ನನಗೆ ಶೋಭಿತಾ ಜೊತೆ ಎರಡು ಮಕ್ಕಳು ಬೇಕು ಎಂದ ನಾಗ ಚೈತನ್ಯ; ರಾಣಾ ದಗ್ಗುಬಾಟಿ ಟಾಕ್ ಶೋ ಟೀಸರ್ ವೈರಲ್
ಕನ್ನಡ ಸುದ್ದಿ  /  ಮನರಂಜನೆ  /  ನನಗೆ ಶೋಭಿತಾ ಜೊತೆ ಎರಡು ಮಕ್ಕಳು ಬೇಕು ಎಂದ ನಾಗ ಚೈತನ್ಯ; ರಾಣಾ ದಗ್ಗುಬಾಟಿ ಟಾಕ್ ಶೋ ಟೀಸರ್ ವೈರಲ್

ನನಗೆ ಶೋಭಿತಾ ಜೊತೆ ಎರಡು ಮಕ್ಕಳು ಬೇಕು ಎಂದ ನಾಗ ಚೈತನ್ಯ; ರಾಣಾ ದಗ್ಗುಬಾಟಿ ಟಾಕ್ ಶೋ ಟೀಸರ್ ವೈರಲ್

ನಾಗ ಚೈತನ್ಯ ಮದುವೆಯಾಗಿ ಕೆಲವೇ ದಿನ ಕಳೆದಿದೆ. ಹೀಗಿರುವಾಗಲೇ ಅವರ ಫ್ಯಾಮಿಲಿ ಪ್ಲ್ಯಾಂನಿಂಗ್ ಬಗ್ಗೆ ಮಾತು ವೈರಲ್ ಆಗಿದೆ. ನಾನು ಇಬ್ಬರು ಮಕ್ಕಳ ತಂದೆಯಾಗಬೇಕು ಎಂದು ರಾಣಾ ದಗ್ಗುಬಾಟಿ ಟಾಕ್ ಶೋನಲ್ಲಿ ನಾಗ ಚೈತನ್ಯ ಹೇಳಿದ್ದಾರೆ. ಇನ್ನೂ ಸಾಕಷ್ಟು ವಿಚಾರವನ್ನು ಹಂಚಿಕೊಂಡಿದ್ದಾರೆ.

ಎರಡು ಮಕ್ಕಳು ಬೇಕು ಎಂದ ನಾಗ ಚೈತನ್ಯ
ಎರಡು ಮಕ್ಕಳು ಬೇಕು ಎಂದ ನಾಗ ಚೈತನ್ಯ

ಪ್ರೈಮ್ ವಿಡಿಯೋದ ರಾಣಾ ದಗ್ಗುಬಾಟಿ ಶೋನ ಮುಂಬರುವ ಸಂಚಿಕೆಯಲ್ಲಿ ನಟ ನಾಗ ಚೈತನ್ಯ ಅತಿಥಿಯಾಗಿ ಬರಲಿದ್ದಾರೆ. ಅವರ ಸೋದರಸಂಬಂಧಿ-ನಟ ರಾಣಾ ದಗ್ಗುಬಾಟಿ ನಾಗ ಚೈತನ್ಯ ಅವರ ಮದುವೆಯಲ್ಲಿಯೂ ಕಾಣಿಸಿಕೊಂಡಿದ್ದರು. ಮುಂದಿನ ದಿನಗಳಲ್ಲಿ ನಾಗ ಚೈತನ್ಯ ಅವರೊಟ್ಟಿಗೆ ಮಾಡಿದ ಸಂದರ್ಶನ ಎಲ್ಲರ ವೀಕ್ಷಣೆಗೆ ಲಭ್ಯವಾಗಲಿದೆ. ಇದರಲ್ಲಿ ನಾಗ ಚೈತನ್ಯ ಅವರಿಗೆ ಕೇಳಿದ ಪ್ರಶ್ನೆಗೆ ಏನೆಲ್ಲ ಉತ್ತರ ನೀಡಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿ ಇದೆ. ವೈವಾಹಿಕ ಜೀವನ ಮತ್ತು ಮಕ್ಕಳನ್ನು ನಾನು ಪಡೆಯಲು ಇಷ್ಟಪಡುತ್ತೇನೆ ಎಂದು ನಾಗ ಚೈತನ್ಯ ಅವರು ಹೇಳಿದ್ದಾರೆ ಎಂಬ ಸುದ್ದಿ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

'ವೈಲ್ಡೆಸ್ಟ್‌ ಡ್ರೀಮ್' ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಮೀರ್ ಖಾನ್ ಮತ್ತು ಸಾಯಿ ಪಲ್ಲವಿ ಅವರೊಂದಿಗೆ ಕೆಲಸ ಮಾಡುವ ಬಗ್ಗೆ ಕೂಡ ಮಾಹಿತಿ ಹಂಚಿಕೊಂಡಿದ್ದಾರೆ. ನಟಿ ಶೋಭಿತಾ ಧುಲಿಪಾಲ ಅವರೊಟ್ಟಿಗೆ ಮದುವೆ ಆದ ಕೆಲವೇ ದಿನಗಳಲ್ಲಿ ಅವರ ಈ ಸಂದರ್ಶನ ವೀಕ್ಷಣೆಗೆ ಲಭ್ಯವಾಗಲಿದೆ.

ಈ ಬಗ್ಗೆ ಮಾಹಿತಿ ಸಿಕ್ಕಿದ್ದು ಹೇಗೆ ಎಂದರೆ ರಾಣಾ ದಗ್ಗುಬಾಟಿ ತಮ್ಮ ಮುಂಬರುವ ಸಂಚಿಕೆಯಿಂದ ಹೊಸ ಟೀಸರ್ ಅನ್ನು ತಮ್ಮ Instagram ಫೀಡ್‌ನಲ್ಲಿ ಹಂಚಿಕೊಂಡಿದ್ದಾರೆ. ಮದುವೆ ಹಾಗೂ ಫ್ಯಾಮಿಲಿ ಪ್ಲ್ಯಾನಿಂಗ್ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಆ ರೀತಿ ಪ್ರಶ್ನೆ ಮಾಡಿದಾಗ ನನಗೆ 50 ವರ್ಷ ವಯಸ್ಸಾದಾಗ ನಾನು ಒಂದೆರಡು ಮಕ್ಕಳೊಂದಿಗೆ ಸಂತೋಷದಿಂದ ಇರಲು ಬಯಸುತ್ತೇನೆ ಎಂದು ಹೇಳಿದ್ದಾರೆ. ವೆಂಕಿ ಮಾಮನಂತೆ 4 ಜನ ಮಕ್ಕಳು ಬೇಕಾ? ಅಥವಾ 2 ಸಾಕಾ ಎಂದು ಅವರು ಮತ್ತೆ ಪ್ರಶ್ನೆ ಮಾಡುತ್ತಾರೆ. ಆಗ ಇಲ್ಲ ನನಗೆ 2 ಮಕ್ಕಳು ಸಾಕು ಎಂದು ಹೇಳುತ್ತಾರೆ.

ಬಹುಶಃ ನಾನು ನನ್ನ ಮಗನನ್ನು ರೇಸ್ ಟ್ರ್ಯಾಕ್‌ಗೆ ಕರೆದೊಯ್ಯುತ್ತೇನೆ. ನನಗೆ ಮಗಳಿದ್ದರೆ ಅವಳಿಗೆ ಯಾವುದೇ ಹವ್ಯಾಸಗಳಿದ್ದರೂ ನಾನು ಅದಕ್ಕೆ ಉತ್ತೇಜನ ನೀಡುತ್ತೇನೆ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಹೀಗೆ ಸಾಕ

Whats_app_banner