Rashmika Mandanna: ಜಿಮ್‌ನಲ್ಲಿ ಗಾಯ ಮಾಡಿಕೊಂಡ ರಶ್ಮಿಕಾ ಮಂದಣ್ಣ; ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಚಿತ್ರೀಕರಣ ತಾತ್ಕಾಲಿಕ ಸ್ಥಗಿತ
Rashmika Mandanna: ನಟಿ ರಶ್ಮಿಕಾ ಮಂದಣ್ಣ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿರುವಾಗ ಗಾಯಗೊಂಡಿದ್ದಾರೆ. ಈ ಕಾರಣದಿಂದ ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಯಾಕೆಂದರೆ ಆ ಸಿನಿಮಾದಲ್ಲಿ ಇವರೇ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
Rashmika Mandanna injured: ಅನಿಮಲ್ ಮತ್ತು ಪುಷ್ಪ 2: ದಿ ರೂಲ್‌ನಂತಹ ಬ್ಯಾಕ್-ಟು-ಬ್ಯಾಕ್ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪ್ರಸ್ತುತ ಅವರ ಮುಂಬರುವ ಚಲನಚಿತ್ರ ಸಿಕಂದರ್ ಶೂಟಿಂಗ್‌ಗಾಗಿ ಸಮಯ ಕೊಡುತ್ತಿದ್ದಾರೆ. ಆದರೆ, ಇತ್ತೀಚಿಗೆ ಅವರು ಜಿಮ್‌ನಲ್ಲಿ ಗಾಯಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಈ ಕಾರಣದಿಂದ ಶೂಟಿಂಗ್‌ಗೆ ನಿಗದಿತ ಸಮಯಕ್ಕೆ ತೆರಳಲು ಆಗದೆ ತಾತ್ಕಾಲಿಕ ವಿರಾಮ ತೆಗೆದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಬಗ್ಗೆ ಬಲ್ಲ ಮೂಲಗಳು ಈ ಮಾಹಿತಿ ನೀಡಿವೆ.
ಜಿಮ್‌ನಲ್ಲಿ ಗಾಯಗೊಂಡ ರಶ್ಮಿಕಾ
ರಶ್ಮಿಕಾ ಇತ್ತೀಚೆಗೆ ಜಿಮ್‌ನಲ್ಲಿ ಗಾಯಗೊಂಡಿದ್ದಾರೆ. ಆ ಕಾರಣದಿಂದ ಅವರಿಗೆ ಶೂಟಿಂಗ್‌ಗೆ ಹೋಗಲು ಸಾಧ್ಯವಾಗುತ್ತಿಲ್ಲ. ವಿಶ್ರಾಂತಿ ಪಡೆಯುವ ಮೂಲಕ ಚೇತರಿಸಿಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಅವರ ಮುಂಬರುವ ಸಿನಿಮಾದ ಚಿತ್ರೀಕರಣ ಮಾಡಲು ಸಾಧ್ಯವಾಗುತ್ತಿಲ್ಲ. ಅವರು ವಿರಾಮ ತೆಗೆದುಕೊಂಡು ಶೀಘ್ರದಲ್ಲೇ ಮತ್ತೆ ಚೇತರಿಸಿಕೊಂಡು ಚಿತ್ರೀಕರಣಕ್ಕೆ ಮರಳಲಿದ್ದಾರೆ ಎನ್ನಲಾಗಿದೆ. ಈಗ ಮೊದಲಿಗಿಂತ ಅವರು ಸುಧಾರಿಸಿಕೊಂಡಿದ್ದಾರೆ. ಶೂಟಿಂಗ್ ಸೆಟ್‌ಗೆ ಮರಳಲಿದ್ದಾರೆ. ಆದರೆ, ಅವರು ಗಾಯಗೊಂಡಿದ್ದಾರೆ ಎಂಬ ವಿಷಯ ಕೇಳಿ ಅಭಿಮಾನಿಗಳಿಗೆ ಆತಂಕವಾಗಿದೆ. ಹೆಚ್ಚೇನೂ ಆತಂಕ ಪಡುವ ಅವಶ್ಯಕತೆ ಇಲ್ಲ. ಶೀಘ್ರದಲ್ಲಿ ಅವರು ಶೂಟಿಂಗ್‌ಗೆ ಮರಳಲಿದ್ದಾರೆ.
