ಕನ್ನಡ ಸುದ್ದಿ  /  Entertainment  /  Ranveer Singh Summoned By Mumbai Police Over Nude Photoshoot

Ranveer Singh: ಬೆತ್ತಲಾಗಿದ್ದಕ್ಕೆ ರಣವೀರ್‌ ಸಿಂಗ್‌ಗೆ ಈ ಗತಿ ಬಂತು!; ಮುಂಬೈ ಪೊಲೀಸರಿಂದ ನಟನಿಗೆ ಬುಲಾವ್‌

ರಣವೀರ್‌ ಸಿಂಗ್‌ ಇತ್ತೀಚೆಗಷ್ಟೇ ಮೊದಲ ಸಲ ಪೂರ್ತಿ ಬೆತ್ತಲಾಗಿ ಕ್ಯಾಮರಾಕ್ಕೆ ಪೋಸ್‌ ಕೊಟ್ಟು ಸುದ್ದಿಯಲ್ಲಿದ್ದರು. ಹಾಗೇ ಕೊಟ್ಟ ಪೋಸ್‌ ಇದೀಗ ಪೊಲೀಸ್‌ ಠಾಣೆ ಮೆಟ್ಟಿಲೇರುವಂತೆ ಮಾಡಿದೆ.

ಬೆತ್ತಲಾಗಿದ್ದಕ್ಕೆ ರಣವೀರ್‌ ವಿರುದ್ಧ ಎಫ್‌ಐಆರ್‌; ವಿಚಾರಣೆಗೆ ಹಾಜರಾಗುವಂತೆ ನೋಟೀಸ್..‌
ಬೆತ್ತಲಾಗಿದ್ದಕ್ಕೆ ರಣವೀರ್‌ ವಿರುದ್ಧ ಎಫ್‌ಐಆರ್‌; ವಿಚಾರಣೆಗೆ ಹಾಜರಾಗುವಂತೆ ನೋಟೀಸ್..‌

ಮುಂಬೈ: ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ವಿಚಿತ್ರ ಮ್ಯಾನರಿಸಂನಿಂದಲೇ ಗುರುತಿಸಿಕೊಂಡಿರುವ ನಟ ರಣವೀರ್‌ ಸಿಂಗ್, ಚಿತ್ರ ವಿಚಿತ್ರ ಬಟ್ಟೆ ಧರಿಸಿ ಫ್ಯಾಷನ್‌ ಎಂದಿದ್ದರು. ಫ್ಯಾಷನ್‌ ವಿಚಾರದಲ್ಲಿ ಬಾಲಿವುಡ್‌ನಲ್ಲಿ ಯಾರೂ ಮಾಡದ ಒಂದಷ್ಟು ಪ್ರಯೋಗಗಳನ್ನೂ ರಣವೀರ್‌ ಮಾಡಿದ್ದರು. ಹೀಗಿರುವಾಗಲೇ ಇದೇ ನಟ ಇತ್ತೀಚೆಗಷ್ಟೇ ಮೊದಲ ಸಲ ಪೂರ್ತಿ ಬೆತ್ತಲಾಗಿ ಕ್ಯಾಮರಾಕ್ಕೆ ಪೋಸ್‌ ಕೊಟ್ಟು ಸುದ್ದಿಯಲ್ಲಿದ್ದರು. ಹಾಗೇ ಕೊಟ್ಟ ಪೋಸ್‌ ಇದೀಗ ಪೊಲೀಸ್‌ ಠಾಣೆ ಮೆಟ್ಟಿಲೇರುವಂತೆ ಮಾಡಿದೆ.

ಇತ್ತೀಚೆಗೆ ಪೇಪರ್‌ ಮ್ಯಾಗಜೀನ್‌ವೊಂದಕ್ಕೆ ಬೆತ್ತಲಾಗಿ ಪೋಸ್‌ ಕೊಟ್ಟ ರಣವೀರ್‌ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ಬಗೆಬಗೆ ಕಮೆಂಟ್‌ಗಳು ಸಂದಾಯವಾಗಿದ್ದವು. ಕೆಲವರು ಅಚ್ಚರಿಗೊಳಗಾದರೆ, ಇನ್ನು ಕೆಲವರು ಹಾಟ್‌ ಎಂಬ ಉದ್ಘಾರ ತೆಗೆದಿದ್ದರು. ಇನ್ನು ಕೆಲವರು ನೀನು ಏನು ಬೇಕಾದರೂ ಮಾಡಲು ಸಿದ್ಧ ಎಂದೂ ಉತ್ತರಿಸಿದ್ದರು. ಬಾಲಿವುಡ್‌ನ ಎಷ್ಟೋ ಮಂದಿ ನಟಿಯರೂ ರಣವೀರ್‌ ಬೆನ್ನಿಗೆ ನಿಂತಿದ್ದರು. ರಣವೀರ್‌ ಅವತಾರ ಕಂಡು ಹಲವರು ದೂರು ಸಹ ನೀಡಿದ್ದರು.

ವಿಚಾರಣೆಗೆ ಹಾಜರಾಗುವಂತೆ ನೋಟೀಸ್

ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಸಾಮಾಜಿಕ ಮಾಧ್ಯಮದಲ್ಲಿ ನಗ್ನ ಚಿತ್ರಗಳನ್ನು ಹಂಚಿಕೊಂಡ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಚೆಂಬೂರ್ ಠಾಣೆಯ ಪೊಲೀಸರು ಶುಕ್ರವಾರ ರಣವೀರ್‌ ಸಿಂಗ್ ನಿವಾಸಕ್ಕೆ ಭೇಟಿ ನೀಡಿ ಆಗಸ್ಟ್‌ 22ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಕಳೆದ ತಿಂಗಳು ಎನ್‌ಜಿಒ ಸಂಸ್ಥೆಯೊಂದು ನಟನ ಬೆತ್ತಲೆ ಫೋಟೋಶೂಟ್‌ದಿಂದ ಮಹಿಳೆಯರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರು ನೀಡಿತ್ತು. ಆ ದೂರು ಆಧರಿಸಿ ಎಫ್‌ಐಆರ್‌ ದಾಖಲಾಗಿದೆ. ಐಪಿಸಿ ಸೆಕ್ಷನ್‌ 292 (ಅಶ್ಲೀಲ ಪುಸ್ತಕಗಳ ಮಾರಾಟ, ಇತ್ಯಾದಿ), 293 (ಯುವಕರಿಗೆ ಅಶ್ಲೀಲ ವಸ್ತುಗಳ ಮಾರಾಟ), 509 (ಪದ, ಸನ್ನೆ ಅಥವಾ ನಡತೆಯನ್ನು ಅವಮಾನಿಸುವ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಾನು ಸಾವಿರ ಜನರ ಮುಂದೆ ಬೆತ್ತಲಾಗಬಲ್ಲೆ...

"ಬೆತ್ತಲೆ ದೇಹದ ಬಗ್ಗೆ ಅಷ್ಟೇ ಓಪನ್‌ ಆಗಿಯೇ ಹೇಳಿಕೊಳ್ಳುವ ರಣವೀರ್‌ ಸಿಂಗ್, "ದೈಹಿಕವಾಗಿ ಬೆತ್ತಲಾಗುವುದು ನನಗೆ ತುಂಬ ಸರಳ. ಕೆಲವು ಪ್ರದರ್ಶನಗಳಲ್ಲಿ ನಾನು ಬೆತ್ತಲಾಗಿಯೇ ಇರುತ್ತೇನೆ. ನನ್ನೊಳಗಿನ ಆತ್ಮವೂ ಬೆತ್ತಲೆ. ಅಷ್ಟೇ ಅಲ್ಲ ನಾನು ಸಾವಿರ ಸಾವಿರ ಜನರ ಮುಂದೆ ಬೆತ್ತಲೆಯಾಗಿ ನಿಲ್ಲಬಲ್ಲೆ. ನನಗೆ ಅದು ಮುಜುಗರ ತರುವುದಿಲ್ಲ. ಎದುರಿಗಿದ್ದವರಿಗೆ ಅನಿಸಬಹುದಷ್ಟೇ" ಎಂದು ರಣವೀರ್‌ ಹೇಳಿಕೊಂಡಿದ್ದರು.

ನೀವು ನನ್ನದೇ ಆಟದಲ್ಲಿ ನನ್ನನ್ನೇ ಸೋಲಿಸಿದ್ದೀರಿ...

ಪೂನಂ ಪಾಂಡೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಅರೆಬೆತ್ತಲೆ ಫೋಟೋಗಳನ್ನು ಹಾಕುವುದರಲ್ಲಿ ಸದಾ ಮುಂದು. ಆ ಮೂಲಕವೇ ಸದಾ ಸುದ್ದಿಯಲ್ಲಿಯೂ ಇರುತ್ತಾರವರು. ರಣವೀರ್‌ ಸಿಂಗ್‌ ಬೆತ್ತಲೆ ಫೋಟೋ ಹಂಚಿಕೊಳ್ಳುತ್ತಿದ್ದಂತೆ, ತಮ್ಮದೆ ಧಾಟಿಯಲ್ಲಿ ಕಮೆಂಟ್‌ ಮಾಡಿದ್ದರು ಪೂನಂ. "ನೀವು ನನ್ನದೇ ಆಟದಲ್ಲಿ ನನ್ನನ್ನೇ ಸೋಲಿಸಿದ್ದೀರಿ..." ಎಂದು ಬರೆದುಕೊಂಡಿದ್ದಾರೆ. ಪೂನಂ ಅವರ ಈ ಕಮೆಂಟ್‌ಗೆ ಕೆಲವರು ಪ್ರತಿಕ್ರಿಯೆ ನೀಡಿದ್ದು, 'ನೀವಿಬ್ಬರೂ ಪರ್ಫೆಕ್ಟ್.. ಸೂಪರ್ ಸೆಟ್ ಆಗ್ತೀರ..' ಎಂದಿದ್ದರು.

ರಣವೀರ್​​​​​ಗೆ ಬಟ್ಟೆ ತೊಡಿಸಿದ ಖ್ಯಾತ ಫ್ಯಾಷನ್​ ಬ್ರಾಂಡ್​​​​​​...

ಖ್ಯಾತ ಫ್ಯಾಷನ್ ಬ್ರಾಂಡ್​​​​ವೊಂದು ರಣ್ವೀರ್​ ಫೋಟೋಗೆ ಬಟ್ಟೆ ತೊಡಿಸಿರುವಂತೆ ಫೋಟೋ ಎಡಿಟ್ ಮಾಡಿತ್ತು. ಖ್ಯಾತ ಫ್ಯಾಷನ್ ಬ್ರಾಂಡ್ ಮಿಂತ್ರ ರಣವೀರ್ ನ್ಯೂಡ್ ಫೋಟೋವನ್ನು ಎಡಿಟ್ ಮಾಡಿ ತನ್ನ ಬ್ರಾಂಡ್​​ನ ಬಟ್ಟೆಗಳನ್ನು ಧರಿಸಿರುವಂತೆ ಫೋಟೋವನ್ನು ಬದಲಿಸಿತ್ತು. ಅಲ್ಲದೆ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿತ್ತು. ಆ ಪೋಟೋ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮಿಂತ್ರ ಕಂಪನಿ ಬೆಡ್​​​ಶೀಟ್ ಪ್ರಿಂಟೆಡ್ ಷರ್ಟ್ ಹಾಗೂ ಕೆಂಪು ಬಣ್ಣದ ಯೋಗ ಪ್ಯಾಂಟನ್ನು ರಣವೀರ್​​​ಗೆ ತೊಡಿಸಿತ್ತು. ಅಲ್ಲದೆ 'Fixed and how' ಎಂಬ ಕ್ಯಾಪ್ಷನ್ ನೀಡಿ ಐ ವಿಂಕಿಂಗ್ ಎಮೋಜಿಯೊಂದಿಗೆ ಪೋಸ್ಟ್ ಮಾಡಿತ್ತು.

ಹಲವು ಸಿನಿಮಾಗಳಲ್ಲಿ ಬಿಜಿ

ಸದ್ಯ ಕರಣ್‌ ಜೋಹರ್‌ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ "ರಾಖಿ ಔರ್‌ ರಾಣಿ ಕೀ ಪ್ರೇಮ್‌ ಕಥಾ" ಮತ್ತು "ಸರ್ಕಸ್"‌ ಚಿತ್ರಗಳಲ್ಲಿ ರಣವೀರ್‌ ನಟಿಸುತ್ತಿದ್ದಾರೆ. ಈ ಸಿನಿಮಾ ಹೊರತುಪಡಿಸಿದರೆ, ಸೌತ್‌ ನಿರ್ದೇಶಕ ಶಂಕರ್‌ ಚಿತ್ರದ ಘೋಷಣೆಯೂ ಆಗಿದ್ದು, ಇನ್ನಷ್ಟೇ ಆ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ಸಿಗಬೇಕಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