಟಿಗೆ ಬಹಳ ಗೌರವ ಇತ್ತು. ಇಂದು ಯಾಕೆ ಏಕೆ ವಚನದಲ್ಲಿ ಕೂಗಿದ್ದಾನೆ ಎಂದು ಎಲ್ಲರಿಗೂ ಆಶ್ಚರ್ಯ ಆಗಿದೆ. ಜಾನಕಿ ಬೈದಿದ್ದಾಳೆ.

ರಾಮಾಚಾರಿ ಧಾರಾವಾಹಿ
ರಾಮಾಚಾರಿ ಧಾರಾವಾಹಿ (Colors Kannada)

ರಾಮಾಚಾರಿ ಧಾರಾವಾಹಿಯಲ್ಲಿ ಚಾರುಗೆ ಕಷ್ಟ ಕೊಡಲು ಎಂದೇ ಎರಡು ಜನ ಬಂದಂತಾಗಿದೆ. ಮೊದಲು ವೈಷಾಖಾ ಒಬ್ಬಳೇ ಆಗಿದ್ದಳು ಈಗ ಅವಳ ಜತೆಗೆ ರುಕ್ಕು ಕೂಡ ಸೇರಿಕೊಂಡಿದ್ದಾಳೆ. ಹೀಗಿರುವ ಅವರಿಬ್ಬರ ಆಟ ಇನ್ನೂ ಹೆಚ್ಚಾಗಿದೆ. ವೈಶಾಖಾ ಎಂಥವಳು ಎನ್ನುವ ವಿಚಾರ ಈಗಾಗಲೇ ಚಾರುಗೆ ಗೊತ್ತಿದೆ, ಆದರೆ ರುಕ್ಕು ಯಾವ ರೀತಿ ಎಂದು ಇನ್ನು ಮುಂದೆ ಅರ್ಥ ಆಗಬೇಕಿದೆ. ರುಕ್ಕು ತನ್ನ ಗಂಡ ಕೃಷ್ಣನಿಗೆ ಹೇಳಿ ಹೊಸ ಆಟ ಆರಂಭಿಸಿದ್ದಾಳೆ. ಅವಳಿಗೆ ಚಾರು ಬೈಸಿಕೊಂಡಷ್ಟೂ ಸಂತೋಷ ಆಗುತ್ತದೆ. ಏಕಏಕಿ ಕಿಟ್ಟಿ ಚಾರುವನ್ನು ಕೋಪದಿಂದ ಏಕವಚನದಲ್ಲಿ ಕೂಗಿದ್ದಾನೆ.

ಆಗ ಅದನ್ನು ಮೊದಲು ಕೇಳಿಸಿಕೊಂಡು ಓಡಿ ಬಂದವಳು ಜಾನಕಿ. “ಏನಾಯ್ತಪ್ಪ? ಯಾಕೆ ನೀನು ಅತ್ತಿಗೆನಾ ಏಕವಚನದಲ್ಲಿ ಕರೀತಾ? ಇದ್ದೀಯ?” ಎಂದು ಅವಳು ಕೇಳುತ್ತಾಳೆ. ಆದರೆ ಅವನು ಯಾಕೆ ಎಂದು ಕಾರಣ ಹೇಳೊದಿಲ್ಲ. ಅವನು ಕೂಗೋದನ್ನು ಕೇಳಿಸಿಕೊಂಡು ತನ್ನ ಕೋಣೆಯಿಂದ ವೈಶಾಖಾ ಕೂಡ ಬರುತ್ತಾಳೆ. ಆದರೆ ಅವಳಿಗೂ ಇದರ ಬಗ್ಗೆ ಏನೂ ಗೊತ್ತಿಲ್ಲ. ಆದರೆ ಮನಸಿನಲ್ಲೇ ಅವಳು ಅಂದುಕೊಳ್ಳುತ್ತಾಳೆ. ರುಕ್ಕುನೇ ಏನೋ ಮಾಡಿದ್ದಾಳೆ ಎಂದು. ಅವಳಿಗಂತೂ ಖುಷಿ ಆಗುತ್ತದೆ.

ಕಿಟ್ಟಿಯ ಕಿರುಚಾಟ

ಅಷ್ಟರಲ್ಲಿ ಅಲ್ಲಿಗೆ ಚಾರು ಬರುತ್ತಾಳೆ. "ಯಾಕೆ ಆ ರೀತಿ ಕೂಗ್ತಾ ಇದೀಯ? ಅಷ್ಟೊಂದು ಜೋರಾದ ಧ್ವನಿಯಲ್ಲಿ ಕೂಗೋದು ಯಾವಾಗ ಗೊತ್ತಾ ನಿನನೆ? ಯಾರಾದರೂ ದೂರ ಇದ್ದಾಗ" ಎಂದು ಹೇಳುತ್ತಾಳೆ. ಆಗ ಕಿಟ್ಟಿ ನೀನು ನನಗೆ ಹತ್ತಿರ ಇಲ್ಲ. ದೂರವೇ ಇರೋದು. ಈ ಮನೆಯ ಕೆಟ್ಟ ಸೊಸೆ ನೀನು ಎಂದು ಒಂದೇ ಸಮನೆ ಬೈತಾನೆ. ಆದರೆ ಏನಾಯ್ತು ಎಂದು ಕೇಳಿದರೆ ಉತ್ತರಿಸೋದಿಲ್ಲ.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

Whats_app_banner