ರಶ್ಮಿಕಾ ಇತ್ತೀಚಿನವರೆಗೂ ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಆದರೆ ಗಾಯವಾದ ಕಾರಣ ಸ್ವಲ್ಪ ದಿನ ವಿಳಂಬವಾಗಿದೆ. ರಶ್ಮಿಕಾ ಮಂದಣ್ಣ ಪ್ರಸ್ತುತ ಪುಷ್ಪ 2: ದಿ ರೂಲ್‌ನಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ತಮ್ಮ ಅಭಿನಯಕ್ಕಾಗಿ ಮೆಚ್ಚುಗೆಯ ಸುರಿಮಳೆಯನ್ನೇ ಪಡೆಯುತ್ತಿದ್ದಾರೆ. ಅಲ್ಲು ಅರ್ಜುನ್ ಜತೆಯಾಗಿ ಅವರು ಮಾಡಿದ ಈ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ಎಲ್ಲೆಡೆ ಸದ್ದು ಮಾಡುತ್ತಿದೆ.
ರಶ್ಮಿಕಾ ಬಗ್ಗೆ ಅಭಿಮಾನಿಗಳ ಕಾಳಜಿ
ಶ್ರೀವಲ್ಲಿಯಾಗಿ ಕಾಣಿಸಿಕೊಂಡ ರಶ್ಮಿಕಾರನ್ನು ಅಭಿಮಾನಿಗಳು ಮನಸಾರೆ ಮೆಚ್ಚಿಕೊಂಡು ಪ್ರೀತಿ ತೋರಿದ್ದಾರೆ. ಹಾಗೆಯೇ ಅವರು ಇನ್ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡರೂ ಅವರಿಗೆ ಅಭಿಮಾನಿಗಳು ನೀಡುವ ಪ್ರೀತಿ ಇದೇ ರೀತಿ ಇರಲಿದೆ. ಇದೇ ಕಾರಣಕ್ಕೆ ಮತ್ತವರ ಅಭಿನಯಕ್ಕೆ ಸಿನಿಮಾ ಅವಕಾಶಗಳೂ ಅವರನ್ನು ಕೈ ಬೀಸಿ ಕರೆಯುತ್ತಿದೆ. ಸಿಕಂದರ್ ಸಿನಿಮಾದಲ್ಲಿ ರಶ್ಮಿಕಾ ಯಾವ ರೀತಿ ಕಾಣಿಸಿಕೊಳ್ಳಲಿದ್ಧಾರೆ ಎಂಬ ಕುತೂಹಲ ಎಲ್ಲರಲ್ಲೂ ಹೆಚ್ಚಿದೆ.
ಸಿಕಂದರ್ ಸಿನಿಮಾ ಬಗ್ಗೆ
ಸಿಕಂದರ್ ಸಿನಿಮಾವನ್ನು ಎಆರ್ ಮುರುಗದಾಸ್ ನಿರ್ದೇಶಿಸಿದ್ದಾರೆ ಮತ್ತು ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣ ಮಾಡಿದ್ಧಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರು ಕಾಜಲ್ ಅಗರ್ವಾಲ್, ರಶ್ಮಿಕಾ, ಸತ್ಯರಾಜ್, ಶರ್ಮಾನ್ ಜೋಶಿ ಮತ್ತು ಪ್ರತೀಕ್ ಬಬ್ಬರ್ ಅಭಿನಯಿಸುತ್ತಿದ್ದಾರೆ. ಇದಾದ ನಂತರ ರಾಹುಲ್ ರವೀಂದ್ರನ್ ನಿರ್ದೇಶನದ ದಿ ಗರ್ಲ್ ಫ್ರೆಂಡ್ ಚಿತ್ರದಲ್ಲಿ ರಶ್ಮಿಕಾ ನಟಿಸಲಿದ್ದಾರೆ. ಚಿತ್ರದ ಟೀಸರ್ ಅನ್ನು ಇತ್ತೀಚೆಗೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ.