Ramachari Serial: ಶ್ರುತಿಗೆ ಸಿಹಿ ಸುದ್ದಿ ಹೇಳಲು ಬಂದ ರಾಮಾಚಾರಿ, ಚಾರು; ಜಾನಕಿಗೆ ಮಾತ್ರ ಗೊತ್ತು ಕಹಿ ಸತ್ಯ
Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಹಾಗೂ ರಾಮಾಚಾರಿ ಶ್ರುತಿ ಮದುವೆ ವಿಚಾರ ತಿಳಿಸಲು ಬಂದಿರುತ್ತಾರೆ. ಆದರೆ ಶ್ರುತಿ ಮಾತ್ರ ಅಳುತ್ತಾ ಕುಳಿತಿರುತ್ತಾಳೆ.

ರಾಮಾಚಾರಿ ಹಾಗೂ ಚಾರು ಇಬ್ಬರೂ ಶ್ರುತಿಗೆ ಸಿಹಿ ಸಮಾಚಾರ ಹೇಳಬೇಕು ಎಂದು ಬಯಸಿ ಬಂದಿರುತ್ತಾರೆ. ಆದರೆ ಅವರಿಬ್ಬರಿಗೆ ಮನೆಯಲ್ಲಿ ಏನು ನಡೆದಿದೆ ಎಂಬ ವಿಚಾರ ಗೊತ್ತಾಗಿರುವುದಿಲ್ಲ. ಹಾಗಾಗಿ ನೇರವಾಗಿ ಅವರು ಶ್ರುತಿ ಇರುವ ಕೋಣೆ ಕಡೆ ಹೋಗುತ್ತಾರೆ, ಜಾನಕಿ ಮಾತ್ರ ಶ್ರುತಿ ಪ್ರೀತಿ ಮಾಡಿರುವ ವಿಚಾರವನ್ನು ತಿಳಿದು ತುಂಬಾ ನೋವಿನಿಂದ ಕೂತಿರುತ್ತಾಳೆ. ಶ್ರುತಿ ತಾನು ಪ್ರೀತಿಸಿದವನ ಜತೆ ಹೋಗಿ ಕೆಲ ದಿನ ಉಳಿದುಕೊಂಡು ಬಂದಿರುತ್ತಾಳೆ. ಅವಳು ಕಾಲ್‌ನಲ್ಲಿ ಮಾತಾಡುತ್ತಾ ಇರುವ ಸಂದರ್ಭದಲ್ಲಿ ಜಾನಕಿಗೆ ಈ ಸತ್ಯದ ಅರಿವಾಗುತ್ತದೆ. ವಿಷಯ ತಿಳಿದ ತಕ್ಷಣ ಜಾನಕಿ ಬೇಸರ ಮಾಡಿಕೊಳ್ಳುತ್ತಾಳೆ. ಈ ವಿಚಾರದ ಬಗ್ಗೆ ಶ್ರುತಿ ಮತ್ತು ಜಾನಕಿ ಮಾತಾಡುವುದು ರುಕ್ಕುಗೂ ಕೇಳಿಸಿರುತ್ತದೆ.
ಶ್ರುತಿಗೆ ಕೂಡಿ ಬಂತು ಹೊಸ ಸಂಬಂಧ
ಆದರೆ ರಾಮಾಚಾರಿ ಮತ್ತು ಚಾರು ಏನೂ ಅರಿಯದೆ ಸಿಹಿ ತಿಂಡಿ ತೆಗೆದುಕೊಂದು ಶ್ರುತಿ ಇದ್ದಲ್ಲಿಗೆ ಬರುತ್ತಾರೆ. ಸಿಹಿ ವಿಚಾರ ಹಾಗೂ ಸಿಹಿ ಎರಡನ್ನೂ ತಂದಿದ್ದೇವೆ ಎನ್ನುತ್ತಾ ಕೋಣೆಯ ಒಳಗಡೆ ಹೋಗಲು ನೋಡುತ್ತಾರೆ. ಆದರೆ ಅಲ್ಲಿ ಜಾನಕಿ ಅವಳ ಕೋಣೆಗೆ ಹೊರಗಿನಿಂದ ಚಿಲಕ ಹಾಕಿ ಕಾಯುತ್ತಾ ಕುಳಿತಿರುತ್ತಾಳೆ. ಒಳಗಡೆ ಶ್ರುತಿ ಅಳುತ್ತಿದ್ದಾಳೆ. ರಾಮಾಚಾರಿ ಹಾಗೂ ಚಾರು ಬರುತ್ತಿರುವುದನ್ನು ಕಂಡು ಜಾನಕಿಗೆ ಗಾಬರಿ ಆಗುತ್ತದೆ. ನನಗೆ ಗೊತ್ತಿಲ್ಲದೆ ನಾನೇ ಮರೆತು ಹೊರಗಿನಿಂದ ಚಿಲಕ ಹಾಕಿದ್ದೇನೆ ಎಂದು ಸುಳ್ಳು ಹೇಳುತ್ತಾಳೆ. ಆಗ ರಾಮಾಚಾರಿ ಮತ್ತು ಚಾರು ಹೌದಿರಬಹುದು ಎಂದುಕೊಂಡು ಅಲ್ಲಿಂದ ಒಳಗಡೆ ಹೋಗುತ್ತಾರೆ.
ಚಾರು ಸಿಹಿ ತಟ್ಟೆಯನ್ನು ಶ್ರುತಿ ಮುಂದಿಟ್ಟರೂ ಅವಳು ಮಾತ್ರ ತಿರುಗಿ ನೋಡುವುದಿಲ್ಲ. ಅದನ್ನು ಕಂಡು ಚಾರು ಸರಿಯಾಗಿ ಗಮನಿಸಿದಾಗ ಶ್ರುತಿ ಅಳುತ್ತಿರುತ್ತಾಳೆ. ಅವಳಿಗೆ ಏನಾಗಿದೆ ಎಂದು ಪ್ರಶ್ನೆ ಮಾಡಿದಾಗ, ಜಾನಕಿ ತಾನೇ ಮಾತಾಡುತ್ತಾಳೆ. ಏನೂ ಇಲ್ಲ ಮದುವೆ ಮಾಡ್ತಾರೆ ಅಂತ ಬೇಸರ ಮಾಡಿಕೊಂಡಿದ್ದಾಳೆ. ಈ ಮನೆ ಬಿಟ್ಟು ಹೋಗ್ಬೇಕಲ್ಲ ಎಂದು ಹೇಳುತ್ತಾಳೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ
