Rashmika Mandanna: ಅತಿ ಹೆಚ್ಚು ಟ್ರೋಲ್‌ ಆದ ನಟಿ ಈಗ ನ್ಯಾಷನಲ್ ಕ್ರಶ್‌; ಹೇಗಿತ್ತು ನೋಡಿ ರಶ್ಮಿಕಾ ಮಂದಣ್ಣ ಸಿನಿ ಜರ್ನಿ, ಮುದ್ದು ಚೆಲುವೆ
ಕನ್ನಡ ಸುದ್ದಿ  /  ಮನರಂಜನೆ  /  Rashmika Mandanna: ಅತಿ ಹೆಚ್ಚು ಟ್ರೋಲ್‌ ಆದ ನಟಿ ಈಗ ನ್ಯಾಷನಲ್ ಕ್ರಶ್‌; ಹೇಗಿತ್ತು ನೋಡಿ ರಶ್ಮಿಕಾ ಮಂದಣ್ಣ ಸಿನಿ ಜರ್ನಿ, ಮುದ್ದು ಚೆಲುವೆ

Rashmika Mandanna: ಅತಿ ಹೆಚ್ಚು ಟ್ರೋಲ್‌ ಆದ ನಟಿ ಈಗ ನ್ಯಾಷನಲ್ ಕ್ರಶ್‌; ಹೇಗಿತ್ತು ನೋಡಿ ರಶ್ಮಿಕಾ ಮಂದಣ್ಣ ಸಿನಿ ಜರ್ನಿ, ಮುದ್ದು ಚೆಲುವೆ

ರಶ್ಮಿಕಾ ಮಂದಣ್ಣ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಆದರೆ ಅಷ್ಟೇ ಟ್ರೋಲ್ ಕೂಡ ಆಗಿದ್ದಾರೆ. ಕಿರಿಕರ್ ಪಾರ್ಟಿಯಲ್ಲಿ ಅಭಿನಯಿಸಿದಾಗಿನಿಂದ ಇಲ್ಲಿಯವರೆಗೆ ರಶ್ಮಿಕಾ ಅಭಿನಯಿಸಿದ ಸಿನಿಮಾಗಳಿಂದ ಫೇಮಸ್ ಆಗಿದ್ದಾರೆ ನ್ಯಾಷನಲ್ ಕ್ರಶ್‌ ಎಂಬ ಬಿರುದನ್ನು ಪಡೆದಿದ್ದಾರೆ.

ಅತಿ ಹೆಚ್ಚು ಟ್ರೋಲ್‌ ಆದ ನಟಿ ಈಗ 'ನ್ಯಾಷನಲ್ ಕ್ರಶ್‌' ರಶ್ಮಿಕಾ ಮಂದಣ್ಣ
ಅತಿ ಹೆಚ್ಚು ಟ್ರೋಲ್‌ ಆದ ನಟಿ ಈಗ 'ನ್ಯಾಷನಲ್ ಕ್ರಶ್‌' ರಶ್ಮಿಕಾ ಮಂದಣ್ಣ

ಮನರಂಜನಾ ಉದ್ಯಮದಲ್ಲಿ ರಶ್ಮಿಕಾ ಮಂದಣ್ಣ ಅವರ ಬೆಳವಣಿಗೆಯು ತುಂಬಾ ಭಿನ್ನವಾಗಿದೆ. ಈ ಹಿಂದೆ ಸಾಕಷ್ಟು ಟ್ರೋಲ್ ಆಗಿದ್ದ ರಶ್ಮಿಕಾ ಮಂದಣ್ಣ ನಂತರದ ದಿನಗಳಲ್ಲಿ ನ್ಯಾಷನಲ್ ಕ್ರಶ್‌ ಆಗಿ ಬದಲಾದರು. ಸಾಕಷ್ಟು ಜನರು ರಶ್ಮಿಕಾ ಅವರನ್ನು ಇಷ್ಟಪಡಲು ಆರಂಭಿಸಿದರು. ಗಮನಾರ್ಹವಾದ ಟೀಕೆಗಳನ್ನು ಅವರು ತಮ್ಮ ಆರಂಭಿಕ ದಿನಗಳಲ್ಲಿ ಅನುಭವಿಸಿದ್ದಾರೆ. ಅದೆಲ್ಲವನ್ನು ಜಯಿಸಿದ್ದಾರೆ. ನಿರಂತರ ಸಾಮಾಜಿಕ ಮಾಧ್ಯಮಗಳ ಟ್ರೋಲ್‌ಗೆ ಒಂದು ವಿಷಯ ವಸ್ತುವಾಗಿ ರಶ್ಮಿಕಾ ಅವರು ನಾನಾ ರೀತಿಯ ಕಾಮೆಂಟ್‌ಗಳನ್ನು ಪಡೆದುಕೊಂಡಿದ್ದರು. ಈಗಲೂ ಕೆಲವೊಮ್ಮೆ ಟ್ರೋಲ್ ಆಗುತ್ತಾರೆ.

ಕನ್ನಡ ಸಿನಿಮಾದಿಂದಲೇ ತಮ್ಮ ವೃತ್ತಿಯನ್ನು ಆರಂಭಿಸಿ ಈಗ ಪರಭಾಷೆಗಳಲ್ಲೂ ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡು ಮಿಂಚುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರ ವೃತ್ತಿಜೀವನವು ಏರಿಳಿತ ಕಾಣುವುದಕ್ಕಿಂತ ಹೆಚ್ಚಾಗಿ ಉನ್ನತಿಯನ್ನೇ ಕಂಡಿದೆ. ಒಂದಾದ ಮೇಲೊಂದು ಸಿನಿಮಾಗಳ ಆಫರ್ ಅವರು ಪಡೆದುಕೊಂಡಿದ್ದಾರೆ.

