Ramachari Serial: ರಾಮಾಚಾರಿ ಮನೆಯಲ್ಲಿ ಹುಟ್ಟಿಕೊಂಡಿದೆ ದ್ವೇಷ; ಕಿಟ್ಟಿಯನ್ನು ಬದಲಾಯಿಸಿ ರುಕ್ಕು - ಚಾರು ಬಳಿ ಕ್ಷಮೆಯಾಚನೆ ನಾಟಕ
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ರಾಮಾಚಾರಿ ಮನೆಯಲ್ಲಿ ಹುಟ್ಟಿಕೊಂಡಿದೆ ದ್ವೇಷ; ಕಿಟ್ಟಿಯನ್ನು ಬದಲಾಯಿಸಿ ರುಕ್ಕು - ಚಾರು ಬಳಿ ಕ್ಷಮೆಯಾಚನೆ ನಾಟಕ

Ramachari Serial: ರಾಮಾಚಾರಿ ಮನೆಯಲ್ಲಿ ಹುಟ್ಟಿಕೊಂಡಿದೆ ದ್ವೇಷ; ಕಿಟ್ಟಿಯನ್ನು ಬದಲಾಯಿಸಿ ರುಕ್ಕು - ಚಾರು ಬಳಿ ಕ್ಷಮೆಯಾಚನೆ ನಾಟಕ

Ramachari Serial: ರಾಮಾಚಾರಿ ಮನೆಯಲ್ಲಿ ದ್ವೇಷ ತುಂಬಿಕೊಂಡಿದೆ. ಕಿಟ್ಟಿ ಕೂಡ ಮತ್ತೆ ಬದಲಾಗುತ್ತಾ ಇದ್ದಾನೆ. ಈ ಹಿಂದೆ ಅವನ ಕೆಟ್ಟ ಗುಣಗಳೆಲ್ಲ ಹೋಗಿತ್ತು, ಆದರೆ ಈಗ ಅವನಿಗೇ ತಿಳಿಯದ ಹಾಗೆ ಅವನು ಕೆಟ್ಟವನಾಗುತ್ತಾ ಇದ್ದಾನೆ.

ರಾಮಾಚಾರಿ ಧಾರಾವಾಹಿ
ರಾಮಾಚಾರಿ ಧಾರಾವಾಹಿ (Colors Kannada)

ರಾಮಾಚಾರಿ ಧಾರಾವಾಹಿಯಲ್ಲಿ ಇಷ್ಟು ದಿನ ಚಾರು ಒಳ್ಳೆಯವಳು ಎಂದು ನಂಬಿದ್ದ ಕಿಟ್ಟಿಗೆ ತನ್ನ ಹೆಂಡತಿ ಕಾರಣದಿಂದಾಗಿ ಚಾರು ಕೂಡ ಕೆಟ್ಟವಳಾಗಿ ಕಾಣುತ್ತಿದ್ದಾಳೆ. ಸಾಕಷ್ಟು ಪ್ರಯತ್ನಪಟ್ಟು ರುಕ್ಕು ಈ ರೀತಿ ಮತ್ತೆ ಕಿಟ್ಟಿಗೆ ಚಾರುಗೆ ಮೇಲೆ ದ್ವೇಷ ಬರುವ ರೀತಿ ಮಾಡಿದ್ದಾಳೆ. ರಾಮಾಚಾರಿ ಬಂದು ರುಕ್ಕು ಹತ್ತಿರ ವೈಶಾಖಾ ಎಲ್ಲಿ ಎಂದು ಪ್ರಶ್ನೆ ಮಾಡುತ್ತಾನೆ. ಆಗ ರುಕ್ಕು ಅಕ್ಕ ಬಟ್ಟೆ ಒಣಗಿಸುತ್ತಾ ಇದ್ದಾಳೆ ಎಂದು ಹೇಳುತ್ತಾಳೆ. ಆಗ ಒಂದೂ ಮರು ಮಾತಾಡದೇ ಅವನು ಅಲ್ಲಿಂದ ಹೋಗಿಬಿಡುತ್ತಾನೆ. ಅದನ್ನು ಕಂಡು ಅವಳಿಗೆ ಭಯ ಆಗುತ್ತದೆ. ಇದೇನಿದು ಇವನು ಈ ರೀತಿ ಹೋಗ್ತ ಇದ್ದಾನಲ್ಲ ಅಕ್ಕನ ನಾಟಕದ ಮೇಲೆ ಅನುಮಾನ ಬಂತಾ ಹೇಗೆ? ಎಂದು ಅಂದುಕೊಳ್ಳುತ್ತಾಳೆ.

