Ramachari Serial: ರಾಮಾಚಾರಿ ಕೊಲ್ಲಲು ಉಪಾಯ ಮಾಡಿದ ವೈಶಾಖಾ; ವಿಷಯ ತಿಳಿದ ಚಾರುಗೆ ಶುರುವಾಯ್ತು ನಡುಕ
Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಮತ್ತು ವೈಶಾಖಾ ನಡುವೆ ಗಲಾಟೆ ಆರಂಭವಾಗಿದೆ. ಯಾಕೆಂದರೆ ವೈಶಾಖಾ ರಾಮಾಚಾರಿಯನ್ನು ಕೊಲ್ಲಲು ಉಪಾಯ ಮಾಡಿದ್ದಾಳೆ.

Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ಹಾಗೂ ಚಾರುಗೆ ಮೊದಲಿನಿಂದಲೂ ಒಬ್ಬರನ್ನು ಕಂಡರೆ, ಇನ್ನೊಬ್ಬರಿಗೆ ಆಗೋದಿಲ್ಲ. ಹೀಗಿರುವಾಗ ವೈಶಾಖಾ ರಾಮಾಚಾರಿ ಕುಟುಂಬವನ್ನು ನಾಶ ಮಾಡಬೇಕು ಎಂದು ಹಠ ಹಿಡಿದು ಈ ಮನೆಗೆ ಬಂದ ಸೊಸೆಯಾಗಿರುತ್ತಾಳೆ. ತಾನು ಕೋದಂಡನ ಎರಡನೇ ಹೆಂಡತಿ ಆದರೂ ಪರವಾಗಿಲ್ಲ ಈ ಮನೆಯನ್ನು ಹಾಳು ಮಾಡಲೇಬೇಕು ಎಂದು ಬಂದಿರುತ್ತಾಳೆ. ಅದರಂತೆ ಈ ಮನೆಗೆ ಕಾಲಿಟ್ಟಾಗಿನಿಂದಲೂ ರಾಮಾಚಾರಿ ಕುಟುಂಬಕ್ಕೆ ಕೇಡು ಬಗೆಯುತ್ತಿದ್ದಾಳೆ. ಈಗ ರಾಮಾಚಾರಿ ಕೊಲೆ ಮಾಡಲು ಯತ್ನಿಸುತ್ತಿದ್ದಾಳೆ. ಈ ಹಿಂದೆ ಕಿಟ್ಟಿ ಜೀವ ತೆಗೆಯಲು ಪ್ರಯತ್ನ ಮಾಡಿದ್ದಳು.
ಚಾರು ದೇವರ ಮುಂದೆ ಬಂದು ನಿಂತು ಮನೆಯ ಪರಿಸ್ಥಿತಿಯನ್ನು ನೋಡಿ. "ದೇವರೆ ಕಾಪಾಡು, ರಾಮಾಚಾರಿಗೆ ಏನೂ ಆಗದ ರೀತಿ ನೋಡಿಕೋ" ಎಂದು ಬೇಡಿಕೊಳ್ಳುತ್ತಾ ಇರುತ್ತಾಳೆ. ಈ ರೀತಿ ಬೇಡಿಕೊಂಡಾಗ ಅದನ್ನು ಕೇಳಿಸಿಕೊಂಡು ವೈಶಾಖಾ ಬರುತ್ತಾಳೆ. "ನೀನು ಎಷ್ಟೇ ಬೇಡಿಕೊಂಡರೂ, ಏನೇ ಬೇಡಿಕೊಂಡರೂ ಅಂದುಕೊಂಡದ್ದು ಆಗೋದಿಲ್ಲ. ಇವತ್ತು ಬೆಳಿಗ್ಗೆ ಹೊಸ್ತಿಲಲ್ಲಿ ರಕ್ತ ಬಿದ್ದಿತ್ತು, ನೀನು ನೋಡಿದ್ಯೋ ಇಲ್ವೋ ಅಂತ ಗೊತ್ತಾಗ್ಲಿಲ್ಲ. ಆದ್ರೆ ಆ ರೀತಿ ರಕ್ತ ಬಿದ್ದರೆ. ಮನೆಯಿಂದ ಯಾರು ಹೊರಗಡೆ ಹೋಗ್ತಾ ಇದ್ದಾರೋ, ಅವರು ಮತ್ತೆ ಮನೆಗೆ ಬರೋದಿಲ್ಲ ಎಂದೇ ಅರ್ಥ ಎಂದು ಹೇಳುತ್ತಾಳೆ. ಆಗ ಚಾರುಗೆ ಸಹಜವಾಗಿ ಭಯ ಆಗುತ್ತದೆ.
ಚಾರುಗೆ ಶುರುವಾಯ್ತು ಭಯ
ಆದರೂ ತನ್ನ ಭಯವನ್ನು ತೋರಿಸಿಕೊಳ್ಳದೆ “ನಿನ್ನ ಹತ್ತಿರ ಏನೂ ಮಾಡೋಕಾಗಲ್ಲ” ಎಂದು ಹೇಳುತ್ತಾಳೆ. ಆದ್ರೆ ಅವಳು ತನ್ನ ಮಾತನ್ನು ಮುಂದುವರೆಸಿ.. ನಾನೇ ನಿನ್ನ ಗಂಡನನ್ನು ಕೊಲ್ಲಲು ಹೇಳಿದ್ದು. ನಾನೇ ಕೊಂದ್ರೆ ಅವನನ್ನು ಕೊಂದ ಪಾಪ ನನಗೆ ಅಂಟಿಕೊಳ್ಳುತ್ತದೆ. ಆ ಕಾರಣಕ್ಕಾಗಿ ನಾನು ಆ ಕೆಲಸ ಮಾಡೋದಿಲ್ಲ" ಎಂದು ಹೇಳುತ್ತಾಳೆ. ಆಗ ಚಾರು ಹಣೆ ಮೇಲೆ ಬೆವರಿನ ಹನಿಗಳು ಮೂಡುತ್ತದೆ. ಮತ್ತೆ ವೈಶಾಖಾ ಅಪಶಕುನದ ಮಾತನ್ನೇ ಆಡುತ್ತಾಳೆ. “ನೋಡು ಇದೇ ರೀತಿ ಈಗ ನಿನ್ನ ಹಣೆ ಬೆವರಿ ಕುಂಕುಮ ಅಳಿಸ್ತಾ ಇದ್ಯಲ್ಲ. ಅದೇ ರೀತಿ ಅವನು ಸತ್ತಮೇಲೆ ನಿನ್ನ ಹಣೆಯ ಕುಂಕುಮ ಅಳಿಸುತ್ತದೆ” ಎನ್ನುತ್ತಾಳೆ. ಆಗ ಚಾರು ಅವಳಿಗೆ ಹೊಡೆಯುವ ಪ್ರಯತ್ನ ಮಾಡುತ್ತಾಳೆ. ಆದರೆ ವೈಶಾಖಾ ಅವಳ ಕೈಹಿಡಿದು ತಡೆಯುತ್ತಾಳೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ
