Ravichandran: ಆ ಹೀರೋಯಿನ್​​ಗೆ ಎಲ್ಲಾ ಸೀರೆಗಳ ಡಿಸೈನ್ ಮಾಡಿದ್ದು ನಾನೇ ಎಂದ ಕ್ರೇಜಿಸ್ಟಾರ್​​​..ಯಾರು ಆ ನಟಿ...?
ಕನ್ನಡ ಸುದ್ದಿ  /  ಮನರಂಜನೆ  /  Ravichandran: ಆ ಹೀರೋಯಿನ್​​ಗೆ ಎಲ್ಲಾ ಸೀರೆಗಳ ಡಿಸೈನ್ ಮಾಡಿದ್ದು ನಾನೇ ಎಂದ ಕ್ರೇಜಿಸ್ಟಾರ್​​​..ಯಾರು ಆ ನಟಿ...?

Ravichandran: ಆ ಹೀರೋಯಿನ್​​ಗೆ ಎಲ್ಲಾ ಸೀರೆಗಳ ಡಿಸೈನ್ ಮಾಡಿದ್ದು ನಾನೇ ಎಂದ ಕ್ರೇಜಿಸ್ಟಾರ್​​​..ಯಾರು ಆ ನಟಿ...?

ರವಿಚಂದ್ರನ್, ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕ, ನಿರ್ಮಾಪಕ, ಸಾಹಿತಿ, ಸಂಗೀತ ನಿರ್ದೇಶಕನಾಗಿ ಕೂಡಾ ಗುರುತಿಸಿಕೊಂಡಿದ್ಧಾರೆ. ಜೊತೆಗೆ ಈಗ ರವಿ ಬೋಪಣ್ಣ ಚಿತ್ರದಲ್ಲಿ ಅವರು ನಾಯಕಿಯ ಸೀರೆಗಳಿಗೂ ವಿನ್ಯಾಸ ಮಾಡಿದ್ದಾರಂತೆ. ಇತ್ತೀಚೆಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರವಿಚಂದ್ರನ್ ಈ ವಿಚಾರ ಹೇಳಿಕೊಂಡಿದ್ದಾರೆ.

<p>ಕ್ರೇಜಿಸ್ಟಾರ್ ರವಿಚಂದ್ರನ್</p>
ಕ್ರೇಜಿಸ್ಟಾರ್ ರವಿಚಂದ್ರನ್ (Ravichandran biggest fans club)

ಕ್ರೇಜಿ ಸ್ಟಾರ್​ ರವಿಚಂದ್ರನ್ ಅಭಿನಯದ 'ರವಿ ಬೋಪಣ್ಣ' ಸಿನಿಮಾ ಶುಕ್ರವಾರ ತೆರೆ ಕಂಡಿದೆ. ಚಿತ್ರದಲ್ಲಿ ರವಿಚಂದ್ರನ್ ನಿವೃತ್ತ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಪ್ರೇಮಿಗಳು ರವಿ ಬೋಪ್ಪಣ್ಣನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರವನ್ನು ರವಿಚಂದ್ರನ್ ನಿರ್ಮಿಸಿ, ನಿರ್ದೇಶನ ಕೂಡಾ ಮಾಡಿದ್ದಾರೆ.

ಇನ್ನು ರವಿಚಂದ್ರನ್ ತಮ್ಮ ಪ್ರತಿ ಸಿನಿಮಾದಲ್ಲೂ ಏನಾದರೂ ವಿಶೇಷತೆಗೆ ಆದ್ಯತೆ ನೀಡುತ್ತಾರೆ. ಅವರೇ ಹೇಳುವ ಪ್ರಕಾರ ಅವರ ಚಿತ್ರದಲ್ಲಿ ಪ್ರತಿ ಪಾತ್ರಕ್ಕೂ ಪ್ರಾಮುಖ್ಯತೆ ಇರುತ್ತದೆ. ಅದು ಯಾವ ಪಾತ್ರ ಎನ್ನುವುದು ಮುಖ್ಯವಲ್ಲ. ಅದು ಚಿಕ್ಕ ಪಾತ್ರವಾದರೂ ಚೊಕ್ಕವಾಗಿರಬೇಕು ಎಂಬುದು ಕ್ರೇಜಿಸ್ಟಾರ್ ಪಾಲಿಸಿ. ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡ ರವಿ ಬೋಪಣ್ಣ ತನ್ನ ಜೀವನದಲ್ಲಿ ಎದುರಾಗುವ ಸಮಸ್ಯೆಯನ್ನು ಯಾವ ರೀತಿ ಎದುರಿಸುತ್ತಾನೆ..? ಆ ಸಮಸ್ಯೆಯನ್ನು ಯಾವ ರೀತಿ ಭೇದಿಸುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ.

