Ramachari Serial: ರಾಮಾಚಾರಿ ಮೇಲೆ ವೈಶಾಖಾಳ ಕಣ್ಣು; ಚಾರುಗೆ ಹೆಚ್ಚಾಯ್ತು ಆತಂಕ
Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ತುಂಬಾ ಭಯದಲ್ಲಿದ್ದಾಳೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅದು ವೈಶಾಖಾ, ಇಂದು ನಾನು ನಿನ್ನ ಗಂಡನನ್ನು ಕೊಂದೇ ಕೊಲ್ಲುತ್ತೇನೆ ಎಂದು ಹೇಳಿರುತ್ತಾಳೆ. ಆ ಮಾತನ್ನು ಕೇಳಿ ಚಾರುಗೆ ಭಯವಾಗಿದೆ.

Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ತುಂಬಾ ಹೆದರಿಕೊಂಡಿದ್ದಾಳೆ. ಚಾರು ಈ ಮನೆಗೆ ಸೊಸೆಯಾಗಿ ಬಂದಾಗಿನಿಂದಲೂ ಒಂದು ದಿನವೂ ಸುಖ ಕಂಡಿಲ್ಲ. ಯಾಕೆಂದರೆ ಈ ಮನೆಯ ಮೇಲೆ ವೈಶಾಖಾಳ ಕೆಟ್ಟ ದೃಷ್ಟಿ ಇದೆ. ಹೇಗಾದರೂ ಮಾಡಿ ವೈಶಾಖಾಳನ್ನು ಮಟ್ಟ ಹಾಕಬೇಕು ಎಂದು ಆಗಾಗ ಅಂದುಕೊಳ್ಳುತ್ತಲೇ ಇರುತ್ತಾಳೆ. ಒಂದು ಬಾರಿ ಜೈಲಿಗೂ ಕಳಿಸಿದ್ದಾಳೆ. ಆದರೂ ಅವಳ ಅಟ್ಟಹಾಸ ಮಾತ್ರ ಕಡಿಮೆ ಆಗಿಲ್ಲ. ಹೀಗಿರುವಾಗ ಮುಂದೇನಾಗಿದೆ ನೀವೇ ಗಮನಿಸಿ.
ವೈಶಾಖಾ ಬಂದು ಚಾರು ಹತ್ತಿರ ನಾನು ನಿನ್ನ ಗಂಡನನ್ನು ಕೊಲ್ಲಲು ಉಪಾಯ ಮಾಡಿದ್ದೇನೆ. ನಾನೇ ಕೊಂದರೆ ಪಾಪ ನನ್ನ ಕೈಗೆ ಅಂಟಿಕೊಳ್ಳುತ್ತದೆ ಎಂದು ಇನ್ನೊಬ್ಬರಿಗೆ ಹೇಳಿ ಈ ಕೆಲಸ ಮಾಡಿಸುತ್ತಿದ್ದೇನೆ ಎಂದು ಹೇಳಿದ್ದಾಳೆ. ಮೊದಲು ಅವಳ ಮಾತಿನ ಮೇಲೆ ನಂಬಿಕೆ ಬರದೇ ಇದ್ದರೂ ಸಹ ಚಾರು ನಂತರ ಅವಳ ಮಾತನ್ನು ನಂಬಲೇಬೇಕಾಗಿ ಬಂತು. ಚಾರು ಆಟೋ ಮಾಡಿಕೊಂಡು ರಾಮಾಚಾರಿ ಆಫೀಸಿಗೆ ಹೋಗುವ ದಾರಿಯಲ್ಲೇ ಹೋಗುತ್ತಾಳೆ. ಆದರೆ ರಾಮಾಚಾರಿ ತುಂಬಾ ಮುಂದೆ ಹೋಗಿರುವುದರಿಂದ ಅವಳಿಗೆ ಆತಂಕ ಹೆಚ್ಚಾಗುತ್ತದೆ. ವೇಗವಾಗಿ ಹೋಗಿ ಎಂದು ಹೇಳುತ್ತಾಳೆ.
ಚಾರುಗೆ ಶುರುವಾಯ್ತು ಆತಂಕ
ಆಟೋದಲ್ಲಿ ಕುಳಿತುಕೊಂಡೇ ಕೂಗುತ್ತಾಳೆ. ಎಷ್ಟು ಕೂಗಿದರೂ ರಾಮಾಚಾರಿಗೆ ಅದು ಕೇಳಿಸುವುದಿಲ್ಲ. ಒಂದು ತಿರುವಿನಲ್ಲಿ ಅಪಘಾತವಾಗುತ್ತದೆ. ಆಟೋದವನು ದೂರದಲ್ಲೇ ಆಟೋ ನಿಲ್ಲಿಸುತ್ತಾನೆ. ಏನಾಯ್ತು ಎಂದು ಚಾರು ಪ್ರಶ್ನೆ ಮಾಡುತ್ತಾಳೆ. ಆಗ ಅವನು ಯಾರೋ ಸತ್ತಿರಬೇಕು ಮೇಡಂ ಎಂದು ಹೇಳುತ್ತಾನೆ. ಅದನ್ನು ಕೇಳಿ ಅವಳಿಗೆ ತುಂಬಾ ಗಾಬರಿಯಾಗುತ್ತದೆ. ಹತ್ತಿರ ಹೋಗುತ್ತಿದ್ದಂತೆ ಯಾರು ಎಂದು ಅವಳಿಗೆ ಸ್ಪಷ್ಟವಾಗಿ ಕಾಣಿಸುವುದಿಲ್ಲ.
ಇದೆಲ್ಲವೂ ವೈಶಾಖಾಳ ತಂತ್ರ
ವೈಶಾಖಾ ಏನು ಉಪಾಯ ಮಾಡಿದ್ದಾಳೆ ಎನ್ನುವುದನ್ನು ರುಕ್ಕುಗೆ ಹೇಳಿರುತ್ತಾಳೆ. ಅದರಿಂದ ರುಕ್ಕು ತುಂಬಾ ಖುಷಿಯಲ್ಲಿದ್ದಾಳೆ. ರಾಮಾಚಾರಿ ಫೋಟೋ ತೆಗೆದುಕೊಂಡು ಅದನ್ನು ಗೋಡೆಗೆ ನೇತುಹಾಕಿ ಅದಕ್ಕೆ ಹಾರ ಹಾಕುತ್ತಾಳೆ. ಅದನ್ನು ನೋಡಿ ವೈಶಾಖಾ ಏನು ಮಾಡುತ್ತಿದ್ದೀಯಾ? ಎಂದು ಪ್ರಶ್ನೆ ಮಾಡುತ್ತಾಳೆ. ಆಗ ರುಕ್ಕು ನಾನೂ ಏನಾದರೂ ಮಾಡಬೇಕಲ್ಲ ಮಾಡ್ತಾ ಇದೀನಿ ಎಂದು ಹೇಳುತ್ತಿದ್ದಾಳೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ
