Dhananjaya-Amrutha: ಧನಂಜಯ್-ಅಮೃತಾ ನಿಜಕ್ಕೂ ಲವ್ ಮಾಡ್ತಿದ್ಧಾರಾ... ಅನುಮಾನ ಮೂಡಿಸಿದ ರಮ್ಯಾ ಮಾತುಗಳು!
ರಮ್ಯಾ ಅವರ ಮಾತುಗಳನ್ನು ಕೇಳಿ ಎಲ್ಲರಿಗೂ ಧನಂಜಯ್-ಅಮೃತಾ ನಿಜಕ್ಕೂ ಲವ್ ಮಾಡುತ್ತಿದ್ಧಾರಾ ಎಂಬ ಅನುಮಾನ ಕಾಡುತ್ತಿದೆ. ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಇಬ್ಬರೂ ಪ್ರೀತಿಸುತ್ತಿದ್ದಾರೆ. ಆದರೆ ಇಬ್ಬರೂ ತಮ್ಮ ಪ್ರೀತಿಯ ವಿಚಾರವನ್ನು ಒಪ್ಪಿಕೊಳ್ಳಲು ಮಾತ್ರ ರೆಡಿಯಿಲ್ಲ ಎಂಬ ಮಾತುಗಳು ಬಹಳ ದಿನಗಳಿಂದ ಕೇಳಿಬರುತ್ತಿದೆ.
ಡಾಲಿ ಧನಂಜಯ್ 25ನೇ ಸಿನಿಮಾ 'ಗುರುದೇವ್ ಹೊಯ್ಸಳ' ಸಿನಿಮಾ ಇಂದು ತೆರೆ ಕಂಡಿದೆ. ಸಿನಿಮಾ ನೋಡಿದವರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸ್ಯಾಂಡಲ್ವುಡ್ ಮೋಹಕತಾರೆ ರಮ್ಯಾ ಕೂಡಾ ಚಿತ್ರ ನೋಡಿ ಧನಂಜಯ್, ಅಮೃತಾ ಅಯ್ಯಂಗಾರ್ ಹಾಗೂ ಇನ್ನಿತರ ಕಲಾವಿದರ ನಟನೆಗೆ ಕಾಂಪ್ಲಿಮೆಂಟ್ಸ್ ನೀಡಿದ್ದಾರೆ.
ಚಿತ್ರ ನೋಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಮ್ಯಾ, ಡಾಲಿ ಹಾಗೂ ಅಮೃತಾ ನಡುವೆ ಲವ್ ಇರಬಹುದು ಎನ್ನುವಂತೆ ಮಾತನಾಡಿದ್ದಾರೆ. ರಮ್ಯಾ ಅವರ ಮಾತುಗಳನ್ನು ಕೇಳಿ ಎಲ್ಲರಿಗೂ ಧನಂಜಯ್-ಅಮೃತಾ ನಿಜಕ್ಕೂ ಲವ್ ಮಾಡುತ್ತಿದ್ಧಾರಾ ಎಂಬ ಅನುಮಾನ ಕಾಡುತ್ತಿದೆ. ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಇಬ್ಬರೂ ಪ್ರೀತಿಸುತ್ತಿದ್ದಾರೆ. ಆದರೆ ಇಬ್ಬರೂ ತಮ್ಮ ಪ್ರೀತಿಯ ವಿಚಾರವನ್ನು ಒಪ್ಪಿಕೊಳ್ಳಲು ಮಾತ್ರ ರೆಡಿಯಿಲ್ಲ ಎಂಬ ಮಾತುಗಳು ಬಹಳ ದಿನಗಳಿಂದ ಕೇಳಿಬರುತ್ತಿದೆ. ಇತ್ತೀಚೆಗೆ ಸುದೀಪ್ ಕೂಡಾ 'ಗುರುದೇವ್ ಹೊಯ್ಸಳ' ಸಿನಿಮಾ ಕಾರ್ಯಕ್ರಮದಲ್ಲಿ ಅಮೃತಾ ವಿಚಾರದಲ್ಲಿ ಡಾಲಿ ಕಾಲೆಳೆದಿದ್ದರು. ಇದೀಗ ರಮ್ಯಾ ಆಡಿರುವ ಮಾತುಗಳು ಕೂಡಾ ಇಬ್ಬರ ಲವ್ ಸೀಕ್ರೇಟ್ ಬಿಚ್ಚಿಟ್ಟ ಹಾಗೇ ಇದೆ.