ಇನ್ನು ರವಿಚಂದ್ರನ್, ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕ, ನಿರ್ಮಾಪಕ, ಸಾಹಿತಿ, ಸಂಗೀತ ನಿರ್ದೇಶಕನಾಗಿ ಕೂಡಾ ಗುರುತಿಸಿಕೊಂಡಿದ್ಧಾರೆ. ಜೊತೆಗೆ ಈಗ ರವಿ ಬೋಪಣ್ಣ ಚಿತ್ರದಲ್ಲಿ ಅವರು ನಾಯಕಿಯ ಸೀರೆಗಳಿಗೂ ವಿನ್ಯಾಸ ಮಾಡಿದ್ದಾರಂತೆ. ಇತ್ತೀಚೆಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರವಿಚಂದ್ರನ್ ಈ ವಿಚಾರ ಹೇಳಿಕೊಂಡಿದ್ದಾರೆ. ''ರವಿ ಬೋಪಣ್ಣ ಚಿತ್ರದಲ್ಲಿ ಒಂದೇ ಒಂದು ಸೀರೆ ಬಿಟ್ಟರೆ, ರಾಧಿಕಾ ಕುಮಾರಸ್ವಾಮಿ ಧರಿಸಿರುವ ಎಲ್ಲಾ ಸೀರೆಗಳನ್ನು ನಾನೇ ಡಿಸೈನ್ ಮಾಡಿದ್ದು. ಹಾಗೇ ನನ್ನ ಸಿನಿಮಾದಲ್ಲಿ ಯಾವ ಹೆಣ್ಣು ಮಕ್ಕಳು ಬಂದರೂ ಚೆನ್ನಾಗಿ ಕಾಣುವಂತೆ ಮಾಡುತ್ತೇನೆ. ಈ ಸಿನಿಮಾದಲ್ಲಿ ಈ ದೃಶ್ಯ ಇದೆ, ಇಂತದ್ದೇ ಸೀರೆ ಉಡಬೇಕು, ಇಂತದ್ದೇ ಡ್ರೆಸ್ ಹಾಕಬೇಕು ಎಂದು ನಾನು ಕಂಡಿಷನ್ ಮಾಡುತ್ತೇನೆ, ಅವರಿಗೆ ಒಪ್ಪಿಗೆ ಇರದ ದೃಶ್ಯಗಳನ್ನು ಮಾಡುವುದೇ ಇಲ್ಲ. ಎಲ್ಲರ ಭಾವನೆಗಳಿಗೂ ಬೆಲೆ ಕೊಡುತ್ತೇನೆ'' ಎಂದು ರವಿಚಂದ್ರನ್ ಹೇಳಿದ್ದಾರೆ.

ಪುತ್ರನ ಲಗ್ನಪತ್ರಿಕೆಯಲ್ಲೂ ರವಿಚಂದ್ರನ್‌ ಕಲಾ ಕುಸುರಿ

ಆಗಸ್ಟ್‌ 22ರಂದು ರವಿಚಂದ್ರನ್‌ ಮೊದಲ ಪುತ್ರ ಮನುರಂಜನ್ ಮದುವೆ ನಡೆಯುತ್ತಿದೆ. ಮದುವೆ ಆಮಂತ್ರಣ ಪತ್ರಿಕೆಯೂ ಪ್ರಿಂಟ್‌ ಆಗಿದ್ದು ಈಗಾಗಲೇ ರವಿಮಾಮ ಎಲ್ಲರಿಗೂ ಲಗ್ನ ಪತ್ರಿಕೆ ಹಂಚುತ್ತಿದ್ದಾರೆ. ಸಿನಿಮಾದಲ್ಲಿ ಮಾತ್ರವಲ್ಲ, ಕ್ರೇಜಿಸ್ಟಾರ್​​​​​​​​ ಇಲ್ಲಿಯೂ ತಮ್ಮ ಕಲಾ ಕುಸುರಿಯನ್ನು ಪ್ರದರ್ಶಿಸಿದ್ದಾರೆ. 2019 ರಲ್ಲಿ ಮಗಳ ಮದುವೆಯ ಲಗ್ನಪತ್ರಿಕೆಯನ್ನು ವಿಶೇಷವಾಗಿ ರೂಪಿಸಿದ್ದ ರವಿಚಂದ್ರನ್‌ ಇದೀಗ ಪುತ್ರ ಮನುರಂಜನ್‌ ಮದುವೆಗೂ ಅಷ್ಟೇ ವಿಶೇಷವಾದ ಲಗ್ನಪತ್ರಿಕೆಯನ್ನು ಸಿದ್ಧಪಡಿಸಿದ್ದಾರೆ. ಕಡು ಹಸಿರು ವರ್ಣದ ಕಾರ್ಡ್‌ನಲ್ಲಿ ರವಿಚಂದ್ರನ್‌ ಅವರ ಫೋಟೋ ಸಹ ಇದೆ. ಲವ್​​ ಸಿಂಬಲ್​​​​​​​​​​​ ಒಳಗಡೆ, ವಧು ವರರ ಪೂರ್ಣ ಮಾಹಿತಿ ಸೇರಿ ಮದುವೆಯ ಮುಹೂರ್ತ ಮತ್ತು ಮದುವೆ ನಡೆಯುವ ಸ್ಥಳದ ವಿವರ ನೀಡಲಾಗಿದೆ.

ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ಆಗಸ್ಟ್‌ 22ರಂದು ಅದ್ದೂರಿ ಮದುವೆ ಕಾರ್ಯ ನೆರವೇರಲಿದೆ. ಮದುವೆ ಬಳಿಕ ಈ ಜೋಡಿಯ ಆರತಕ್ಷತೆ ಕಾರ್ಯಕಮವನ್ನು ದೇವನಹಳ್ಳಿ ಬಳಿಯ ಜೆಡಬ್ಲೂ ಮ್ಯಾರಿಯೆಟ್‌ನ ದರ್ಬಾರ್‌ ಹಾಲ್‌ನ ಕನ್ವೆನ್ಷನ್‌ ಸೆಂಟರ್‌ನಲ್ಲಿ ಏರ್ಪಡಿಸಲಾಗಿದೆ.

Whats_app_banner