ಕನ್ನಡ ಸುದ್ದಿ  /  Entertainment  /  Rashmika Mandanna Challenge To Fans

Rashmika Challenge to Fans: ರಶ್ಮಿಕಾ ಕೊಟ್ಟಿರೋ ಚಾಲೆಂಜ್‌ ಸ್ವೀಕರಿಸಲು ನೀವು ರೆಡಿನಾ..ಏನದು ಚಾಲೆಂಜ್‌ ನೋಡಿ

ರಶ್ಮಿಕಾ ಪೋಸ್ಟ್‌ಗೆ ಅನೇಕರು ಲೈಕ್ಸ್‌ ಕಮೆಂಟ್‌ ಮಾಡಿದ್ದಾರೆ. ಬಾಲಿವುಡ್‌ ನಿರ್ಮಾಪಕಿ ಏಕ್ತಾ ಕಪೂರ್‌ ಹಾರ್ಟ್‌ ಎಮೋಜಿಯೊಂದಿಗೆ ಕಮೆಂಟ್‌ ಮಾಡಿದ್ದಾರೆ. ನಟ ಆನಂದ್‌ ಈ ಪೋಸ್ಟ್‌ಗೆ ಆಸಮ್‌ ಎಂದರೆ ತಮನ್ನಾ ಟೂ ಕ್ಯೂಟ್‌ ಎಂದಿದ್ದಾರೆ. ಕೆಲವರು ಕಮೆಂಟ್‌ ಸೆಕ್ಷನ್‌ನಲ್ಲಿ ತಮ್ಮ ಫ್ಯಾಮಿಲಿ ಫೋಟೋವನ್ನು ಪೋಸ್ಟ್‌ ಮಾಡಿದ್ದಾರೆ.

ರಿಯಲ್‌ ಫ್ಯಾಮಿಲಿ ಜೊತೆ ರಶ್ಮಿಕಾ ಮಂದಣ್ಣ
ರಿಯಲ್‌ ಫ್ಯಾಮಿಲಿ ಜೊತೆ ರಶ್ಮಿಕಾ ಮಂದಣ್ಣ (PC: Rashmika Mandanna Social media)

ರಶ್ಮಿಕಾ ಮಂದಣ್ಣ ಅಭಿನಯದ 'ಗುಡ್‌ ಬೈ' ಸಿನಿಮಾ ಬಿಡುಗಡೆಗೆ ಇನ್ನು 3 ದಿನಗಳಷ್ಟೇ ಬಾಕಿ ಇದೆ. ಸದ್ಯಕ್ಕೆ ರಶ್ಮಿಕಾ ಚಿತ್ರತಂಡದೊಂದಿಗೆ ಪ್ರಮೋಷನ್‌ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ, ಅಮಿತಾಬ್‌ ಬಚ್ಚನ್‌ ಹಾಗೂ ನೀನಾ ಗುಪ್ತಾ ಪುತ್ರಿಯಾಗಿ ನಟಿಸಿದ್ದಾರೆ. ನ್ಯಾಷನಲ್‌ ಕ್ರಷ್‌ ಮೊದಲ ಹಿಂದಿ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಈ ನಡುವೆ ರಶ್ಮಿಕಾ, ಅಭಿಮಾನಿಗಳಿಗಾಗಿ ಒಂದು ಚಾಲೆಂಜ್‌ ನೀಡಿದ್ದಾರೆ. ತಮ್ಮ ಫ್ಯಾಮಿಲಿ ಫೋಟೋವನ್ನು ಪೋಸ್ಟ್‌ ಮಾಡುವಂತೆ ಫ್ಯಾನ್ಸ್‌ಗೆ ರಿಯಲ್‌ ಫ್ಯಾಮಿಲಿ ಚಾಲೆಂಜ್‌ ಮಾಡಿದ್ದಾರೆ. ತಮ್ಮ ಕುಟುಂಬದೊಂದಿಗಿನ ಇತ್ತೀಚಿನ ಫೋಟೋವೊಂದನ್ನು ರಶ್ಮಿಕಾ ಹಂಚಿಕೊಂಡಿದ್ದು, ''ಇದು ನನ್ನ ರಿಯಲ್‌ ಕುಟುಂಬ, ಇನ್ನು ಕೆಲವೇ ದಿನಗಳಲ್ಲಿ ನನ್ನ ಗುಡ್‌ ಬೈ ಕುಟುಂಬವನ್ನು ನಿಮಗೆ ಪರಿಚಯಿಸಲು ಹೊರಟಿದ್ದೇನೆ. ನೀವೂ ನಿಮ್ಮ ರಿಯಲ್‌ ಫ್ಯಾಮಿಲಿ ಫೋಟೋವನ್ನು ಪೋಸ್ಟ್‌ ಮಾಡಿ'' ಎಂದು ರಶ್ಮಿಕಾ ಅಭಿಮಾನಿಗಳಿಗೆ ಚಾಲೆಂಜ್‌ ನೀಡಿದ್ದಾರೆ. ಜೊತೆಗೆ ಕೆಲವರ ಹೆಸರನ್ನು ಈ ಚಾಲೆಂಜ್‌ಗೆ ನಾಮಿನೇಟ್‌ ಮಾಡಿದ್ದಾರೆ.

