ಕನ್ನಡ ಸುದ್ದಿ  /  ಮನರಂಜನೆ  /  Ranbir Statement On Urfi: ಉರ್ಫಿ ಫ್ಯಾಷನ್‌ ಅಭಿರುಚಿಗೆ ʼಬ್ಯಾಡ್‌ ಟೇಸ್ಟ್‌ʼ ಎಂದ ರಣಬೀರ್‌ ಕಪೂರ್‌!

Ranbir statement on Urfi: ಉರ್ಫಿ ಫ್ಯಾಷನ್‌ ಅಭಿರುಚಿಗೆ ʼಬ್ಯಾಡ್‌ ಟೇಸ್ಟ್‌ʼ ಎಂದ ರಣಬೀರ್‌ ಕಪೂರ್‌!

ಉರ್ಫಿ ಫ್ಯಾಷನ್‌ ಸೆನ್ಸ್‌ ಬಗ್ಗೆ ಮಾತನಾಡಿದ ರಣಬೀರ್‌ ʼಬ್ಯಾಡ್‌ ಟೇಸ್ಟ್‌ʼ ಎಂದು ಉಲ್ಲೇಖಿಸಿದ್ದಾರೆ. ಇತ್ತೀಚಿನ ಕರೀನಾ ಕಪೂರ್‌ ಷೋನಲ್ಲಿ ಈ ಬಗ್ಗೆ ಮಾತನಾಡಿದ್ದರು ಈ ನಟ.

ಉರ್ಫಿ ಫ್ಯಾಷನ್‌ ಅಭಿರುಚಿಗೆ ʼಬ್ಯಾಡ್‌ ಟೇಸ್ಟ್‌ʼ ಎಂದ ರಣಬೀರ್
ಉರ್ಫಿ ಫ್ಯಾಷನ್‌ ಅಭಿರುಚಿಗೆ ʼಬ್ಯಾಡ್‌ ಟೇಸ್ಟ್‌ʼ ಎಂದ ರಣಬೀರ್

ಉರ್ಫಿ ಜಾವೇದ್‌, ತನ್ನ ಚಿತ್ರ ವಿಚಿತ್ರ ಉಡುಪುಗಳಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಸುಂದರಿ. ತೀರಾ ಕನಿಷ್ಠ ಬಟ್ಟೆ ಧರಿಸುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುವ ಈಕೆಯ ಬಗ್ಗೆ ರಣಬೀರ್‌ ಕಪೂರ್‌ ಮಾತನಾಡಿದ್ದಾರೆ.

ಉರ್ಫಿ ಫ್ಯಾಷನ್‌ ಸೆನ್ಸ್‌ ಬಗ್ಗೆ ಮಾತನಾಡಿದ ರಣಬೀರ್‌ ʼಬ್ಯಾಡ್‌ ಟೇಸ್ಟ್‌ʼ ಎಂದು ಉಲ್ಲೇಖಿಸಿದ್ದಾರೆ. ಇತ್ತೀಚಿನ ಕರೀನಾ ಕಪೂರ್‌ ಷೋನಲ್ಲಿ ಈ ಬಗ್ಗೆ ಮಾತನಾಡಿದ್ದರು ಈ ನಟ.

ಬಾಲಿವುಡ್‌ ಬೆಬೊ ಕರೀನಾ ಕಪೂರ್‌ ಅವರ ʼವಾಟ್‌ ವುಮೆನ್‌ ವಾಂಟ್‌ ವೇರ್‌ʼ ಕಾರ್ಯಕ್ರಮದಲ್ಲಿ ರಣಬೀರ್‌ ಇತ್ತೀಚೆಗೆ ಅತಿಥಿಯಾಗಿ ಬಂದಿದ್ದರು. ಈ ಕಾರ್ಯಕ್ರಮದ ನಾಲ್ಕನೇ ಸೀಸನ್‌ ಇತ್ತೀಗಷ್ಟೇ ಆರಂಭವಾಗಿತ್ತು. ತಮ್ಮ ʼತು ಜೂಟಿ ಮೇ ಮಕ್ಕರ್‌ʼ ಸಿನಿಮಾ ಪ್ರಮೋಷನ್‌ಗಾಗಿ ರಣಬೀರ್‌ ಈ ಕಾರ್ಯಕ್ರಮಕ್ಕೆ ಬಂದಿದ್ದರು.

ಟ್ರೆಂಡಿಂಗ್​ ಸುದ್ದಿ

ಕಾರ್ಯಕ್ರಮದ ಸೆಗ್ಮೆಂಟ್‌ ಒಂದರಲ್ಲಿ ಕರೀನಾ ಭಿನ್ನವಾಗಿ ಡ್ರೆಸ್‌ ಮಾಡಿಕೊಂಡಿದ್ದ ಕೆಲವು ನಟಿಯರ ಫೋಟೊಗಳನ್ನು ರಣಬೀರ್‌ ಅವರಿಗೆ ತೋರಿಸಿದ್ದರು. ಅಲ್ಲದೆ ಅವರಲ್ಲಿ ಡ್ರೆಸ್‌ ಕುರಿತು ಅಭಿಪ್ರಾಯ ಕೇಳಿದ್ದರು. ಪ್ಲಾಕಾರ್ಡ್‌ನಲ್ಲಿ ನಟಿಯರ ಮುಖವನ್ನು ತೋರಿಸಿರಲಿಲ್ಲ. ಆದರೆ ನಟಿಯರ ಫ್ಯಾಷನ್‌ ಸೆನ್ಸ್‌ ಮೂಲಕ ರಣಬೀರ್‌ ಅವರು ಯಾರು ಎಂಬುದನ್ನು ಕಂಡು ಹಿಡಿದು, ಅವರಿಗೆ ಗುಡ್‌ ಅಥವಾ ಬ್ಯಾಡ್‌ ಟೇಸ್ಟ್‌ ಯಾವುದಿದೆ ಎಂದು ಹೇಳುವ ಟಾಸ್ಕ್‌ ನೀಡಿದ್ದರು ಕರೀನಾ.

ಇದೇ ವೇಳೆ ಕರೀನಾ ರಣಬೀರ್‌ ಮುಂದೆ ಉರ್ಫಿ ಜಾವೇದ್‌ ಫೋಟೊ ಇರುವ ಪ್ಲಾಕಾರ್ಡ್‌ ಹಿಡಿದಿದ್ದರು. ಅಲ್ಲದೆ ರಣಬೀರ್‌ ಬಳಿ ʼಬಹುಶಃ ಇವರು ಯಾರು ಎಂಬುದು ನಿಮಗೆ ತಿಳಿದಿರಬೇಕುʼ ಎಂದಿದ್ದರು. ಅದಕ್ಕೆ ʼಇದು ಉರ್ಫಿʼ ಎಂದು ಸರಿಯಾಗಿ ಗೆಸ್‌ ಮಾಡಿದ್ದರು ರಣಬೀರ್‌. ಈ ವೇಳೆ ಉರ್ಫಿ ಬಗ್ಗೆ ಮಾತನಾಡಿರುವ ರಣಬೀರ್‌ ʼನಾನು ಉರ್ಫಿಯ ಫ್ಯಾಷನ್‌ಗೆ ದೊಡ್ಡ ಅಭಿಮಾನಿಯೇನಲ್ಲ. ಆದರೆ ನಮ್ಮ ದೇಹಕ್ಕೆ ಯಾವ ದಿರಿಸು ಸೂಕ್ತ ಎನ್ನಿಸುತ್ತದೋ ಅದನ್ನು ಧರಿಸುವುದು ಒಳ್ಳೆಯದು, ಯಾಕೆಂದರೆ ನಾವು ಅಂತಹ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆʼ ಎನ್ನುತ್ತಿದ್ದಂತೆ ಅವರ ಮಾತನ್ನು ಅರ್ಧಕ್ಕೆ ತುಂಡರಿಸಿದ ಕರೀನಾ, ʼಇದು ಗುಡ್‌ ಅಥವಾ ಬ್ಯಾಡ್‌ ಟೇಸ್‌ ರಣಬೀರ್‌?ʼ ಎಂದು ಕೇಳಿದ್ದರು. ಅದಕ್ಕೆ ನೇರವಾಗಿ ರಣಬೀರ್‌ ʼಬ್ಯಾಡ್‌ ಟೇಸ್ಟ್‌ʼ ಎಂದು ಉತ್ತರಿಸಿದ್ದರು.

ಇದೇ ಷೋನಲ್ಲಿ ರಣಬೀರ್‌ ಅವರಿಗೆ ಪ್ರಿಯಾಂಕ ಚೋಪ್ರಾ ಅವರ ಫೋಟೊ ಕೂಡ ತೋರಿಸಿದ್ದರು ಕರೀನಾ. ಪ್ರಿಯಾಂಕ ಗೌನ್‌ ಧರಿಸಿದ್ದ ಫೋಟೊ ಅದಾಗಿತ್ತು. ಪಿಗ್ಗಿ ಬಗ್ಗೆ ಮಾತನಾಡಿದ್ದ ರಣಬೀರ್‌ ʼಪೀಚಿ ಅದ್ಭುತ, ಅವಳ ಅಭಿರುಚಿ ಚೆನ್ನಾಗಿದೆ. ಅವಳ ಡ್ರೆಸ್ಸಿಂಗ್‌ ಸೆನ್ಸ್‌ ಕೂಡ ಚೆನ್ನಾಗಿದೆ. ಅವಳಲ್ಲಿ ಆತ್ಮವಿಶ್ವಾಸವಿದೆ. ಸ್ವ ಆತ್ಮವಿಶ್ವಾಸವಿದ್ದರೆ ನಾವು ಏನನ್ನು ಬೇಕಾದರೂ ಸಾಧಿಸಬಹುದುʼ ಎಂದಿದ್ದಾರೆ ರಣಬೀರ್‌.

ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್‌ ಇರುವ ಉರ್ಫಿ, ರಣಬೀರ್‌ ಈ ಹೇಳಿಕೆಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳನ್ನೂ ಓದಿ

ʼಪದೇ ಪದೇ ಹೀಗೆ ಮಾಡಿದ್ರೆ ಸಿನಿಮಾ ಮಾಡುವುದನ್ನೇ ನಿಲ್ಲಿಸುತ್ತೇನೆʼ ಅಭಿಮಾನಿಗಳಿಗೆ ಖಡಕ್‌ ವಾರ್ನಿಂಗ್‌ ನೀಡಿದ್ದೇಕೆ ಎನ್‌ಟಿಆರ್‌

ʼನೀವು ಇದನ್ನೇ ಪದೇ ಪದೇ ಕೇಳುತ್ತಿದ್ದರೆ, ನಾನು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದನ್ನೇ ನಿಲ್ಲಿಸುತ್ತೇನೆʼ ಎಂದು ಅಭಿಮಾನಿಗಳ ಮೇಲೆ ಕೋಪ ತೋರಿಸಿದ್ದಾರೆ ಟಾಲಿವುಡ್‌ನ ಯಂಗ್‌ ಟೈಗರ್‌, ಗ್ಲೋಬಲ್‌ ಸ್ಟಾರ್‌ ಖ್ಯಾತಿಯ ಜೂನಿಯರ್‌ ಎನ್‌ಟಿಆರ್‌.

ಮೊದಲ ದಿನ ‘ಕಬ್ಜ’ ಬೊಕ್ಕಸಕ್ಕೆ ಹರಿದು ಬಂತು 55 ಕೋಟಿ ರೂಪಾಯಿ.. ಯಾವ ಭಾಷೆಯಲ್ಲಿ ಎಷ್ಟೆಷ್ಟು?

ಕೆಜಿಎಫ್, ಕಾಂತಾರ ಚಿತ್ರಗಳ ನಂತರ ದೇಶದಾದ್ಯಂತ ಕಬ್ಜ ಕನ್ನಡದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಹಾರಿಸಿದೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾದ ಈ ಸಿನಿಮಾ ಮೊದಲ ದಿನವೇ ಎಲ್ಲ ಭಾಷೆಗಳಲ್ಲಿ ಪಾರಮ್ಯ ಮೆರೆದಿದೆ. ಕೇವಲ ರಾಜ್ಯ, ರಾಷ್ಟ್ರದಲ್ಲಿ ಮಾತ್ರವಲ್ಲ ವಿದೇಶದಲ್ಲಿ ಕಬ್ಜ ಸಿನಿಮಾ ಕಮಾಲ್‌ ಮಾಡಿದೆ.