ಜನರು ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಅವರನ್ನು ನೋಡಲು ತುಂಬಾ ಇಷ್ಟಪಡುತ್ತಾರೆ. ಅಪಾರ ಅಭಿಮಾನಿಗಳನ್ನು ಈಗ ರಶ್ಮಿಕಾ ಹೊಂದಿದ್ದಾರೆ. ಚಿತ್ರದ ಪ್ರೀ-ರಿಲೀಸ್ ಈವೆಂಟ್‌ಗಳಲ್ಲಿ, ನ್ಯಾಷನಲ್ ಕ್ರಶ್ ಆಗಿರುವ ಕಾರಣ ಅವರಿಗೆ ರಶ್ಮಿಕಾ ಬದಲು ಕ್ರುಶ್ಮಿಕಾ ಎಂದು ಕರೆದರೆ ಇನ್ನಷ್ಟು ಚೆನ್ನಾಗಿರುತ್ತದೆ ಎಂದು ಹೇಳಿದ್ದಾರೆ. ಆದರೆ ಈ ಹಿಂದೆ ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದು ಹೇಳಿದ ಕಾರಣಕ್ಕಾಗಿ ಅವರೊಮ್ಮೆ ಟ್ರೋಲ್ ಆಗಿದ್ದರು. ಪುಷ್ಪ 2 ಬಿಡುಗಡೆಯ ದಿನದಂದು ಅಲ್ಲು ಅರ್ಜುನ್ ಕೂಡ ತುಂಬಾ ಪ್ರೀತಿಯಿಂದ ಮಾತನಾಡಿದ್ಧಾರೆ. ಮೈ ಡಿಯರ್ ಶ್ರೀವಲ್ಲಿ ಎಂದು ಸಂಬೋಧಿಸಿದ್ದಾರೆ.

ಹೆಣ್ಣು ಮಕ್ಕಳು ಈ ರೀತಿ ಇರಬೇಕು ಎಂದು ಹೇಳಿದ್ದಾರೆ. ರಶ್ಮಿಕಾ ಶೂಟಿಂಗ್‌ ಸೆಟ್‌ನಲ್ಲಿ ಇದ್ದರೆ ಅಲ್ಲಿನ ವಾತಾವರಣವೇ ತುಂಬಾ ಪಾಸಿಟಿವ್ ಆಗಿ ಇರ್ತಾ ಇತ್ತು ಎಂದು ಅವರು ಹೇಳಿ ಹೊಗಳಿದ್ದಾರೆ. ಆದರೆ ಅಷ್ಟೇ ಟ್ರೋಲ್ ಕೂಡ ಆಗಿದ್ದಾರೆ. ಅನಿಮಲ್ ಸಿನಿಮಾದಲ್ಲಿ ನಟಿಸಿದ ಬಳಿಕ ಪ್ಯಾನ್-ಇಂಡಿಯಾ ಸ್ಟಾರ್ ಮತ್ತು ನ್ಯಾಷನಲ್ ಕ್ರಶ್ ಆದ ರಶ್ಮಿಕಾ ಚಿಕನ್ ಜಾಹಿರಾತೊಂದರಲ್ಲಿ ಕಾಣಿಸಿಕೊಂಡಿದ್ದರು, ಆದರೆ ಈ ಹಿಂದೆ ಅವರು ತಾನು ಸಸ್ಯಾಹಾರಿ ಎಂದು ಹೇಳಿಕೊಂಡಿದ್ದರು.

ಕಿರಿಕ್ ಪಾರ್ಟಿ 2016

ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಾನ್ವಿ ಜೋಸೆಪ್‌ ಪಾತ್ರದಲ್ಲಿ ನಟಿಸಿದ ನಂತರ ರಾತ್ರೋರಾತ್ರಿ ಸ್ಟಾರ್‌ಡಮ್‌ಗೆ ಕಾರಣವಾದರು. ಆದರೆ ನಂತರದಲ್ಲಿ ಸಾಕಷ್ಟು ಟ್ರೋಲ್‌ಗೆ ಒಳಪಟ್ಟರು, ರಕ್ಷಿತ್ ಶೆಟ್ಟಿ ವಿಚಾರವಾಗಿಯೂ ಟ್ರೋಲ್ ಆದರು. 2016ರಿಂದ ಇಲ್ಲಿಯವರೆಗೆ ಅವರು ಸಾಕಷ್ಟು ಏರಿಳಿತ ಕಂಡರೂ ಸಿನಿಮಾಗಳಲ್ಲಿ ಮಾತ್ರ ಹಿಟ್‌ ಪ್ರದರ್ಶನ ನೀಡಿದ್ದಾರೆ.

ಪುನೀತ್‌ ರಾಜ್‌ಕುಮಾರ್ ಅವರ ಜತೆ ಅಂಜನಿ ಪುತ್ರ (2017) ಗಣೇಶ್ ಜತೆ ಚಮಕ್ (2017) ನಾಗ ಶೌರ್ಯ ಜತೆ ಗೀತಾ ಗೋವಿಂದಂ (2018) ವಿಜಯ್ ದೇವರಕೊಂಡ ಜತೆ ಅನಿಮಲ್. ಪುಷ್ಪ ಹೀಗೆ ಸಾಕಷ್ಟು ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ.

Whats_app_banner