'ಗುರುದೇವ್ ಹೊಯ್ಸಳ' ಚಿತ್ರದಲ್ಲಿ ಅಮೃತಾ ಹಾಗೂ ಧನಂಜಯ್ ಗಂಡ - ಹೆಂಡತಿ ಆಗಿ ನಟಿಸಿದ್ಧಾರೆ. ಇದೇ ಪ್ರಶ್ನೆ ರಮ್ಯಾಗೆ ಮಾಧ್ಯಮದವರಿಂದ ಎದುರಾಯ್ತು. ಚಿತ್ರದಲ್ಲಿ ಧನಂಜಯ್ ಹಾಗೂ ಅಮೃತಾ ಕೆಮಿಸ್ಟ್ರಿ ಹೇಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಸಿನಿಮಾ ನನಗೆ ಬಹಳ ಇಷ್ಟವಾಯ್ತು. ಪತಿ-ಪತ್ನಿ ಆಗಿ ಧನಂಜಯ್ ಹಾಗೂ ಅಮೃತಾ ಇಬ್ಬರ ಕೆಮಿಸ್ಟ್ರಿ ಬಹಳ ಚೆನ್ನಾಗಿದೆ. ಇಬ್ಬರ ಆಕ್ಟಿಂಗ್ಗೂ 10ಕ್ಕೆ 10 ಮಾರ್ಕ್ಸ್ ನೀಡುತ್ತೇನೆ. ಇಬ್ಬರ ಆಫ್ಸ್ಕ್ರೀನ್ ಕೆಮಿಸ್ಟ್ರಿ ಕೂಡಾ ಚೆನ್ನಾಗಿದೆ ಎಂದು ಹೇಳಿದ್ದಾರೆ. ಈ ಮಾತುಗಳನ್ನು ಕೇಳಿದರೆ ಇಬ್ಬರೂ ಲವ್ನಲ್ಲಿರೋದು ಪಕ್ಕಾ ಎನ್ನಲಾಗುತ್ತಿದೆ.
ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕಿಚ್ಚ ಹೇಳಿದ್ದೇನು?
ಕೆಲವು ದಿನಗಳ ಹಿಂದೆ ನಡೆದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಸುದೀಪ್ ಕೂಡಾ ಆಗಮಿಸಿದ್ದರು. ಈ ವೇಳೆ ಸುದೀಪ್ ಅಮೃತಾ, ಧನಂಜಯ್ ಇಬ್ಬರ ಕಾಲೆಳೆದರು. "ಅಮೃತಾ ವೇದಿಕೆ ಮೇಲೆ ಬಂದು ಸಿನಿಮಾ ಬಗ್ಗೆ ಹೆಚ್ಚು ಮಾತನಾಡದೆ, ಧನಂಜಯ್ ಬಗ್ಗೆ ಮಾತನಾಡಿದ್ರಿ. ಪಾತ್ರವನ್ನು ಹೊಗಳುತ್ತಿದ್ರೋ, ವೈಯಕ್ತಿಕವಾಗಿ ಹೊಗಳುತ್ತಿದ್ರೋ ಗೊತ್ತಿಲ್ಲ. ಆದ್ರೆ ನೀವು ಮಾತ್ರ ತುಂಬ ಖುಷಿಯಲ್ಲಿದ್ರಿ. ಆದರೆ ನೀವು ಇಷ್ಟೆಲ್ಲಾ ಹೇಳಿದರೂ ನಿಮ್ಮ ಬಗ್ಗೆ ಧನಂಜಯ್ ಏನೂ ಹೇಳಲಿಲ್ಲ. ನನಗಿದು ಕೊಂಚ ಬೇಸರ ಅನಿಸಿತು. ಈ ವೇದಿಕೆ ಮೇಲೆ ಧನಂಜಯ್ ಚೆನ್ನಾಗಿ ಕಾಣ್ತಿದ್ದಾರೆ, ಲುಕ್ ಚೆನ್ನಾಗಿದೆ. ಎಂದು ಅಮೃತಾ ನಾಲ್ಕು ಸಲ ಮೆನ್ಷನ್ ಮಾಡಿದ್ರು. ಆದ್ರೆ, ಧನಂಜಯ್ ಮಾತ್ರ ಹೆಚ್ಚೆನೂ ಹೊಗಳಲಿಲ್ಲ" ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಧನಂಜಯ್, "ನಾನು ಮತ್ತು ಅಮೃತಾ ಒಟ್ಟಿಗೆ ಮೂರು ಸಿನಿಮಾಗಳಲ್ಲಿ ನಟಿಸಿದ್ದೇವೆ. ಅದ್ಬುತವಾಗಿ ಅಭಿನಯಿಸಿದ್ದಾರೆ ಎನ್ನುತ್ತಿದ್ದಂತೆ, ಮತ್ತೆ ಮಧ್ಯೆ ಪ್ರವೇಶಿಸಿದ ಸುದೀಪ್, "ನೀವೇಕೆ ಬರೀ ಧನಂಜಯ್ ಅವರೊಂದಿಗೆ ನಟಿಸ್ತೀರಾ? ಎಂದು ಅಮೃತಾಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ, ಸರ್.. ಅದನ್ನು ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಕೇಳಿ" ಎಂದರು ಧನಂಜಯ್. ಹೀಗೆ ಸುದೀಪ್ ಹಾಗೂ ಧನಂಜಯ್ ಮಾತುಗಳು ಅಲ್ಲಿ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.