AGT finale: ಅಮೆರಿಕ ಗಾಟ್ ಟ್ಯಾಲೆಂಟ್ ಸೆಶನ್ 18 ಫೈನಲ್ ವಿಜೇತರ ಘೋಷಣೆ, ರಕ್ಷಿತ್ ಶೆಟ್ಟಿ 777 ಚಾರ್ಲಿ ನೆನಪಿಸಿದ ವಿನ್ನರ್ ಪ್ರದರ್ಶನ
America's Got Talent season 18: ಅಮೆರಿಕ ಗಾಟ್ ಟ್ಯಾಲೆಂಟ್ ಸೆಶನ್ 18ರ ವಿಜೇತರ ಘೋಷಣೆಯಾಗಿದೆ. ಈ ಸ್ಪರ್ಧೆಯಲ್ಲಿ ಗೆದ್ದವರು ಯಾರು, ಎಷ್ಟು ಮೊತ್ತ ಗೆದ್ದರು ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಇಲ್ಲಿದೆ. ಇಲ್ಲಿ ಗೆಲುವು ಪಡೆದ ವ್ಯಕ್ತಿಯ ಪ್ರದರ್ಶನವು ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿಯ 777 ಚಾರ್ಲಿ ಸಿನಿಮಾವನ್ನು ನಿಮಗೆ ನೆನಪಿಸಿದರೆ ಅಚ್ಚರಿಯಿಲ್ಲ.

ಬೆಂಗಳೂರು: ಅಮೆರಿಕ ಗಾಟ್ ಟ್ಯಾಲೆಂಟ್ ಸೆಶನ್ 18 (America's Got Talent season 18)ನಿನ್ನೆ ಅಂದರೆ ಸೆಪ್ಟೆಂಬರ್ 27ರಂದು ಅಂತಿಮ ಹಂತ ತಲುಪಿದೆ. ಈ ಪ್ರತಿಭಾನ್ವಿತರ ಅನ್ವೇಷಣೆಯ ರಿಯಾಲಿಟಿ ಶೋದಲ್ಲಿ ನಿನ್ನೆ ವಿಜೇತರ ಘೋಷಣೆಯಾಗಿದೆ. 2006ರಿಂದ ಆರಂಭವಾದ ಈ ರಿಯಾಲಿಟಿ ಶೋ ಜಗತ್ತಿನ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು. ಅಂತಿಮ ಹಣಾಹಣಿಯಲ್ಲಿ ಅಗ್ರ 11 ಸ್ಪರ್ಧಿಗಳ ಪ್ರದರ್ಶನ ರೋಮಾಂಚನ ಉಂಟು ಮಾಡುವಂತೆ ಇತ್ತು. ಇದರಲ್ಲಿ ಅಂತಿಮವಾಗಿ ಗೆದ್ದವರಾರು? ಇದಕ್ಕೂ ಕನ್ನಡ ನಟ ರಕ್ಷಿತ್ ಶೆಟ್ಟಿಯ ಚಾರ್ಲಿಗೂ ಏನು ನಂಟು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು.
ಟ್ರೆಂಡಿಂಗ್ ಸುದ್ದಿ
ಅಮೆರಿಕ ಗಾಟ್ ಟ್ಯಾಲೆಂಟ್ ವಿನ್ನರ್
ಅಮೆರಿಕ ಗಾಟ್ ಟ್ಯಾಲೆಂಟ್ 18 ನಲ್ಲಿ ಗೆಲುವು ಪಡೆದದ್ದು ಯಾರು (America's Got Talent season 18 Winner) ಎಂಬ ಪ್ರಶ್ನೆಗೆ ಉತ್ತರ ದೊರಕಿದೆ. ಈ ರಿಯಾಲಿಟಿ ಶೋನಲ್ಲಿ ಆಡ್ರಿಯನ್ ಸ್ಟೊಯಿಕಾ ಮತ್ತು ಹರಿಕೇನ್ ವಿಜೇತರಾದರು.
ಅಮೆರಿಕ ಗಾಟ್ ಟ್ಯಾಲೆಂಟ್ ಬಹುಮಾನ ಮೊತ್ತ
ಈ ರಿಯಾಲಿಟಿ ಶೋನಲ್ಲಿ ಗೆಲುವು ಪಡೆದ ಆಡ್ರಿಯನ್ ಸ್ಟೊಯಿಕಾ ಮತ್ತು ಹರಿಕೇನ್ ಅವರಿಗೆ 1 ದಶಲಕ್ಷ ಡಾಲರ್ ನಗದು ಬಹುಮಾನ ದೊರಕಿದೆ. ಉಳಿದಂತೆ ಲಗ್ಷುರಿ ಹೋಟೆಲ್ ಆತಿಥ್ಯ, ಲಾಸ್ ವೇಜಸ್ ಕ್ಯಾಶಿನೊ ಬಹುಮಾನ ದೊರಕಿದೆ. ಅಂತಿಮ ಪರ್ಫಾಮೆನ್ಸ್‌ನಲ್ಲಿ ಆಡ್ರಿಯನ್ ಸ್ಟೊಯಿಕಾ ಮತ್ತು ಹರಿಕೇನ್ "ಕ್ರೇಜಿ ಲಿಟಲ್ ಥಿಂಗ್ ಕಾಲ್ಡ್ ಲವ್" ಎಂಬ ಪ್ರದರ್ಶನ ನಡೆಸಿ ನೋಡುಗರ ಮನ ಸೆಳೆದರು.
ರಕ್ಷಿತ್ ಶೆಟ್ಟಿಯ 777 ಚಾರ್ಲಿ ಸಿನಿಮಾ ನೆನಪಿಸಿದ ಪ್ರದರ್ಶನ
ಅದೆಲ್ಲ ಸರಿ, ಈ ರಿಯಾಲಿಟಿ ಶೋಗೂ ರಕ್ಷಿತ್ ಶೆಟ್ಟಿಯ ಸಿನಿಮಾಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಆಡ್ರಿಯನ್ ಸ್ಟೊಯಿಕಾ ಮತ್ತು ಹರಿಕೇನ್ ಪ್ರದರ್ಶನವು ರಕ್ಷಿತ್ ಶೆಟ್ಟಿಯ ಚಾರ್ಲಿ ಸಿನಿಮಾದಲ್ಲಿದ್ದ ಡಾಗ್ ಶೋವನ್ನು ನೆನಪಿಸುವಂತೆ ಇದೆ. ಅಂದರೆ, ಅಲ್ಲಿ ಚಾರ್ಲಿ ಮತ್ತು ರಕ್ಷಿತ್ ಶೆಟ್ಟಿ ಒಡನಾಟವು ನೋಡುಗರ ಮನಸ್ಸಿನಲ್ಲಿ ಯಾವ ಭಾವ ಮೂಡಿಸಿತ್ತೋ ಅಂತಹದ್ದೇ ಭಾವವನ್ನು ಈ ರಿಯಾಲಿಟಿ ಶೋ ನೆನಪಿಸುವಂತೆ ಇತ್ತು.
ಆಡ್ರಿಯನ್ ಸ್ಟೊಯಿಕಾ ಅವರು ಹರಿಕೇನ್ ಹೆಸರಿನ ಶ್ವಾನದ ಜತೆ ಪ್ರದರ್ಶನ ನೀಡಿದರು. ಹರಿಕೇನ್ ಜತೆಗೆ ಇವರು ಈ ರಿಯಾಲಿಟಿ ಶೋನಲ್ಲಿ ನೀಡಿದ ಹಲವು ಪ್ರದರ್ಶನಗಳು ಪ್ರೇಕ್ಷಕರ ಮನಸ್ಸು ಗೆದ್ದಿತ್ತು. ಅಂತಿಮವಾಗಿ ಅವರು ನೀಡಿದ ಪ್ರದರ್ಶನವು ಸ್ಮ್ಯಾಶ್ ಮೌತ್‌ನ "ಐಯಾಮ್ ಎ ಬಿಲೀವರ್" ಮತ್ತು ಸಿಂಡಿ ಲಾಪರ್ ಅವರ "ಗರ್ಲ್ಸ್ ಜಸ್ಟ್ ವಾನ್ನಾ ಹ್ಯಾವ್ ಫನ್" ನಂತಹ ಹಾಡುಗಳ ಜತೆ ಸಂಯೋಜನೆ ಮಾಡಲಾಗಿತ್ತು. ಈ ಕೆಳಗೆ ನೀಡಲಾದ ವಿಡಿಯೋ ನೋಡಿ, ನಿಮಗೆ ಚಾರ್ಲಿ ಸಿನಿಮಾ ನೆನಪಾಗದೆ ಇದ್ದರೆ ಹೇಳಿ.
ಅಮೆರಿಕ ಗಾಟ್ ಟ್ಯಾಲೆಂಟ್ ಎಲಿಮಿನೇಷನ್ ಹಂತ
ಎಲಿಮೇಷನ್ ಹಂತದಲ್ಲಿ ಕೆಲವು ಪ್ರತಿಭಾನ್ವಿತರು ನೀಡಿದ ಪ್ರದರ್ಶನ ಅಮೋಘವಾಗಿತ್ತು. ಈ ಕೆಳಗಿನ ವಿಡಿಯೋ ನೋಡಿ.
ಅಮೆರಿಕ ಗಾಟ್ ಟ್ಯಾಲೆಂಟ್: ಟಾಪ್ ಫೈವ್ ಟ್ಯಾಲೆಂಟ್
ಫೈನಾಲೆ ಹಂತದಲ್ಲಿ ರಾಮಧಾನಿ ಬ್ರದರ್ಸ್, ಪುತ್ರಿ ಅರಿಯಾನಿ, ಮರ್ಮುರೇಶನ್, ಅನ್ನಾ ಡಿಗುಜ್ಮನ್ (ರನ್ನರ್-ಅಪ್), ಮತ್ತು ವಿಜಯಶಾಲಿಯಾದ ಆಡ್ರಿಯನ್ ಸ್ಟೊಯಿಕಾ & ಹರಿಕೇನ್ ಅಮೋಘ ಪ್ರದರ್ಶನ ನೀಡಿದರು.