Raveena Daughter Bollywood Entry: ಮಗಳನ್ನು ಬಾಲಿವುಡ್‌ಗೆ ಕರೆ ತರ್ತಿದ್ದಾರಂತೆ ಕೆಜಿಎಫ್-2 ನಟಿ..ಡೈರೆಕ್ಟರ್, ಲೀಡ್ ಆಕ್ಟರ್ ಯಾರು?
ರಾಶಾ ತದಾನಿ, ಯಾವ ಹೀರೋಯಿನ್‌ಗೆ ಕೂಡಾ ಕಡಿಮೆ ಇಲ್ಲ. ರಾಶಾಗೆ ಈಗ 17 ವರ್ಷ ವಯಸ್ಸು, ಕಳೆದ ವರ್ಷವಷ್ಟೇ ಧೀರೂಬಾಯಿ ಅಂಬಾನಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಸೆಕೆಂಡರಿ ಎಜುಕೇಷನ್ ಮುಗಿಸಿದ್ದಾರೆ. ರಾಶಾಗೆ ಸಂಗೀತ ಎಂದರೆ ಬಹಳ ಇಷ್ಟವಂತೆ.
ಬಾಲಿವುಡ್‌ನಲ್ಲಿ ಬಹಳ ಹಿಂದಿನಿಂದಲೂ ನೆಪೋಟಿಸಂ ವಿಚಾರ ಬಹಳ ಸದ್ದು ಮಾಡುತ್ತಿದೆ. ಕೆಲವರು ಸ್ಟಾರ್ ಕಿಡ್‌ಗಳ ಸಿನಿಮಾಗಳನ್ನು ಬಾಯ್ಕಾಟ್ ಮಾಡಿದ್ದಾರೆ. ಈಗಾಗಲೇ ಅನೇಕ ಸ್ಟಾರ್ ಕಿಡ್‌ಗಳು ಬಾಲಿವುಡ್ ಎಂಟ್ರಿ ಕೊಟ್ಟಿದ್ದಾರೆ. ಈ ನಡುವೆ ಮತ್ತೊಬ್ಬ ಸ್ಟಾರ್ ನಟಿಯ ಪುತ್ರಿ ಕೂಡಾ ಬಾಲಿವುಡ್ ಚಿತ್ರರಂಗಕ್ಕೆ ಬರ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.
'ಕೆಜಿಎಫ್' ಖ್ಯಾತಿಯ ರಮಿಕಾ ಸೇನ್, ಬಾಲಿವುಡ್ ಖ್ಯಾತ ನಟಿ ರವೀನಾ ಟಂಡನ್ ಪುತ್ರಿ ರಾಶಾ ತದಾನಿ ಕೂಡಾ ಚಿತ್ರರಂಗಕ್ಕೆ ಬರ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಾಶಾ, ನೋಡಲು ಬಹಳ ಸುಂದರವಾಗಿದ್ದು ಈ ಚೆಲುವೆ ಬಾಲಿವುಡ್‌ಗೆ ಬಂದರೂ ಆಶ್ಚರ್ಯವಿಲ್ಲ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಅಂದ ಹಾಗೆ ನಿರ್ದೇಶಕ ಅಭಿಷೇಕ್ ಕಪೂರ್, ರಾಶಾ ತದಾನಿಯನ್ನು ತಮ್ಮ ಮುಂದಿನ ಸಿನಿಮಾ ಮೂಲಕ ಬಾಲಿವುಡ್‌ಗೆ ಪರಿಚಯ ಮಾಡುತ್ತಿದ್ದಾರಂತೆ. ಈ ಚಿತ್ರದಲ್ಲಿರ ರಾಶಾಗೆ ಜೋಡಿಯಾಗಿ ಅಜಯ್ ದೇವ್ಗನ್ ಸೋದರಳಿಯ ಅಮನ್ ದೇವ್ಗನ್ ನಟಿಸುತ್ತಿದ್ದಾರೆ ಎನ್ನಲಾಗಿದೆ. ಅಜಯ್ ದೇವ್ಗನ್, ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ರಾಶಾ, ಬೆಳ್ಳಿ ತೆರೆ ಮೇಲೆ ಯಾವ ರೀತಿ ಮಿಂಚಲಿದ್ದಾರೆ ಅನ್ನೋದನ್ನು ನೋಡಲು ಬಾಲಿವುಡ್ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ರಾಶಾ ಬಾಲಿವುಡ್ ಎಂಟ್ರಿ ವಿಚಾರವಾಗಿ ರವೀನಾ ಆಗಲೀ, ರಾಶಾ ಆಗಲೀ ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ.
