Ramachari Serial: ಹೆಂಡತಿಯರಿಗಾಗಿ ಬೈದುಕೊಂಡ ಅಣ್ಣ-ತಮ್ಮ; ರಾಮಾಚಾರಿಗೆ ಹೆಂಡತಿಯ ದಾಸ ನೀನು ಎಂದು ಬೈದ ಕೃಷ್ಣ
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ಹೆಂಡತಿಯರಿಗಾಗಿ ಬೈದುಕೊಂಡ ಅಣ್ಣ-ತಮ್ಮ; ರಾಮಾಚಾರಿಗೆ ಹೆಂಡತಿಯ ದಾಸ ನೀನು ಎಂದು ಬೈದ ಕೃಷ್ಣ

Ramachari Serial: ಹೆಂಡತಿಯರಿಗಾಗಿ ಬೈದುಕೊಂಡ ಅಣ್ಣ-ತಮ್ಮ; ರಾಮಾಚಾರಿಗೆ ಹೆಂಡತಿಯ ದಾಸ ನೀನು ಎಂದು ಬೈದ ಕೃಷ್ಣ

Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಕೃಷ್ಣ ತುಂಬಾ ಸಿಟ್ಟಾಗಿದ್ದಾನೆ. ಚಾರು ಹಾಗೂ ರಾಮಾಚಾರಿ ಇಬ್ಬರ ಮೇಲೂ ಕೂಗಾಡಿದ್ದಾನೆ. ಅವನಿಗೆ ಬಂದ ಕೋಪಕ್ಕೆ ಯಾರನ್ನೂ ಲೆಕ್ಕಿಸದೇ ಏಕವಚನದಲ್ಲಿ ಮಾತಾಡಿದ್ದಾನೆ.

ರಾಮಾಚಾರಿ ಧಾರಾವಾಹಿ
ರಾಮಾಚಾರಿ ಧಾರಾವಾಹಿ (ಕಲರ್ಸ್ ಕನ್ನಡ)

ರಾಮಾಚಾರಿ ಧಾರಾವಾಹಿಯಲ್ಲಿ ರುಕ್ಕು ಮಾಡಿದ ಉಪಾಯದಿಂದ ಚಾರು ಬೈಸಿಕೊಳ್ಳುವ ಹಾಗಾಗಿದೆ. ಮನೆಗೆ ಗುರುಗಳು ಬಂದ ದಿನ ರುಕ್ಕು ಅಡುಗೆ ಮಾಡಿರುತ್ತಾಳೆ. ಆದರೆ ಅಡುಗೆಯಲ್ಲಿ ಉಪ್ಪು ಹೆಚ್ಚಾಗಿರುತ್ತದೆ. ಅದನ್ನು ಊಟ ಮಾಡಲು ಆಗದೇ ಗುರುಗಳು ಬೇಕು ಎಂದೇ ಈ ರೀತಿ ಮಾಡಿದ್ದೀರಿ ಎಂದು ಹೇಳುತ್ತಾ ಅಲ್ಲಿಂದ ಅರ್ಧಕ್ಕೇ ಊಟ ನಿಲ್ಲಿಸಿ ಎದ್ದು ಹೋಗುತ್ತಾರೆ. ಆ ಕಾರಣದಿಂದ ನಾರಾಯಣಾಚಾರ್ಯರಿಗೆ ತುಂಬಾ ಕೋಪ ಬಂದಿದೆ. ಆದರೆ ಅಂದು ಅಡುಗೆ ಮಾಡಿದ್ದು ರುಕ್ಕು ಎನ್ನುವ ಕಾರಣಕ್ಕೆ ಎಲ್ಲರ ಗಮನ ಅವಳೆಡೆಗಿರುತ್ತದೆ. ಆದರೆ ಅವಳು ಕುತಂತ್ರ ಮಾಡಿದ್ದಾಳೆ.

ತಾನು ಅಡುಗೆ ಮಾಡುವಾಗ ಅದನ್ನು ವಿಡಿಯೋ ಮಾಡಿಟ್ಟುಕೊಂಡಿದ್ದಾಳೆ. ಅದರಲ್ಲಿ ಅಡುಗೆ ಸರಿಪಡಿಸಲು ಚಾರು ಉಪ್ಪು ಹಾಕಿದ ದೃಶ್ಯಗಳೂ ಸೆರೆಯಾಗಿದೆ. ಆದರೆ ಅದೇ ದೊಡ್ಡ ತಪ್ಪು, ಚಾರು ಬೇಕು ಎಂದೇ ಒಂದಷ್ಟು ಉಪ್ಪು ಹಾಕಿ ಅಡುಗೆಯನ್ನು ಹಾಳು ಮಾಡಿದ್ದಾಳೆ ಎಂದು ಕೃಷ್ಣ ಹೇಳುತ್ತಿದ್ದಾನೆ. ಎಲ್ಲರ ಎದುರು ತಾನು ಸಾಕ್ಷಿ ತೋರಿಸುತ್ತೇನೆ ಎಂದು ರುಕ್ಕು ಮೊಬೈಲ್‌ನಲ್ಲಿ ಮಾಡಿದ ವಿಡಿಯೋ ತೋರಿಸುತ್ತಿದ್ದಾನೆ. ಮಧ್ಯ ಏನಾಯ್ತು ಎಂದು ಪ್ರಶ್ನೆ ಮಾಡಿದ ರಾಮಾಚಾರಿಗೂ ಏಕವಚನದಲ್ಲಿ ಮನಬಂದಂತೆ ಬೈದಿದ್ದಾನೆ.

ಮಕ್ಕಳನ್ನು ನೋಡಿ ಬೇಸರಿಸಿಕೊಂಡ ಜಾನಕಿ

ನನ್ನ ಬಳಿ ಮಾತಾಡಲು ಬರಬೇಡ. ನೀನು ನಿನ್ನ ಹೆಂಡತಿಯ ದಾಸ. ಅವಳು ಹೇಳಿದಂತೆ ಯಾವಾಗಲೂ ಕುಣಿತಾ ಇತೀಯಾ.. ನನ್ನ ಹೆಂಡತಿ ವಿಚಾರಕ್ಕೆ ಇನ್ನು ಮುಂದೆ ನೀವ್ಯಾರಾದ್ರೂ ಬಂದ್ರೆ ನಾನು ಮಾತ್ರ ಸುಮ್ಮನಿರೋದಿಲ್ಲ ಎಂದು ರೇಗಿದ್ದಾನೆ. ಆಗ ರಾಮಾಚಾರಿ ಇನ್ನೇನೋ ಮಾತಾಡಬೇಕು ಎಂದುಕೊಳ್ಳುವಷ್ಟರಲ್ಲಿ ಇನ್ನೂ ಕೆಟ್ಟದಾಗಿ ಬೈಗುಳ ಆರಂಭಿಸಿದ್ದಾನೆ. ಆಗ ರಾಮಾಚಾರಿ ಹಾಗೂ ಚಾರು ಇಬ್ಬರೂ ಮೌನವಹಿಸಿದ್ದಾರೆ. ಆದರೆ ತನ್ನ ಕಣ್ಣೆದುರೇ ಮಕ್ಕಳಿಬ್ಬರು ಈ ರೀತಿ ಒಬ್ಬರನ್ನೊಬ್ಬರು ಬೈದುಕೊಳ್ಳುವುದನ್ನು ಕಂಡು ಜಾನಕಿ ತುಂಬಾ ಬೇಸರ ಮಾಡಿಕೊಂಡಿದ್ದಾಳೆ. ಮನೆಯಲ್ಲಿ ಯಾಕೆ ಈ ರೀತಿ ಆಗ್ತಾ ಇದೆ ಎಂದು ದಂಗಾಗಿದ್ದಾಳೆ. ಆದರೆ ಯಾವಾಗಲೂ ಕೆಟ್ಟದನ್ನೇ ಬಯಸೋ ವೈಶಾಖಾಳಿಗೂ ಈ ಯಾವ ವಿಚಾರವೂ ತಿಳಿದಿರುವುದಿಲ್ಲ.

ಧಾರಾವಾಹಿಯ ಬಗ್ಗೆ ಜನಾಭಿಪ್ರಾಯ ಕೆಡುತ್ತಿದೆ. ಮತ್ತೆ ಅದೇ ಅದೇ ದ್ವೇಷದ ಕಥೆ ಯಾಕೆ? ಎಂದು ಪ್ರಶ್ನಿಸುತ್ತಿದ್ದಾರೆ..

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

Whats_app_banner