ರಶ್ಮಿಕಾ ಪೋಸ್ಟ್‌ಗೆ ಅನೇಕರು ಲೈಕ್ಸ್‌ ಕಮೆಂಟ್‌ ಮಾಡಿದ್ದಾರೆ. ಬಾಲಿವುಡ್‌ ನಿರ್ಮಾಪಕಿ ಏಕ್ತಾ ಕಪೂರ್‌ ಹಾರ್ಟ್‌ ಎಮೋಜಿಯೊಂದಿಗೆ ಕಮೆಂಟ್‌ ಮಾಡಿದ್ದಾರೆ. ನಟ ಆನಂದ್‌ ಈ ಪೋಸ್ಟ್‌ಗೆ ಆಸಮ್‌ ಎಂದರೆ ತಮನ್ನಾ ಟೂ ಕ್ಯೂಟ್‌ ಎಂದಿದ್ದಾರೆ. ಕೆಲವರು ಕಮೆಂಟ್‌ ಸೆಕ್ಷನ್‌ನಲ್ಲಿ ತಮ್ಮ ಫ್ಯಾಮಿಲಿ ಫೋಟೋವನ್ನು ಪೋಸ್ಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ ಸದ್ಯಕ್ಕೆ ಬಾಲಿವುಡ್‌ನಲ್ಲಿ ಟಾಕ್‌ ಆಫ್‌ ದಿ ಟೌನ್‌ ಎನಿಸಿದ್ದಾರೆ.

ಅಭಿಮಾನಿ ಎದೆ ಮೇಲೆ ನಾಚುತ್ತಲೇ ಆಟೋಗ್ರಾಫ್‌ ಬರೆದ ರಶ್ಮಿಕಾ

'ಗುಡ್‌ ಬೈ' ಸಿನಿಮಾ ಪ್ರಮೋಷನ್‌ ಅಂಗವಾಗಿ ರಶ್ಮಿಕಾ ದೇಶದ ಪ್ರಮುಖ ನಗರಗಳಿಗೆ ಸುತ್ತಾಡುತ್ತಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ರಶ್ಮಿಕಾ ಅವರನ್ನು ನೋಡುತ್ತಿದ್ದಂತೆ ಅಭಿಮಾನಿಯೊಬ್ಬರು ಅವರ ಬಳಿ ಓಡಿ ಬಂದು, ನಾನು ನಿಮ್ಮ ಅಭಿಮಾನಿ ಎಂದು ಪರಿಚಯ ಮಾಡಿಕೊಂಡಿದ್ದಾರೆ. ರಶ್ಮಿಕಾ ಕೂಡಾ ನಗುತ್ತಲೇ ಪ್ರತಿಕ್ರಿಯಿಸಿದ್ದಾರೆ. ನಂತರ ರಶ್ಮಿಕಾಗೆ ಮಾರ್ಕರ್‌ ಪೆನ್‌ ನೀಡಿದ ಅಭಿಮಾನಿ ತಾವು ಧರಿಸಿದ್ದ ಬಟ್ಟೆ ಸಹಿತ ಎದೆಯ ಮೇಲೆ ಆಟೋಗ್ರಾಫ್‌ ಹಾಕುವಂತೆ ಕೇಳಿದ್ದಾರೆ. ಅಭಿಮಾನಿಯ ಪ್ರೀತಿಗೆ ಮಣಿದ ರಶ್ಮಿಕಾ ನಾಚುತ್ತಲೇ ಆಟೋಗ್ರಾಫ್‌ ಬರೆದಿದ್ದಾರೆ.

ಈ ವಿಡಿಯೋ ಈಗ ವೈರಲ್‌ ಆಗುತ್ತಿದೆ. ಇದನ್ನು ನೋಡಿ ನೆಟಿಜನ್ಸ್‌ ನಾನಾ ರೀತಿ ಕಮೆಂಟ್‌ ಮಾಡುತ್ತಿದ್ದಾರೆ. ರಶ್ಮಿಕಾ ನಿಜಕ್ಕೂ ಬಹಳ ಕ್ಯೂಟ್‌, ಆಕೆಯನ್ನು ಹತ್ತಿರದಿಂದ ನೋಡಿ, ಆಟೋಗ್ರಾಫ್‌ ಪಡೆದು ಶೇಕ್‌ ಹ್ಯಾಂಡ್‌ ಪಡೆದ ನೀನು ಲಕ್ಕಿ ಎಂದು ಅಭಿಮಾನಿಯನ್ನು ಕುರಿತು ಕೆಲವರು ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಆ ಬಟ್ಟೆಯನ್ನು ಜೋಪಾನವಾಗಿ ಕಾಪಾಡಿಕೋ ಎಂದು ಸಲಹೆ ನೀಡಿದ್ದಾರೆ.

ರಶ್ಮಿಕಾ ತೆಲುಗಿನಲ್ಲಿ ಪುಷ್ಪ 2, ತಮಿಳಿನಲ್ಲಿ ವಿಜಯ್ ಜೊತೆ ವರಿಸು, ಹಿಂದಿಯಲ್ಲಿ ರಣಬೀರ್ ಕಪೂರ್ ಜೊತೆ ಅನಿಮಲ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೊಸ ಸ್ಕ್ರಿಪ್ಟ್‌ಗಳನ್ನು ಕೂಡಾ ರಶ್ಮಿಕಾ ಕೇಳುತ್ತಿದ್ದು, ಕಥೆ, ಚಿತ್ರತಂಡ ನೋಡಿ ಓಕೆ ಹೇಳಲಿದ್ದಾರಂತೆ. ಜೊತೆಗೆ ಕಾರ್ತಿ ಜೊತೆ 'ಜಪಾನ್‌' ಎಂಬ ಚಿತ್ರ, ಹಾಗೂ ಚಿಯಾನ್‌ ವಿಕ್ರಮ್‌ ಜೊತೆ ಹೆಸರಿಡದ ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.

IPL_Entry_Point