ವೈಶಾಖಾಳನ್ನು ನಂಬಿದ ಕಿಟ್ಟಿ

ಆದರೆ ಅಲ್ಲಿ ನಡೆದದ್ದೇ ಬೇರೆ. ಕಿಟ್ಟಿ ಹೋಗಿ ಅತ್ತಿಗೆ ವೈಶಾಖಾ ಹತ್ತಿರ ಮಾತಾಡುತ್ತಾನೆ. “ಮೊದಲು ನಾನು ನೀವು ಕೆಟ್ಟವರು ಎಂದು ಅಂದುಕೊಂಡೆ, ನೀವು ಯಾವಾಗಲೂ ಬದಲಾಗೋದೇ ಇಲ್ಲ ಎಂದು ಅಂದುಕೊಂಡು ನಿಮ್ಮ ಮೇಲೆ ಕೆಟ್ಟ ಭಾವನೆ ಇಟ್ಟುಕೊಂಡಿದ್ದೆ. ನಾನೂ ಈ ಮೊದಲು ಕೆಟ್ಟವನಾಗಿದ್ದೆ, ಆದರೆ ಈಗ ಒಳ್ಳೆಯವನಾಗಿದ್ದೇನೆ. ಆದರೆ ಚಾರು ಅತ್ಗೆ ಈಗ ಕೆಟ್ಟವರಾಗುತ್ತಾ ಇದ್ದಾರೆ” ಎಂದು ಹೇಳುತ್ತಾನೆ. ಅವನ ಮಾತನ್ನು ಕೇಳಿ ವೈಶಾಖಾಳಿಗೆ ಶಾಕ್ ಆಗುತ್ತದೆ. ಅಬ್ಬಾ! ನನ್ನ ಮೇಲೆ ಇವನಿಗೆ ಇಷ್ಟೊಂದು ಒಳ್ಳೆಯ ಭಾವನೆ ಎಂದು ಅವಳು ಅಂದುಕೊಂಡು ಖುಷಿಪಡುತ್ತಾಳೆ. ಆದರೆ ನಿಜವಾಗಿಯೂ ಅವಳು ಕೆಟ್ಟವಳೇ ಆಗಿರುತ್ತಾಳೆ.

ಚಾರು ಬಳಿ ಕ್ಷಮೆಯಾಚನೆಯ ನಾಟಕ ಮಾಡಿದ ರುಕ್ಕು
ರುಕ್ಕು ಸೀದಾ ಚಾರು ಇದ್ದಲ್ಲಿಗೆ ಹೋಗುತ್ತಾಳೆ. ಹೋಗಿ ಅವಳ ಹತ್ತಿರ ಕ್ಷಮೆ ಯಾಚಿಸುತ್ತಾಳೆ. “ಅದೂ ಚಾರು ನಿನ್ನೆ ಆಗಿದ್ದರ ಬಗ್ಗೆ ನಾನು ಸಾರಿ ಕೇಳ್ತೀನಿ ಕಿಟ್ಟಿ ಒರಟ. ಅವನಿಗೆ ಗೊತ್ತಾಗಲ್ಲ” ಎಂದು ಹೇಳುತ್ತಾಳೆ. ಆಗ ಚಾರು ನನಗೆ ಎಲ್ಲ ಗೊತ್ತು.. ಅದನ್ನೆಲ್ಲ ನಾನು ನನ್ನ ಮನಸಿಗೂ ಹಾಕಿಕೊಂಡಿಲ್ಲ ಎಂದು ಹೇಳಿ ಸುಮ್ಮನಾಗುತ್ತಾಳೆ. ಆದರೂ ರುಕ್ಕು ತಾನು ಒಳ್ಳೆಯವಳು ಎಂದು ಸಾಬೀತು ಮಾಡಿಕೊಳ್ಳಲು ಸಾಕಷ್ಟು ಮಾತಾಡುತ್ತಾಳೆ.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

Whats_app_banner