ರವೀನಾ ಟಂಡನ್ ಚಿತ್ರರಂಗದಲ್ಲಿ ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ವಿತರಕ ಅನಿಲ್ ತದಾನಿ ಅವರನ್ನು ಮದುವೆಯಾದರು. ಈ ದಂಪತಿಗೆ ನಾಲ್ವರು ಮಕ್ಕಳು. ಅವರಲ್ಲಿ ಇಬ್ಬರು ದತ್ತು ಮಕ್ಕಳು. ರವೀನಾ ಟಂಡನ್ 1995 ರಲ್ಲಿ ಪೂಜಾ ಹಾಗೂ ಛಾಯಾ ಎಂಬ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದರು. 2005 ರಲ್ಲಿ ಈ ದಂಪತಿಗೆ ಹೆಣ್ಣು ಮಗು ಹಾಗೂ 2008 ರಲ್ಲಿ ಗಂಡು ಮಗು ಜನಿಸಿದರು. ತಮ್ಮ ಪುತ್ರಿ ರಾಶಾ ಜೊತೆಗಿನ ಅನೇಕ ಫೋಟೋ, ರೀಲ್ಸ್ ವಿಡಿಯೋಗಳನ್ನು ರವೀನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಾಶಾ ತದಾನಿ, ಯಾವ ಹೀರೋಯಿನ್‌ಗೆ ಕೂಡಾ ಕಡಿಮೆ ಇಲ್ಲ. ರಾಶಾಗೆ ಈಗ 17 ವರ್ಷ ವಯಸ್ಸು, ಕಳೆದ ವರ್ಷವಷ್ಟೇ ಧೀರೂಬಾಯಿ ಅಂಬಾನಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಸೆಕೆಂಡರಿ ಎಜುಕೇಷನ್ ಮುಗಿಸಿದ್ದಾರೆ. ರಾಶಾಗೆ ಸಂಗೀತ ಎಂದರೆ ಬಹಳ ಇಷ್ಟವಂತೆ. ಡ್ಯಾನ್ಸ್, ಥಿಯೇಟರ್ ಆರ್ಟಿಸ್ಟ್ ಆಗಿ ಕೂಡಾ ಗುರುತಿಸಿಕೊಂಡಿರುವ ರಾಶಾ ತದಾನಿ, ಮಾರ್ಷಲ್ ಆರ್ಟ್ಸ್‌ನಲ್ಲಿ ಬ್ಲಾಕ್ ಬೆಲ್ಟ್ ಕೂಡಾ ಪಡೆದಿದ್ದಾರೆ.
ಪಂಜಾಬ್ ಕುಟುಂಬಕ್ಕೆ ಸೇರಿದ ರವೀನಾ ಟಂಡನ್ 1991 ರಲ್ಲಿ 'ಪತ್ತರ್ ಕೆ ಫೂಲ್' ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಕ್ಷತ್ರಿಯ, ದಿಲ್ ವಾಲೇ, ಅಂಜಾದ್ ಅಪ್ನಾ ಅಪ್ನಾ, ಮೊಹರ, ರಕ್ಷಕ್, ಆಂಟಿ ನಂ 1, ದುಲ್ಹಾಯ್ ರಾಜಾ, ಅನಾರಿ ನಂ 1 ಸೇರಿ ಈ ಚೆಲುವೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 1999ರಲ್ಲಿ ಮೊದಲ ಬಾರಿಗೆ ಕನ್ನಡಕ್ಕೆ ಬಂದ ರವೀನಾ, ಉಪ್ಪಿ ಜೊತೆ 'ಉಪೇಂದ್ರ' ಸಿನಿಮಾದಲ್ಲಿ ನಟಿಸಿದ್ದರು. ಮಸ್ತ್ ಮಸ್ತ್ ಹುಡುಗಿ ಎಂದು ರಿಯಲ್ ಸ್ಟಾರ್ ಜೊತೆ ಕುಣಿದಿದ್ದರು. ಇದರ ನಂತರ ಬಹಳ ವರ್ಷಗಳ ನಂತರ ಕಳೆದ ವರ್ಷ ತೆರೆ ಕಂಡಿದ್ದ 'ಕೆಜಿಎಫ್ 2' ಚಿತ್ರದಲ್ಲಿ ನಟಿಸಿದ್ದರು. ಸದ್ಯಕ್ಕೆ ರವೀನಾ 'ಗುಡ್‌ಚಡಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ.